ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರು ಅಹಂಕಾರಿಗಳು ಎಂದ ಘಜ್ನಿ ನಟ
ಸರ್ಫರೋಶ್, ಲಗಾನ್, ಘಜ್ನಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಖಳನಟ ಪ್ರದೀಪ್ ರಾವತ್ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮುಂಬೈಗಿಂತ ಮೂರು ಒಟ್ಟು ಜಾಸ್ತಿ ದುಡಿಬಹುದು. ಆದರೆ ಅಲ್ಲಿನ ನಿರ್ದೇಶಕರು ದುರಂಕಾರಿಗಳು ಯಾರನ್ನು ತಮ್ಮ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಮುಂಬೈ: ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲದರಲ್ಲೂ ಇತ್ತೀಚೆಗೆ ಉತ್ತರ ಭಾರತ ದಕ್ಷಿಣ ಭಾರತ ಎಂಬ ಬೇಧಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ಈ ಮಧ್ಯೆ ಬಾಲಿವುಡ್ ಖಳನಟರೊಬ್ಬರು ದಕ್ಷಿಣ ಭಾರತದ ನಿರ್ದೇಶಕರ ಬಗ್ಗೆ ಸ್ವಲ್ಪ ರೂಡ್ ಆಗಿ ಮಾತನಾಡಿದ್ದು, ಸಂಚಲನ ಸೃಷ್ಟಿಸಿದ್ದಾರೆ. ಸರ್ಫರೋಶ್, ಲಗಾನ್, ಘಜ್ನಿ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಖಳನಟ ಪ್ರದೀಪ್ ರಾವತ್ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮುಂಬೈಗಿಂತ ಮೂರು ಒಟ್ಟು ಜಾಸ್ತಿ ದುಡಿಬಹುದು. ಆದರೆ ಅಲ್ಲಿನ ನಿರ್ದೇಶಕರು ದುರಂಕಾರಿಗಳು ಯಾರನ್ನು ತಮ್ಮ ಹತ್ತಿರ ಬಿಟ್ಟು ಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.
ಸಿದ್ಧಾರ್ಥ್ ಕಣನ್ ಜೊತೆಗಿನ ಸಂದರ್ಶನವೊಂದರಲ್ಲಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಿದ ತಮ್ಮ ಅನುಭವವನ್ನು ಹೇಳಿಕೊಂಡಿರುವ ಅವರು, ಇಲ್ಲಿನ ನಿರ್ದೇಶಕರ ಬಗ್ಗೆ ಈ ಹೇಳಿಕೆ ನೀಡಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಾಲಿವುಡ್ ನೀಡುವುದಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ನೀಡುತ್ತಾರೆ. ಆದರೆ ಇಲ್ಲಿನ ನಿರ್ದೇಶಕರು ಅಹಂಕಾರಿಗಳು, ಜನರನ್ನು ಸಮೀಪಕ್ಕೆ ಬಿಟ್ಟುಕೊಳ್ಳುವುದಿಲ್ಲ, ಸದಾ ತಮ್ಮ ಸುತ್ತ ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಂದ ಐದು ಅಡಿಯೊಳಗೆ ಅವರು ಯಾರನ್ನು ಬಿಟ್ಟುಕೊಳ್ಳುವುದಿಲ್ಲ ಎಂದು ಪ್ರದೀಪ್ ರಾವತ್ ಹೇಳಿದ್ದಾರೆ. ಪ್ರದೀಪ್ ರಾವತ್ ಅವರು ದಕ್ಷಿಣ ಭಾರತದ ತೆಲುಗು, ತಮಿಳು, ಕನ್ನಡ, ಮಲೆಯಾಳಂ ಸಿನಿಮಾ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಿದ್ದಾರೆ.
ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯೋ ನಟ ತಲೈವಾ ರಜಿನಿಕಾಂತ್ ಆಸ್ತಿ ಮೌಲ್ಯ ಎಷ್ಟು?
ಇಂದಿನ ದಿನಗಳಲ್ಲಿ ಸಿನಿಮಾ ನಟನಟಿಯರಿಗೆ ಮುಂಬೈಗಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಹಣ ಸಿಗುತ್ತದೆ. ಮುಂಬೈನಲ್ಲಿ ನಿಮಗೆ 100 ರೂ ಸಿಕ್ಕರೆ ದಕ್ಷಿಣದಲ್ಲಿ 300 ರೂ ಸಿಗಲಿದೆ. ಒಬ್ಬ ನಟನಿಗೆ ಮುಂಬೈನಲ್ಲಿ 1 ಲಕ್ಷ ಸಿಕ್ಕಿದರೆ ದಕ್ಷಿಣದಲ್ಲಿ ಯಾವುದೇ ಬೇಡಿಕೆ ಇಲ್ಲದೇ ಮೂರು ಲಕ್ಷ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸಂದರ್ಶಕರು ನೀವು ದುರಂಕಾರಿ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೀರಾ ಎಂದು ಕೇಳಿದಾಗ ನಟ ಹೌದು ಎಂದು ಹೇಳಿದ್ದು, ದಕ್ಷಿಣದಲ್ಲಿ ಅನೇಕ ಅಹಂಕಾರಿ ನಿರ್ದೇಶಕರಿದ್ದು, ಅವರು ನಿಮ್ಮನ್ನು 5 ಅಡಿ ದೂರಕ್ಕೂ ಬಿಟ್ಟುಕೊಳ್ಳುವುದಿಲ್ಲ, ಯಾರೂ ಕೂಡ ಅವರ ಬಳಿ ಹೋಗುವುದಕ್ಕೆ ಅವಕಾಶವಿಲ್ಲ ಎಂದು ಪ್ರದೀಪ್ ರಾವತ್ ಹೇಳಿದ್ದಾರೆ.
ಸಂಪ್ರದಾಯ ಪಾಲಿಸೋದ್ರಲ್ಲಿ ಬಾಲಿವುಡ್‌ಗಿಂತ ದಕ್ಷಿಣ ಭಾರತೀಯರೇ ನಟರೇ ಬೆಸ್ಟ್ !
ಹಿಂದೊಮ್ಮೆ ಸಂದರ್ಶನವೊಂದರಲ್ಲಿ ತಾವು ಏಕೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದರು. 'ಅದು ನನ್ನ ಕೈಯಲ್ಲಿ ಇಲ್ಲ, ಲಗಾನ್ ನಂತರ ನಾನು ಘಜಿನಿ ಸಿನಿಮಾದಲ್ಲಿ ನಟಿಸಿದೆ. ಅದು 2010ರಲ್ಲಿ 100 ಕೋಟಿ ಗಳಿಸಿದ ಮೊದಲ ಬಾಲಿವುಡ್ ಸಿನಿಮಾವಾಗಿತ್ತು. ಅದು ತುಂಬಾ ದೊಡ್ಡ ಮಟ್ಟದಲ್ಲಿ ಹಿಟ್ ಆಯ್ತು. ಅದಾದ ನಂತರ ನನಗೆ ಒಳ್ಳೆಯ ಪಾತ್ರಗಳು ಸಿಗಲಿಲ್ಲ, ಅಂತಹ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಿದ ಮೇಲೆ ನನಗೆ ನಾನು ಸಿಕ್ಕಿದ ಪಾತ್ರಗಳನ್ನೆಲ್ಲಾ ಮಾಡಲಾರೆ ಎಂಬ ಯೋಚನೆ ಬಂತು. ಜೊತೆಗೆ ಕುಟುಂಬವನ್ನು ನಡೆಸುವ ಅನಿವಾರ್ಯತೆಯೂ ಇರಲಿಲ್ಲ, ಇದರ ಜೊತೆಗೆ ನನಗೆ ದಕ್ಷಿಣದಲ್ಲಿ ಸಿನಿಮಾಗಳು ಸಿಗಲಾರಂಭಿಸಿದವು. ಅವು ನನಗೆ ಚೆನ್ನಾಗಿ ಹೊಂದಿಕೆ ಆದವು ಎಂದು ಘಜ್ನಿ ನಟ ಹೇಳಿಕೊಂಡಿದ್ದಾರೆ.