ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ತಂದೆಗಿಂತಲೂ ಹೆಚ್ಚು ಬಿಜಿಯಂತೆ. ಅಮ್ಮ ಗೌರಿ ಖಾನ್ ಹೇಳಿದ್ದೇನು?
ಶಾರುಖ್ ಖಾನ್ ಸದ್ಯ ಪಠಾಣ್ ಭರ್ಜರಿ ಯಶಸ್ಸಿನ ಬಳಿಕ ಜವಾನ್ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಪುತ್ರ ಆರ್ಯನ್ ಖಾನ್ ಕುರಿತು ಚರ್ಚೆ ನಡೆಯುತ್ತಿದೆ. ಆರ್ಯನ್ ಖಾನ್ ಎಂದಾಕ್ಷಣ ನೆನಪಾಗುವುದು 2021ರ ಅಂತ್ಯದಿಂದ ಭಾರಿ ಸದ್ದು ಮಾಡಿದ್ದ ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case). ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಬಗ್ಗೆ ಚರ್ಚೆಯಾಗಿದ್ದಕ್ಕೆ ಕಾರಣ, ಅದರಲ್ಲಿ ಸಿಲುಕಿದ್ದು ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಎನ್ನುವುದಕ್ಕೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು. ಅಂತಿಮವಾಗಿ ಅವರು ಅಕ್ಟೋಬರ್ 30 ರಂದು ತಮ್ಮ ತಂದೆಯ ಹುಟ್ಟುಹಬ್ಬದ (Birthday) ಸಮಯದಲ್ಲಿ ಜೈಲಿನಿಂದ ಹೊರಬಂದಿದ್ದರು. ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಶುಕ್ರವಾರ 6 ಸಾವಿರ ಪುಟಗಳ ಚಾರ್ಜ್ ಶೀಟ್ (Chargesheet) ಸಲ್ಲಿಕೆ ಮಾಡಿದ್ದು, 14 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ. ಹಲವರು ಇನ್ನೂ ಕೇಸ್ನಲ್ಲಿ ಒಳಗೇ ಇದ್ದರೆ, ಆರ್ಯನ್ ಖಾನ್ ನಿರಪರಾಧಿ ಎನ್ನುವುದನ್ನು ಸಾಬೀತು ಮಾಡುವಲ್ಲಿ ವಕೀಲರು ಯಶಸ್ವಿಯಾಗಿದ್ದರು.
ಸದ್ಯ ಆರ್ಯನ್ ಖಾನ್ ನಿರ್ದೇಶನದಲ್ಲಿ ತೊಡಗಿದ್ದಾರೆ. ಇವರಿಗೆ ನಟನೆಗಿಂತಲೂ ಹೆಚ್ಚಾಗಿ ನಿರ್ದೇಶನದಲ್ಲಿ ಆಸಕ್ತಿ ಇದೆಯಂತೆ. ನಿರ್ದೇಶನದ ಜೊತೆಜೊತೆಗೆ ಬಿಜಿನೆಸ್ನಲ್ಲಿಯೂ ಬಹಳ ಉತ್ಸುಕರಾಗಿದ್ದಾರೆ. ಬಾಲಿವುಡ್ನಲ್ಲಿ ಅನೇಕ ಸ್ಟಾರ್ ಕಿಡ್ಗಳು ತೆರೆಮೇಲೆ ಮಿಂಚುತ್ತಿದ್ದಾರೆ. ಆದರೆ ಆರ್ಯನ್ ಖಾನ್ ಈ ವಿಚಾರದಲ್ಲಿ ಕೊಂಚ ಭಿನ್ನ. ನಟನೆಗಿಂತಲೂ ಹೆಚ್ಚಾಗಿ ಬೇರೆ ವಿಚಾರಗಳಲ್ಲಿ ಅವರಿಗೆ ಆಸಕ್ತಿ ಇದೆ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಆರ್ಯನ್ ಖಾನ್ ಅವರು ತಮ್ಮ ಚೊಚ್ಚಲ ನಿರ್ದೇಶನವನ್ನು ಮಾಡಲು ಸಿದ್ಧರಾಗಿದ್ದಾರೆ. ಆರ್ಯನ್ ಖಾನ್ ಕೂಡ ಕೆಲವು ತಿಂಗಳ ಹಿಂದೆ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಘೋಷಿಸಿದ್ದರು. ಬರವಣಿಗೆಯ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ರೆಡ್ ಚಿಲ್ಲೀಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಶೀಘ್ರದಲ್ಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವುದಾಗಿ ಆರ್ಯನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
Aryan Khan: ಶಾರುಖ್ ಪುತ್ರನ ಅಸಲಿ ಸ್ವಭಾವ ಬಹಿರಂಗಗೊಳಿಸಿದ ಪಾಲಕ್ ತಿವಾರಿ
ಇದೀಗ ಆರ್ಯನ್ ಖಾನ್ ಎಷ್ಟು ಬಿಜಿ ಎನ್ನುವ ಕುರಿತು ಅವರ ಅಮ್ಮ, ಶಾರುಖ್ ಪತ್ನಿ ಗೌರಿ ಖಾನ್ ಮಾತನಾಡಿದ್ದಾರೆ. ಈಗ ತಂದೆಗಿಂತಲೂ ಮಗನೇ ಹೆಚ್ಚು ಬಿಜಿ ಎಂದಿದ್ದಾರೆ ಗೌರಿ. ಅವರ ಪತ್ನಿ ಗೌರಿ ಖಾನ್ ಅವರು ತಮ್ಮ ಹೊಸ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇಂಟೀರಿಯರ್ ಡಿಸೈನ್ ಕುರಿತು ಗೌರಿ ಖಾನ್ ಬರೆದಿರುವ ಪುಸ್ತಕ ಇದಾಗಿದೆ. ಈ ವೇಳೆ ಅವರು ತಮ್ಮ ಕುಟುಂಬದ ಬಗೆಗಿನ ಒಂದಷ್ಟು ವಿಷಯಗಳ ಕುರಿತು ಮಾತನಾಡಿದ್ದಾರೆ. ಶಾರುಖ್ ಖಾನ್ಗಿಂತಲೂ ಆರ್ಯನ್ ಖಾನ್ ಹೆಚ್ಚು ಬ್ಯುಸಿ ಆಗಿದ್ದಾನೆ. ಆತನಿಂದ ನಮಗೆ ಡೇಟ್ಸ್ (Dates) ಪಡೆಯುವುದೇ ಕಷ್ಟ. ನಮ್ಮ ಬಳಿ ಮಾತನಾಡಲೂ ಆತನಿಗೆ ಪುರುಸೊತ್ತಿಲ್ಲ ಎಂದಿದ್ದಾರೆ ಅಮ್ಮ ಗೌರಿ ಖಾನ್ (Gauri Khan),
ಈ ಕುರಿತು ಇನ್ನಷ್ಟು ಹೇಳಿರುವ ಗೌರಿ ಅವರು, ಈ ಪುಸ್ತಕಕ್ಕೆ ಒಂದು ಫ್ಯಾಮಿಲಿ ಫೋಟೋ (Family Photo) ಬೇಕಿತ್ತು. ಅದನ್ನು ಕ್ಲಿಕ್ಕಿಸುವ ಸಲುವಾಗಿ ಕುಟುಂಬದ ಎಲ್ಲರೂ ಬಿಡುವು ಮಾಡಿಕೊಳ್ಳಬೇಕಿತ್ತು. ಶಾರುಖ್ ಖಾನ್ ಹಲವು ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರೂ ಕೂಡ ಫ್ಯಾಮಿಲಿ ಫೋಟೋಶೂಟ್ಗಾಗಿ ಅವರ ಡೇಟ್ಸ್ ಸುಲಭವಾಗಿ ಸಿಕ್ಕಿದೆ. ಆದರೆ ಆರ್ಯನ್ ಖಾನ್ ಡೇಟ್ಸ್ ಪಡೆಯುವುದು ನನಗೆ ಕಷ್ಟವಾಯಿತು. ಹಾಗಾಗಿ ಶಾರುಖ್ ಖಾನ್ಗಿಂತಲೂ ಆರ್ಯನ್ ಖಾನ್ ಹೆಚ್ಚು ಬ್ಯುಸಿ ಎಂದಿದ್ದಾರೆ ಗೌರಿ.
Aryan Khan ಡ್ರಗ್ಸ್ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್ನಿಭಾಯಿಸಿದ್ದು ಹೇಗೆ?
ಅಂದಹಾಗೆ ಆರ್ಯನ್ ಖಾನ್ ಈಗ ಬಟ್ಟೆ ವ್ಯಾಪಾರ ಆರಂಭಿಸಿದ್ದಾರೆ. ಅಷ್ಟಕ್ಕೂ ಸ್ಟಾರ್ ನಟರು ಮತ್ತು ಜವಳಿ ಉದ್ಯಮ ಹೊಸತೇನಲ್ಲ. ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮುಂತಾದ ಸೆಲೆಬ್ರಿಟಿಗಳು ತಮ್ಮ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ. ಅದಕ್ಕೆ ಆರ್ಯನ್ ಖಾನ್ ಕೂಡ ಸೇರ್ಪಡೆ ಆಗಿದ್ದಾರೆ. ಆರ್ಯನ್ ತಮ್ಮದೇ ಹೊಸ ಬ್ರ್ಯಾಂಡ್ನ ಕಾಸ್ಟ್ಯೂಮ್ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ ಎಂಬ ಬಗ್ಗೆಯೂ ಗೌರಿ ಖಾನ್ ತಿಳಿಸಿದ್ದಾರೆ. ಆರ್ಯನ್ ಖಾನ್ ಅವರು ಮಾರಾಟ ಮಾಡುತ್ತಿರುವ ಬಟ್ಟೆಗಳ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗಿವೆ. ಒಂದು ಜಾಕೆಟ್ನ ಬೆಲೆ 2 ಲಕ್ಷ ರೂಪಾಯಿ. ಟಿ-ಶರ್ಟ್ ಬೆಲೆ 24 ಸಾವಿರ ರೂಪಾಯಿ. ಹಾಗಿದ್ದರೂ ಕೂಡ ಜನರು ಇದನ್ನು ಮುಗಿಬಿದ್ದು ಖರೀದಿಸಿದ್ದಾರೆ ಎಂದು ಈಚೆಗೆ ವರದಿಯಾಗಿತ್ತು.
