Asianet Suvarna News Asianet Suvarna News

Bollywood Actresses: ಬಾಲಿವುಡ್​ ನಟಿಯರಿಗೆ ನಕ್ಕು ನಗಿಸೋ ಹೆಸ್ರುಗಳಿವೆ!

ಪ್ರೀತಿಯಿಂದ ಮಕ್ಕಳಿಗೆ ಬೇರೆಯದ್ದೇ ಹೆಸರು ಕರೆಯುವಂತೆ, ಬಾಲಿವುಡ್​ ನಟಿಯರಿಗೂ ಕುತೂಹಲದ ನಿಕ್​ ನೇಮ್​ಗಳಿವೆ. ಯಾವ ನಟಿಗೆ ಏನೆಂದು ಕರೆಯುತ್ತಾರೆ? 
 

Funny Nick Names of Bollywood Actresses Some make you laugh
Author
First Published Mar 1, 2023, 2:50 PM IST | Last Updated Mar 1, 2023, 2:50 PM IST

ಸಾಮಾನ್ಯವಾಗಿ ಮನೆಗಳಲ್ಲಿ ಮಕ್ಕಳಿಗೆ ಮುದ್ದಿನಿಂದ ಕರೆಯುವ ಹೆಸರೇ ಬೇರೆ ಇರುತ್ತದೆ. ಕೆಲವೊಮ್ಮೆ ಅವು ವಿಚಿತ್ರವೂ ಎನಿಸುವುದು ಉಂಟು. ಚಿಂಟು, ಮಿಂಟು, ಪುಂಟು, ಪುಟ್ಟಿ, ಬೇಬಿ (Baby) ಹೀಗೆ ಮಕ್ಕಳಿಗೆ ಕರೆಯುವ ಹೆಸರುಗಳು ಒಂದಲ್ಲಾ ಎರಡಲ್ಲಾ... ಈ ಅಡ್ಡ ಹೆಸರುಗಳೇ ಮುಂದೆ ಬೆಳೆದು ದೊಡ್ಡವರಾದ ಮೇಲೂ ಕೆಲವೊಮ್ಮೆ  ಮುಂದುವರೆಯುವುದು ಉಂಟು. ಇದು ಮನೆಯಲ್ಲಿ ಇಡುವ ಹೆಸರಾದರೆ ಇನ್ನು ಕೆಲಸದ ಸ್ಥಳಗಳಲ್ಲಿ ಕೆಲವರಿಗೆ ಅಡ್ಡ ಹೆಸರು (Nick Name) ಇಡುವುದು ಉಂಟು. ಇಂಥ ಟ್ರೆಂಡ್ ನಟ-ನಟಿಯರನ್ನೂ ಬಿಟ್ಟಿಲ್ಲ. ಅದರಲ್ಲಿಯೂ ಹೆಚ್ಚಾಗಿ ನಟಿಯರಿಗೆ ಕುತೂಹಲದ ಅಡ್ಡ ಹೆಸರುಗಳು ಇವೆ. ಬಾಲಿವುಡ್​ನಲ್ಲಿ ಅಂಥ ಕೆಲವು ನಟಿಯರ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ತಮ್ಮ ಅಡ್ಡಹೆಸರುಗಳಿಂದಾಗಿ ಉದ್ಯಮದಲ್ಲಿ ಜನಪ್ರಿಯವಾಗಿರುವ ಅನೇಕ ಬಾಲಿವುಡ್ (Bollywood) ಸೆಲೆಬ್ರಿಟಿಗಳಿದ್ದಾರೆ. ಅವರ ಪೈಕಿ ಕೆಲವೊಂದು ಬಹಳ ಜನಪ್ರಿಯವಾಗಿದ್ದರೂ, ಇನ್ನು ಕೆಲವು ಅಷ್ಟು ಬಳಕೆಯಲ್ಲಿ ಇಲ್ಲ. ಅಂಥ ಕೆಲವು ಕುತೂಹಲ ನಟಿಯರ ಪರಿಚಯ ಇಲ್ಲಿದೆ.

ಐಶ್ವರ್ಯ ರೈ (Aishwarya Rai) ಅವರಿಂದ ಹಿಡಿದು ಕರಿಷ್ಮಾ ಕಪೂರ್, ಕರೀನಾ ಕಪೂರ್, ಆಲಿಯಾ ಭಟ್​, ಅನುಷ್ಕಾ ಶರ್ಮಾ,  ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ನಟಿಯರಿಗೆ ಅಡ್ಡ ಹೆಸರುಗಳು ಇವೆ.  ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಹೇಳುವುದಾದರೆ, ಇವರನ್ನು ಪಿಗ್ಗಿ ಚಾಪ್ಸ್ ಎಂದು ಹೇಳುವುದು ಬಹುತೇಕ ಮಂದಿಗೆ ಗೊತ್ತೇ ಇದೆ. ಅದನ್ನು ಷಾರ್ಟ್​ ಮಾಡಿ ಪಿಗ್ಗಿ ಎಂದೂ ಹೇಳುತ್ತಾರೆ. ಇವರ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕೂಡ I Am Piggy Chops (@iampiggychops) ಎಂದೇ ಇದೆ, ಇನ್ನು ಕೆಲವರು ಈಕೆಗೆ ದೇಸಿ ಗರ್ಲ್​ ಎಂದು ಹೇಳುವುದು ಉಂಟು. ಆದರೆ ಪ್ರಿಯಾಂಕಾ (Priyanka Chopra) ಮನೆಯಲ್ಲಿ ಅವರಿಗೆ ಕರೆಯುವುದು ವಿಥು ಅಥವಾ  ಮಿಮಿ ಎಂದು. 

ಮಕ್ಕಳು ಬೇಕು... ಹುಡುಗನನ್ನು ಹುಡುಕಿ ಕೊಡಿ ಎಂದ ನಟಿ Parineeti Chopra!

ಬಚ್ಚನ್​ ಫ್ಯಾಮಿಲಿಯ ಸೊಸೆ ಐಶ್ವರ್ಯ ರೈ ಬಚ್ಚನ್​ ಅವರಿಗೆ ಮನೆಯಲ್ಲಿ ಗುಲ್ಲು ಎಂದೇ ಕರೆಯಲಾಗುತ್ತಿತ್ತು. ಚಿಕ್ಕವರಿರುವಾಗಲೂ ನೋಡಲು ರಸಗುಲ್ಲಾದಂತಿದ್ದ ಐಶ್ವರ್ಯರನ್ನು ಸ್ವೀಟ್​ ಆಗಿ ಗುಲ್ಲು ಎಂದು ಕರೆಯುತ್ತಿದ್ದರು. ಈಗಲೂ ಅದು ಬಿಟ್ಟಿಲ್ಲ. ಆಕೆಯ ತವರು ಮನೆಯವರು, ಕುಟುಂಬಸ್ಥರು ಹಾಗೂ ಕೆಲ ಕ್ಲೋಸ್​ ಫ್ರೆಂಡ್ಸ್​ ಈಗಲೂ ಗುಲ್ಲು ಎಂದು ಕರೆಯುವುದು ಉಂಟು. ಇನ್ನು ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್ (Sonam Kapoor) ಅವರನ್ನು ಜಿರಾಫೆ ಎಂದೇ ಕುಟುಂಬಸ್ಥರು ತಮಾಷೆ ಮಾಡುತ್ತಾರೆ. ಈಗಷ್ಟೇ ಅಮ್ಮನಾಗಿರುವ ಸೋನಂ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ನೀಳಕಾಯದ ಹಿನ್ನೆಲೆಯಲ್ಲಿ ತಮ್ಮನ್ನು ಜಿರಾಫೆ ಎಂದು ಕರೆಯುತ್ತಾರೆ ಎಂದಿದ್ದರು.
 
ಇನ್ನು ಅನುಷ್ಕಾ ಶರ್ಮಾ ಅವರದ್ದು ವಿಚಿತ್ರ ನಿಕ್​ನೇಮ್​. ಇವರನ್ನು ‘ನುಷ್ಕೇಶ್ವರ್’ ಎಂದು ಕರೆಯುತ್ತಿದ್ದರಂತೆ ನಂತರ  ನುಷ್ಕಿ ನುಷ್ಕಿ ಎಂದು ಕರೆಯಲಾಗುತ್ತಿತ್ತು. ಪತಿ  ವಿರಾಟ್ ಕೊಹ್ಲಿ ಕೂಡ ಈಗಲೂ   ನುಷ್ಕಿ ಎಂದೇ ಕರೆವುದು. ಇನ್ನು ಇನ್ನೋರ್ವ ಬಾಲಿವುಡ್​ ಅಮ್ಮ ಆಲಿಯಾ ಭಟ್​ರನ್ನು ಆಲೂ ಎಂದೇ ಕರೆಯಲಾಗುತ್ತದೆ. ಅವರ ತಾಯಿ ಸೋನಿ ರಜ್ದಾನ್ ಮತ್ತು ತಂದೆ ಮಹೇಶ್ ಭಟ್ ಸೇರಿದಂತೆ ಕೆಲವು ಸ್ನೇಹಿತರು, ಕುಟುಂಬಸ್ಥರು ಈಗಲೂ ಆಲೂ ಎನ್ನುತ್ತಾರೆ. 

Mallika Sherawat: 17 ಕಿಸ್​ ಕೊಟ್ಟಾಕೆ ದಿಢೀರನೇ ಮಿಸ್ಸು! ನಟಿ ಮಲ್ಲಿಕಾ ಶೆರಾವತ್​ ಹೋಗಿದ್ದೆಲ್ಲಿ?

ರಣಧೀರ್ ಕಪೂರ್ ಪುತ್ರಿ ಕರಿಷ್ಮಾ ಕಪೂರ್ (Karishma Kapoor) ಅವರನ್ನು ಬಾಲ್ಯದಿಂದಲೂ ಲೋಲೋ ಎಂದು ಕರೆಯಲಾಗುತ್ತದೆ.  ಬಾಲಿವುಡ್​ನ ಬಹುತೇಕ ಮಂದಿ ಇದೇ ಹೆಸರಿನಿಂದ ಅವರನ್ನು ಕರೆದರೆ, ಇನ್ನೋರ್ವ ಕಪೂರ್​ ಫ್ಯಾಮಿಲಿಯ ಪುತ್ರಿ  ಕರೀನಾ ಕಪೂರ್ ಅವರನ್ನು ಬೆಬೋ ಎಂದು ಕರೆಯಲಾಗುತ್ತದೆ. ಇದು ಎಲ್ಲರಿಗೂ ತಿಳಿದದ್ದೇ. ಕರೀನಾ ಅನ್ನುವುದಕ್ಕಿಂತಲೂ ಹೆಚ್ಚಾಗಿ ಈಕೆ ಬೆಬೋ ಎಂದೇ ಚಿರಪರಿಚಿತರು.
 

Latest Videos
Follow Us:
Download App:
  • android
  • ios