Project K: 600 ಕೋಟಿ ಬಜೆಟ್, ಪ್ರಭಾಸ್, ಅಮಿತಾಭ್, ಕಮಲ್, ದೀಪಿಕಾ ಪಡೆದ ಸಂಭಾವನೆ ಎಷ್ಟು?
600 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ.
'ಪ್ರಾಜೆಕ್ಟ್ ಕೆ' ಭಾರತೀಯ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದು. ಪ್ರಭಾಸ್ ಹೀರೋ, 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಅವರ ಸಾರಥ್ಯ. ಇಬ್ಬರ ಕಾಂಬಿನೇಷನ್‌ನ ಸಿನಿಮಾಗಾಗಿ ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಅನೌನ್ಸ್ ಆಗಿ ವರ್ಷಗಳೇ ಆಗಿವೆ. ಇದೀಗ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಪ್ರಭಾಸ್ ಇತ್ತೀಚಿಗಷ್ಟೆ ಆದಿಪುರುಷ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಆದರೆ ಆದಿಪುರುಷ್ ಹೀನಾಯ ಸೋಲು ಕಂಡಿದೆ. ಅಷ್ಟೆಯಲ್ಲದೇ ಸಿನಿಮಾ ವಿರುದ್ಧ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೋಲಿನ ಸುಳಿಯಲ್ಲಿರುವ ಪ್ರಭಾಸ್‌ಗೆ ಮುಂದಿನ ಸಿನಿಮಾಗಳ ಗೆಲುವು ಅನಿವಾರ್ಯವಾಗಿದೆ.
ಪ್ರಾಜೆಕ್ಟ್ ಕೆ ದೊಡ್ಡ ಮಟ್ಟದಲ್ಲಿ ಬರ್ತಿರುವ ಸಿನಿಮಾ. ಬಜೆಟ್ ಹಾಗೂ ಕಾಸ್ಟಿಂಗ್ ವಿಚಾರದಲ್ಲೂ ಪ್ರಾಜೆಕ್ಟ್ ಕೆ ದೊಡ್ಡ ಮಟ್ಟದಲ್ಲಿದೆ. ದೊಡ್ಡ ದೊಡ್ಡ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ಕಲಾವಿದರೂ ಪ್ರಾಜೆಕ್ಟ್ ಕೆ ಸಿನಿಮಾಗಾಗಿ ಒಂದಾಗಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕಾಲಿವುಡ್ ಸ್ಟಾರ್ ಕಮಲ್ ಹಾಸನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾತಂಡ ಕಮಲ್ ಹಾಸನ್ ಎಂಟ್ರಿಯನ್ನು ಅಧಿಕೃತಗೊಳಿಸಿದೆ. ಇನ್ನೂ ಉಳಿದಂತೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಇಷ್ಟು ದೊಡ್ಡ ತಾರಾಬಳಗವನ್ನು ಹೊಂದಿಸಲು ಸಿನಿಮಾತಂಡ ದೊಡ್ಡ ಮಟ್ಟದ ಹಣ ಸುರಿದಿದೆ.
ಅಂದಹಾಗೆ ಈ ಸಿನಿಮಾದ ವೆಚ್ಚ 600 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಸಿನಿಮಾ ನಿರ್ಮಾಣದ ವೆಚ್ಚ 400 ಕೋಟಿ ರೂಪಾಯಿಯಾದರೆ ಉಳಿದಂತೆ 200 ಕೋಟಿಯನ್ನು ಕಲಾವಿದರ ಸಂಭಾವನೆಗೆ ನೀಡಲಾಗುತ್ತಿದಂತೆ. ಇದರಲ್ಲಿ, ದೀಪಿಕಾ, ಪ್ರಭಾಸ್, ಕಮಲ್ ಹಾಸನ್ ಮತ್ತು ಅಮಿತಾಭ್ ಸೇರಿದಂತೆ ಪ್ರಮುಖ ಕಲಾವಿದರ ಸಂಭಾವನೆ ಕೂಡ ಸೇರಿದೆ ಎನ್ನಲಾಗಿದೆ.
ಕಟ್ಟಪ್ಪ ಬಾಹುಬಲಿನ ಕೊಂದಿದ್ದು ಯಾಕೆಂದು ಈಗ ಗೊತ್ತಾಯ್ತು: 'ಆದಿಪುರುಷ್' ನೋಡಿ ಪ್ರಭಾಸ್ ಕಾಲೆಳೆದ ಸೆಹ್ವಾಗ್
ಅಂದಹಾಗೆ ಪ್ರಾಜೆಕ್ಟ್ ಕೆ ಚಿತ್ರಕ್ಕಾಗಿ ಅಮಿತಾಬ್ ಬಚ್ಚನ್ 18 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ಕಮಲ್ ಹಾಸನ್ ಅವರಿಗೆ 20 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ದೀಪಿಕಾ ಪಡುಕೋಣೆ 20 ಕೋಟಿ ರೂಪಾಯಿ ಸಂಭಾವನೆ ಪಡೆದ್ರೆ ದಿಶಾ ಪಟಾಣಿ 2 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ ಎಂದು ವರದಿಯಾಗಿದೆ. ಪ್ರಭಾಸ್ ಅವರಿಗೆ 140 ರಿಂದ 150 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದಿಪುರುಷ್ ಸೋಲು ಪ್ರಭಾಸ್ ಮುಂದಿನ ಸಿನಿಮಾಗಳ ಮೇಲೆ ಪ್ರಭಾವ ಬೀಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಪ್ರಾಜೆಕ್ಟ್ ಕೆ ಸಿನಿಮಾ ಮೇಲೆ ಯಾವುದೇ ಪ್ರಭಾವ ಬೀರಿಲ್ಲ.
ಪ್ರಭಾಸ್ 'ಪ್ರಾಜೆಕ್ಟ್ K' ಸಿನಿಮಾದಲ್ಲಿ ಕಮಲ್ ಹಾಸನ್: ಕಮಾಲ್ ಮಾಡುತ್ತಾ ಅಮಿತಾಭ್-ಕಮಲ್ ಜೋಡಿ
ಮೂಲಗಳ ಪ್ರಕಾರ ಪ್ರಭಾಸ್ ಆದಿಪುರುಷ್ ಸಿನಿಮಾಗೆ 1000 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಬಾಹುಬಲಿ ಸಿನಿಮಾ ಬಳಿಕ ದೊಡ್ಡ ಮಟ್ಟದ ಕ್ರೇಜ್ ಹಾಗೂ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಪ್ರಭಾಸ್ ಬೇಡಿಕೆ ಹೆಚ್ಚಾಯಿತು. ಬಾಹುಬಲಿ ಬಳಿಕ ಬಂದ ಸಾಹೋ ಚಿತ್ರಕ್ಕೆ 70 ಕೋಟಿ ಸಾವಂಭಾನೆ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೂ ರಾಧೆ ಶ್ಯಾಮ್ ಚಿತ್ರಕ್ಕೂ ಅದೇ ಸಂಭಾವನೆ ಪಡೆದಿದ್ದಾರೆ. ಇದೀಗ ಪ್ರಾಜೆಕ್ಟ್ ಕೆ ಚಿತ್ರಕ್ಕೆ ದೊಡ್ಡ ಮೊತ್ತ ಚಾರ್ಜ್ ಮಾಡಿದ್ದು ಬರೋಬ್ಬರಿ 140 ರಿಂದ 150 ಕೋಟಿ ರೂಪಾಯಿ ಎನ್ನಲಾಗಿದೆ.