'ಬಿಗ್ ಬಾಸ್' ಓಟಿಟಿ ಸೀಸನ್​ 2ನಲ್ಲಿ ಸಾಮಾಜಿಕ ಜಾಲತಾಣದ ಪ್ರಸಿದ್ಧಿಯ ಪುನೀತ್​ ಕುಮಾರ್​ ಒಂದೇ ದಿನದಲ್ಲಿ ಔಟ್​ ಆಗಿದ್ದರೆ, ನೀಲಿ ತಾರೆ ಮಿಯಾ ಎಂಟ್ರಿ ಪಡೆದಿದ್ದಾರೆ.  

ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್' ಓಟಿಟಿ (Biggboss OTT) ಸೀಸನ್‌ 1 ಬಹಳ ಖ್ಯಾತಿ ಗಳಿಸಿತ್ತು. ಇದೀಗ ಸೀಸನ್​ 2 ಶುರುವಾಗಿದೆ. ಜೂನ್ 17ರಂದು ಚಾಲನೆ ದೊರೆತಿರುವ ಬೆನ್ನಲ್ಲೇ ಇತಿಹಾಸವನ್ನೂ ಸೃಷ್ಟಿಸಿಯಾಗಿಬಿಟ್ಟಿದೆ. ಇದಕ್ಕೆ ಕಾರಣ ಈ ಹಿಂದಿನ ಬಿಗ್​ಬಾಸ್​ನಲ್ಲಿ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದ ಯಾವೊಬ್ಬ ಸ್ಪರ್ಧಿಯೂ ಒಂದು ದಿನವಾದರೂ ಬಿಗ್​ಬಾಸ್​ ಮನೆಯೊಳಕ್ಕೆ ಇರುತ್ತಿದ್ದರು. ಆದರೆ ಸೀಸನ್ 2ರ ಶೋ ಶುರುವಾದ 12 ಗಂಟೆಯಲ್ಲೇ ಸ್ಪರ್ಧಿಯೊಬ್ಬರೂ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಹೌದು. ಹೀಗೆ ಎಲಿಮಿನೇಟ್​ ಆಗುವ ಮೂಲಕ ದಾಖಲೆ ಮಾಡಿದ್ದಾರೆ. ಇವರೇ ಪುನೀತ್ ಕುಮಾರ್​​ ಸೂಪರ್​ಸ್ಟಾರ್​. ಬಿಗ್​ಬಾಸ್​ ಮನೆಯೊಳಗೆ ಸ್ಪರ್ಧಿಗಳು ಹೋಗಿ ಇನ್ನೂ 12 ಗಂಟೆಗಳೂ ಕಳೆದಿರಲಿಲ್ಲ. ಅಷ್ಟರಲ್ಲಿಯೇ ಅವರು ಎಲಿಮಿನೇಟ್​ ಆಗಿದ್ದಾರೆ. ಕುತೂಹಲದ ಸಂಗತಿ ಏನೆಂದರೆ, ಇವರು ಬಿಗ್ ಬಾಸ್ ಓಟಿಟಿ ಸೀಸನ್‌ 2ರ ಕೊನೆಯ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ಆದರೆ, ಇದೀಗ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಅವರಾಗಿದ್ದಾರೆ.

ಇದಕ್ಕೆ ಕಾರಣ, ಬಿಗ್​ಬಾಸ್​ ಶೋ ಇನ್ನು ಸರಿಯಾಗಿ ಶುರುವಾಗಿರಲಿಲ್ಲ. ಆದರೆ ಕೆಲವೇ ಗಂಟೆಗಳಲ್ಲಿ ಪುನೀತ್ ನಡವಳಿಕೆಯಿಂದ ಅಲ್ಲಿದ್ದ ಇತರ ಸ್ಪರ್ಧಿಗಳು ಬೇಸತ್ತಿ ಹೋಗಿದ್ದರು. ಅವರೇ ಪುನೀತ್​ ಅವರನ್ನು ನಾಮಿನೇಟ್ ಮಾಡಿದ್ದರು. ಅಷ್ಟಕ್ಕೂ ಪುನೀತ್​ (Puneeth) ಯಾರು ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುವವರಿಗೆ ತಿಳಿದ ವಿಷಯ. ಇವರು ತಮ್ಮನ್ನು ತಾವೇ ಪುನೀತ್ ಸೂಪರ್ ಸ್ಟಾರ್, ಲಾರ್ಡ್ ಪುನೀತ್ ಎಂದೆಲ್ಲಾ ಕರೆದುಕೊಳ್ಳುತ್ತಿದ್ದಾರೆ. ಇವರು ಸಕತ್​ ಫೇಮಸ್​ ಆಗಿರುವುದು ಬೈಕ್ ರೈಡ್ ವಿಡಿಯೋದ ಮೂಲಕ. ಇದು ಸಖತ್ ಟ್ರೆಂಡಿಂಗ್ ಆಗಿತ್ತು. ಸೋಶಿಯಲ್ ಮೀಡಿಯಾದಿಂದ ಅವರು ಗಳಿಸುವ 90% ಹಣವನ್ನು ಹಿಂದುಳಿದ ಮಕ್ಕಳ ಏಳಿಗೆಗೆ ದಾನ ಮಾಡುತ್ತಾರೆ. ಇಷ್ಟೆಲ್ಲಾ ಫೇಮಸ್​ ಆಗಿರುವ ನಟ ಕೇವಲ 12 ಗಂಟೆಗಳಲ್ಲೇ ಮನೆಯಿಂದ ಪುನೀತ್ ಹೊರಬಿದ್ದಿರುವುದು ಫ್ಯಾನ್ಸ್​ಗೆ ಬೇಸರ ಉಂಟುಮಾಡಿದೆ. ಪುನಃ ಅವರು ವೈಲ್ಡ್ ಕಾರ್ಡ್ ಎಂಟ್ರಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

Zeeshan Khan: ಕಿಸ್​ ಕೊಟ್ರು, ಪ್ಯಾಂಟ್ ಬಿಚ್ಚು ಎಂದ್ರು: ಕರಾಳ ಅನುಭವ ತೆರೆದಿಟ್ಟ ನಟ!

ಸದ್ಯ ಬಿಗ್​ಬಾಸ್​ ಮನೆಯಲ್ಲಿ ಪೂಜಾ ಭಟ್ (Pooja Bhat), ಪಾಲಕ್ ಪುರ್ಸ್ವಾಮಿ, ಅವಿನಾಶ್ ಸಚ್‌ದೇವ್, ಬೇಬಿಕಾ ಧುರ್ವೆ, ಆಲಿಯಾ ಸಿದ್ಧಿಕಿ, ಜಾಡ್‌ ಹದೀದ್, ಮನಿಷಾ ರಾಣಿ, ಸೈರಸ್, ಅಕಾಂಕ್ಷಾ ಪುರಿ, ಅಭಿಷೇಕ್ ಮಲ್ಹಾನ್, ಜಿಯಾ ಶಂಕರ್ ಮುಂತಾದವರು ಸ್ಪರ್ಧಿಗಳು ಇದ್ದಾರೆ. ಅವರಲ್ಲಿ ಸಕತ್​ ಸುದ್ದಿ ಮಾಡುತ್ತಿರುವವರು ಮಾಜಿ ನೀಲಿ ತಾರೆ ಮಿಯಾ ಖಲೀಫಾ. ಮಿಯಾ ಖಲೀಫಾ ಅವರು ಬ್ಲ್ಯೂ ಸಿನಿಮಾಗಳ ಮೂಲಕ ಫೇಮಸ್ ಆದವರು. ಆದರೆ, ಈಗ ಅವರು ಆ ಇಂಡಸ್ಟ್ರಿ ತೊರೆದಿದ್ದಾರೆ. ಈಗ ಅವರು ‘ಬಿಗ್ ಬಾಸ್​’ಗೆ ಬರಲಿದ್ದಾರೆ ಎಂಬ ಸುದ್ದಿ ಸೆನ್ಸೇಷನ್ ಸೃಷ್ಟಿಸಿದೆ. ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ‘ಬಿಗ್ ಬಾಸ್ ಹಿಂದಿ’ ಐದನೇ ಸೀಸನ್​ಗೆ ಆಗಮಿಸಿದ್ದರು. ಅವರು ಈ ಶೋ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಈಗ ಅದೇ ಜನಪ್ರಿಯತೆ ಮಿಯಾ ಗಳಿಸುತ್ತಾರೆಯೋ ನೋಡಬೇಕಿದೆ. 

ಆದರೆ ಸದ್ಯ ಮಿಯಾ ಖಲೀಫಾ (Mia Khalifa) ಅವರು ಬರುವ ಸುದ್ದಿ ಹರಡಿರುವ ಬೆನ್ನಲ್ಲೇ, ಒಂದು ವೇಳೆ ಮಿಯಾ ಬಂದಿದ್ದೇ ಆದಲ್ಲಿ ಬಿಗ್‌ಬಾಸ್‌ ಮನೆ ಹೇಗಿರಲಿದೆ ಎನ್ನುವ ಕಲ್ಪನೆಗೂ ಕೆಲವರು ಹೋಗಿದ್ದಾರೆ. ಕಳೆದ ಸೀಸನ್‌ನಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿದ್ದರು. ಬಿಗ್‌ಬಾಸ್‌ ಒಟಿಟಿ ಸೀಸನ್‌ 1ನ್ನು ಕರಣ್‌ ಜೋಹರ್ ನಿರೂಪಣೆ ಮಾಡಿದ್ದರು. ಸೀಸನ್‌ 2 ಅನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡೋದಾಗಿ ಅಧಿಕೃತವಾಗಿ ತಿಳಿದು ಬಂದಿದೆ.

ನಟ ವಿಜಯ್​ಗೂ ಮುನ್ನ ತಮನ್ನಾ ಲೈಫಲ್ಲಿ ವಿರಾಟ್​ ಕೊಹ್ಲಿ ಎಂಟ್ರಿ? ನಟಿ ಹೇಳಿದ್ದೇನು?