Asianet Suvarna News Asianet Suvarna News

MARAKKAR: ತೋಪೆದ್ದು ಹೋಗತ್ತೆ ಅಂದ್ಕೊಂಡ್ರೆ ರಿಲೀಸ್ಗೂ ಮೊದ್ಲೇ 100 ಕೋಟಿ ಬಾಚಿಕೊಂಡಿತು!

ಬಿಡುಗಡೆಗೂ ಮುನ್ನವೇ 100 ಕೋಟಿ ರೂಪಾಯಿ ಬಾಚಿಕೊಂಡಿತ್ತು ಈ ಚಿತ್ರ. ಹಾಗೆಂದು ಇದು ಬಾಲಿವುಡ್‌ ಅಲ್ಲ, ಹಾಗಿದ್ರೆ ಇನ್ನಾವುದು?
 

First Indian film to earn Rs 100 crore before release suc
Author
First Published Jun 19, 2023, 11:25 PM IST | Last Updated Nov 21, 2023, 6:44 PM IST

ಒಂದು ಚಿತ್ರದ ಕಥೆ, ನಿರೂಪಣೆ ಚೆನ್ನಾಗಿದ್ದ ಮಾತ್ರಕ್ಕೆ ಅದು ಹಿಟ್‌ ಆಗುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಸೂಪರ್‌ಸ್ಟಾರ್‌ಗಳನ್ನು ಹಾಕಿಕೊಂಡು, ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿ ಚಿತ್ರ ಮಾಡಿದರೂ ತೋಪೆದ್ದು ಹೋಗುವುದು ಇದೆ. ಆದರೆ ಕೆಲವೇ ಕೆಲವು ಚಿತ್ರಗಳು ಬಾಕ್ಸ್‌ ಆಫೀಸ್‌ (Box office) ಕೊಳ್ಳೆ ಹೊಡೆಯುವುದೂ ಇದೆ. ಇನ್ನು ಬೆರಳೆಣಿಕೆ ಚಿತ್ರಗಳು ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸುವುದು ಇದೆ. ನಾವು ಇಲ್ಲಿ ಹೇಳಹೊರಟಿರುವುದು ಕೊನೆಯ ಸಾಲಿಗೆ ಸೇರಿದ ಚಿತ್ರ ಅರ್ಥಾತ್‌ ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸಿದ ಚಿತ್ರ. ಅದುವೇ ಮಲಯಾಳದ ಮರಕ್ಕಾರ್ ಅರ್ಥಾತ್‌ ಅರೇಬಿಯನ್ ಸಮುದ್ರದ ಸಿಂಹ. ಹೌದು. 2021ರಲ್ಲಿ ಬಿಡುಗಡೆಗೊಂಡಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ 100 ಕೋಟಿ ಬಾಚಿಕೊಂಡಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಅಡ್ವಾನ್ಸ್​ ಬುಕ್ಕಿಂಗ್​ ನಡೆದ ಹಿನ್ನೆಲೆಯಲ್ಲಿ ಇಷ್ಟು ಭಾರಿ ಮೊತ್ತದ ಹಣ ಸಂಗ್ರಹವಾಗಿತ್ತು.

ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ (Mohan Lal) ನಾಯಕರಾಗಿ ನಟಿಸಿರೋ  ಮಲಯಾಳಂ ಚಿತ್ರವಿದು.   ಈ ಚಿತ್ರ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಸುಮಾರು ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾದ ಈ ಚಿತ್ರ ಬಜೆಟ್‌ನಲ್ಲಿ ಮಲಯಾಳಂನ ಚಿತ್ರರಂಗದಲ್ಲಿಯೇ ದಾಖಲೆ ಮಾಡಿದ್ದು, ಬಿಡುಗಡೆಗೂ ಮುನ್ನವೇ ನೂರು ಕೋಟಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.  

Why This Kolaveri Di: ಅರ್ಥ ಗೊತ್ತಿಲ್ದೇ 40 ಕೋಟಿಗೂ ಅಧಿಕ ಜನ ವೀಕ್ಷಿಸಿ ದಾಖಲೆ ಬರೆಯಿತು ಈ ಹಾಡು!

16 ನೇ ಶತಮಾನದಲ್ಲಿ ಕೇರಳದ ಕ್ಯಾಲಿಕಟ್‌ನ ಕಥಾಹಂದರವನ್ನು ಈ ಚಿತ್ರ ಹೊಂದಿದೆ.  ಕುಂಜಾಲಿ ಮರಕ್ಕಾರ್ (ಮೋಹನ್ ಲಾಲ್) ಕ್ಯಾಲಿಕಟ್‌ನ ಜಾಮೋರಿನ್ ದೊರೆಗಳ ಕೆಳೆಗೆ ಕೆಲಸ ಮಾಡುವ ನಾವಿಕ ಸೇನಾಧಿಪತಿ. ಈತ  ಕುಂಜಾಲಿ ಪೋರ್ಚುಗೀಸ್ (Portuguese) ದಾಳಿಯಲ್ಲಿ ತನ್ನ ತಂದೆ-ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು,  ಚಿಕ್ಕಪ್ಪನ ಸಹಾಯದಿಂದ ಬದುಕುಳಿದಿರುತ್ತಾನೆ. ನಂತರ ಜಾಮೋರಿನ ದೊರೆಯು ತನ್ನ ಮುಖ್ಯ ಸೇನಾಧಿಪತಿ ಆನಂದನ್ ಮನಗಟ್ಟಚನ್ ಮಾತಿನಂತೆ `ಕುಂಜಾಲಿ'ಯನ್ನು ನಾವಿಕ ಪಡೆಯ ಸೇನಾಧಿಪತಿಯನ್ನಾಗಿ ಮಾಡಿರುತ್ತಾನೆ. ಮರಕ್ಕಾರ್ ಪ್ರಪ್ರಥಮ ಬಾರಿಗೆ ನಾವಿಕ ಸೇನೆಯನ್ನು ಸಿದ್ಧಪಡಿಸಿ ಕ್ಯಾಲಿಕಟ್ ಅನ್ನು ಪೋರ್ಚುಗೀಸ್‌ರಿಂದ ಸುರಕ್ಷಿತಗೊಳಿಸುತ್ತಾನೆ.  ಈ ನಾವಿಕ ದಳ ಸುಮಾರು ಒಂದು ಶತಮಾನಗಳ ಕಾಲ ಪೋರ್ಚುಗೀಸ್ ರ ಆಕ್ರಮಣ ತಡೆಯುವುದೇ ಈ ಕಥೆಯ ಕಥಾಹಂದರವಾಗಿದೆ.

ಬರೀ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಮೂಲಕ ವಿಶ್ವಾದ್ಯಂತ ರಿಲೀಸ್‌ಗು ಮುನ್ನವೇ ಸಿನಿಮಾ 100 ಕೋಟಿ ಕ್ಲಬ್ ಸೇರಿಸಿಕೊಂಡಿತ್ತು.  ಆ ಸಮಯದಲ್ಲಿ, ದಕ್ಷಿಣದ ಸೂಪರ್‌ಸ್ಟಾರ್ ಸಿನಿಮಾವು ವಿಶ್ವಾದ್ಯಂತ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ ಎಂದು ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ  ಸೂಪರ್‌ ಸೌತ್ ನಟಿ ಕೀರ್ತಿ ಸುರೇಶ್‌ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ (Sunil Shetty) ಅವರೂ ನಟಿಸಿದ್ದಾರೆ.  

Sonal Chauhan: ಆದಿಪುರುಷ್​ನ ಎರಡೇ ದೃಶ್ಯಕ್ಕೆ 'ಮಂಡೋದರಿ'ಗೆ ಈ ಪರಿ ಸಂಭಾವನೆಯಾ?

ಅಷ್ಟಕ್ಕೂ ಈ ಸಿನಿಮಾ ಬಿಡುಗಡೆಗೂ ಒಂದು ಇಂಟರೆಸ್ಟಿಂಗ್‌ ಸ್ಟೋರಿ ಇದೆ. ಅದೇನೆಂದರೆ, ಸಿನಿಮಾ ಈ ಪರಿಯ ಸಕ್ಸಸ್‌ ಕಾಣುವುದನ್ನು ಕನಿಸಿನಲ್ಲಿಯೂ ಯೋಜನೆ ಮಾಡದಿದ್ದ ನಿರ್ಮಾಪಕ ಆಂಟೊನಿ ಪೆರುಂಬಾವೂರ್ ಅವರು,  ಸಿನಿಮಾವನ್ನು ಥಿಯೇಟರ್‌ ಬದಲು  ನೇರವಾಗಿ  ಒಟಿಟಿ ರಿಲೀಸ್‌ಗೆ ಸಿದ್ಧರಾಗಿದ್ದರು.  ಆಗ  ಸಚಿವರೊಬ್ಬರು  ಆಂಟೊನಿ ಅವರ ಮನ ಒಲಿಸಿ  ಥಿಯೇಟರ್‌ನಲ್ಲಿ ರಿಲೀಸ್‌ (Theator release) ಮಾಡಿಸಿದ್ದರಂತೆ,  ಅದು ಕೊರೋನಾ ಸಮಯವಾಗಿದ್ದರಿಂದ  ಆರ್ಥಿಕ ಚೇತರಿಕೆಗಾಗಿ  ಥಿಯೇಟರ್‌ನಲ್ಲಿ ರಿಲೀಸ್ ಮಾಡಿ ಎಂದು ಕೋರಿಕೊಂಡದ್ದೂ ಅಲ್ಲದೇ ಆಂಟೊನಿ ಅವರ ಮನವೊಲಿಸಿದ್ದರು. ನಂತರ ಆಗಿದ್ದೇ ಬೇರೆ.  ಮುಂಗಡ ಕಾಯ್ದಿರಿಸುವಿಕೆಯಿಂದ ಬಂದ ಕಲೆಕ್ಷನ್ ನಿಜಕ್ಕೂ ಸಿನಿಮಾ ತಂಡಕ್ಕೆ ಅನಿರೀಕ್ಷಿತವಾಗಿತ್ತು. ಕೋವಿಡ್‌ನಿಂದ ಮಕಾಡೆ ಮಲಗಿದ್ದ  ಚಲನಚಿತ್ರೋದ್ಯಮವು ಮತ್ತೆ ಯಶಸ್ಸು ಗಳಿಸಲು ಈ ಸಿನಿಮಾದ ಸಕ್ಸಸ್‌ ಬಹಳಷ್ಟು ಸಹಾಯ ಮಾಡಿತ್ತು. ಇದನ್ನು ಖುದ್ದು ಕೇಂದ್ರವೇ ಹೇಳಿತ್ತು.

Latest Videos
Follow Us:
Download App:
  • android
  • ios