ತಮಿಳು ಮತ್ತು ಇಂಗ್ಲಿಷ್​  ಮಿಶ್ರಿತ ತಂಗ್ಲಿಷ್​ ಹಾಡೊಂದು 40 ಕೋಟಿಗೂ ಅಧಿಕ ವ್ಯೂಸ್ ಕಂಡು ದಾಖಲೆ  ಮಾಡಿದೆ. ಯಾವುದೀ ಹಾಡು?  

ನಟನೆ, ನಿರ್ದೇಶನ, ನಿರ್ಮಾಣ, ಗೀತ ರಚನೆ, ಗಾಯನ- ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡಿರೋ ಅಪರೂಪದ ಕಲಾವಿದ ಧನುಷ್​. 2011ರಲ್ಲಿ ಧನುಷ್‌ ಹಾಡಿದ ತಂಗ್ಲಿಶ್‌ (ತಮಿಳು ಇಂಗ್ಲಿಶ್‌) ಗೀತೆ ಕೋಟ್ಯಂತರ ಜನರನ್ನು ಮೋಡಿ ಮಾಡಿತ್ತು. ಅದೇ ವೈ ದಿಸ್‌ ಕೊಲಾವರಿ ಡಿ? ಅಂದಹಾಗೆ ಧನುಷ್​ ಅವರ ಮೊದಲ ಹೆಸರೇ ಬೇರೆ. ವೆಂಕಟೇಶ್ ಪ್ರಭು ಕಸ್ತೂರಿ ರಾಜ್ ಎಂದರೆ ಯಾರಿಗೂ ಯಾರು ಎಂದು ತಿಳಿಯಲಿಕ್ಕಿಲ್ಲ. ಆದರೆ ಕಾಲಿವುಡ್​ನ ಸೂಪರ್​ಸ್ಟಾರ್​ ಧನುಷ್​ (Dhanush)ಎಂದರೆ ಎಲ್ಲರಿಗೂ ಅರಿವಾಗುತ್ತದೆ. ಹೌದು. ಧನುಷ್​ ಅವರ ಮೊದಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜ್. ಅದುಕುಲಂ ಎಂಬ ಚಿತ್ರದ ಮೂಲಕ ಸಕತ್​ ಫೇಮಸ್​ ಆಗಿದ್ದಾರೆ ಧನುಷ್​. ಈ ಚಿತ್ರಕ್ಕಾಗಿ ಅವರಿಗೆ 58ನೇ ನ್ಯಾಷನಲ್ ಫಿಲಂ ಅವಾರ್ಡ್​ ಕೂಡ ಲಭಿಸಿದೆ. ಹಾಗೂ ಇವರ 'ವೈ ದಿಸ್ ಕೊಲೆವರಿ ಡಿ' ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ. ಈ ಹಾಡು ಅತಿ ಹೆಚ್ಚು ಜನರು ಯೂಟ್ಯೂಬಿನಲ್ಲಿ ವೀಕ್ಷಣೆ ಪಡೆದ ಮೊದಲನೆಯ ಭಾರತೀಯ ವೀಡಿಯೊ ಎಂಬ ಹೆಗ್ಗಳಿಕೆ ಗಳಿಸಿದೆ. ಅಸಲಿಗೆ ಧನುಷ್​ ಅವರ ಈ ಹಾಡನ್ನು ಅವರ ಪತ್ನಿ ಐಶ್ವರ್ಯ ಧನುಷ್ ರವರು ಸಂಯೋಜಿಸಿದ್ದರು.

ಇವರಿಗೆ ಮೂರೂ ನ್ಯಾಷನಲ್ ಫಿಲಂ ಅವಾರ್ಡ್ (National Film Award) ಮತ್ತು ಏಳು ಫಿಲಂಫೇರ್ ಅವಾರ್ಡ್ ಲಭಿಸಿದೆ. ಇತ್ತೀಚೆಗೆ ಧನುಷ್​ ಸಕತ್​ ಸುದ್ದಿಯಾಗಿದ್ದರು. ಅದಕ್ಕೆ ಕಾರಣ ಅವರ ಹೊಸ ಲುಕ್. ಧನುಷ್​ ಅವರ ಹೊಸ ಲುಕ್​ ಸಾಮಾಜಿಕ ಜಾಲತಾಣದಲ್ಲಿ ವೈಬ್​ ಸೃಷ್ಟಿಸಿದ್ದು, ಯೋಗ ಗುರು ಬಾಬಾ ರಾಮ್‌ದೇವ್‌ (Baba Ramdev) ಆಗ್ಬಿಟ್ರಾ, ಏನಿದು ಅಂತಿದ್ದಾರೆ ಫ್ಯಾನ್ಸ್

ಈಗ ಇವರ ಕೊಲಾವರಿ ಡಿ ಹಾಡಿನ ಹೊಸ ವಿಷಯವೊಂದು ಹೊರಕ್ಕೆ ಬಂದಿದೆ. ಅದೇನೆಂದರೆ ಇವರ ಈ ಹಾಡನ್ನು 40 ಕೋಟಿಗೂ ಅಧಿಕ ಮಂದಿ ವಿವಿಧೆಡೆಗಳಲ್ಲಿ ವೀಕ್ಷಣೆ ಮಾಡಿದ್ದಾರೆ. ಯೂಟ್ಯೂಬ್​ ಒಂದರಲ್ಲಿಯೇ 10 ಕೋಟಿಗೂ ಅಧಿಕ ಮಂದಿ ವೀಕ್ಷಿಸಿ ಅತಿ ಹೆಚ್ಚು ಜನರು ಯೂಟ್ಯೂಬಿನಲ್ಲಿ ವೀಕ್ಷಣೆ ಪಡೆದ ಮೊದಲನೆಯ ಭಾರತೀಯ ಹಾಡು ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಈಗ ಈ ಹಾಡು ಬಿಡುಗಡೆಗೊಂಡು 12 ವರ್ಷಗಳಾದರೂ ಹಾಡಿನ ಮೇಲೆ ಜನರ ಕ್ರೇಜ್​ ಕಡಿಮೆಯಾಗುತ್ತಿಲ್ಲ. 

ಬಾಬಾ ರಾಮ್‌ದೇವ್‌ ಆಗಿಬಿಟ್ರಲ್ಲಾ ಧನುಷ್​! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್​

ಅಷ್ಟಕ್ಕೂ ಈ ಹಾಡು ರಿಲೀಸ್ ಆದಾಗ ರೆಕಾರ್ಡ್ ಬ್ರೇಕಿಂಗ್ (record breaking) ಸಾಂಗ್ ಆಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಈ ಹಾಡಿನ ಸಾಹಿತ್ಯವು ಜನರ ಬಾಯಲ್ಲಿತ್ತು, ಆದರೂ ಇಂದಿಗೂ ಕೆಲವೇ ಜನರು ಈ ಹಾಡಿನ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಾರೆ. ಒಳ್ಳೆಯ ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ ಎಂದು ಹೇಳಲಾಗುತ್ತದೆ, ಅದೇ ರೀತಿ ಈ ಹಾಡನ್ನು ದಕ್ಷಿಣದಿಂದ ಹೊರಬಂದ ನಂತರ ಪ್ರಪಂಚದಾದ್ಯಂತ ಪ್ಲೇ ಮಾಡಲಾಗಿದೆ. ಅಷ್ಟಕ್ಕೂ ಈ ಹಾಡಿನ ಅರ್ಥವೇನೆಂದರೆ ನೀನೇಕೆ ಹೀಗೆ ದ್ರೋಹ ಮಾಡಿದೆ? ನನ್ನ ಮೇಲೆ ಕ್ರೋಧವೇಕೆ? ಎನ್ನುವುದು.

 2012ರಲ್ಲಿ ತಮಿಳಿನ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘3’ ಬಂದಿತ್ತು. ಈ ಚಿತ್ರದಲ್ಲಿ ಧನುಷ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 16 ನವೆಂಬರ್ 2011 ರಂದು ಚಿತ್ರದ ಬಿಡುಗಡೆಯ ಮೊದಲು 'ಕೊಲವೆರಿ ಡಿ' ಹಾಡನ್ನು ಬಿಡುಗಡೆ ಮಾಡಲಾಯಿತು. ಈ ಹಾಡು ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದು, ಈ ಹಾಡು ಎಲ್ಲೆಡೆ ಸದ್ದು ಮಾಡಲಾರಂಭಿಸಿದೆ. ಈ ಹಾಡನ್ನು ಧನುಷ್ ಬರೆದು ಹಾಡಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಕೆಲವೇ ದಿನಗಳಲ್ಲಿ, ಈ ಹಾಡನ್ನು ಯೂಟ್ಯೂಬ್ (Youtube) ಅತ್ಯಂತ ಜನಪ್ರಿಯ ಹಾಡು ಎಂದು ಘೋಷಿಸಿತು. ಇದು ತಂಗ್ಲೀಷ್ ಹಾಡು, ಇದರಲ್ಲಿ ತಮಿಳು ಮತ್ತು ಇಂಗ್ಲಿಷ್ ಬಳಸಲಾಗಿದೆ.

ಮಗನ ಮದ್ವೆ ಖುಷಿಯಲ್ಲಿ ಹೀಗೆ ಡ್ಯಾನ್ಸ್ ಮಾಡೋದಾ ಸನ್ನಿ ಡಿಯೋಲ್​? ಫ್ಯಾನ್ಸ್​ ಫಿದಾ

 ನಿರ್ದೇಶಕ ಐಶ್ವರ್ಯ ಅವರಿಗೆ ಲೈಟ್ ಮೂಡ್ (Light mood) ಲವ್ ಸಾಂಗ್ ಬೇಕಿತ್ತು. ಹೀಗಿರುವಾಗ ಅನಿರುದ್ಧ್ 10 ನಿಮಿಷದಲ್ಲಿ ರಫ್ ಟ್ಯೂನ್ ಮಾಡಿದ್ದು, ಧನುಷ್ ಕೂಡ ಸುಮಾರು 20 ನಿಮಿಷದಲ್ಲಿ ಸಾಹಿತ್ಯ ಬರೆದಿದ್ದಾರೆ. ಅವರ ಮನಸ್ಸಿಗೆ ಬಂದ ಮೊದಲ ವಿಷಯವೆಂದರೆ, 'ವೈ ದಿಸ್​ ಕೊಲವೇರಿ?' ಎನ್ನುವುದು. 'ನಾನು ತಮಿಳು ಮತ್ತು ಇಂಗ್ಲಿಷ್ ಬೆರೆಸಿ ಈ ಹಾಡಿನ ಸಾಹಿತ್ಯವನ್ನು ಸಿದ್ಧಪಡಿಸಿದ್ದೆ. ಅದರೆ ಎಷ್ಟೋ ಜನರಿಗೆ ಅರ್ಥ ಗೊತ್ತಿಲ್ಲದಿದ್ದರೂ ಈಗಲೂ ಇದನ್ನು ಗುನುಗುತ್ತಾರೆ ಎನ್ನುವುದು ತಿಳಿದಿರಲಿಲ್ಲ' ಎನ್ನುತ್ತಾರೆ ಧನುಷ್​. ಅವರು ಈ ಹಾಡನ್ನು 'ಸೂಪ್ ಸಾಂಗ್' ಎಂದೂ ಕರೆಯುತ್ತಾರೆ. ಪ್ರೀತಿಯಲ್ಲಿ ಎದೆಗುಂದುವ ಮತ್ತು ಹತಾಶನಾದ ಯುವಕ ಹಾಡುವ ಹಾಡಿದು. ಆದ್ದರಿಂದ ಜನರಿಗೆ ಹೆಚ್ಚು ಇಷ್ಟವಾಯಿತು ಎನ್ನುತ್ತಾರೆ.