Asianet Suvarna News Asianet Suvarna News

BBK9 ವಿನೋದ್ ಗೊಬ್ಬರಗಾಲ ವರ್ತನೆ ಇಷ್ಟವಿಲ್ಲ, ಜ್ವರದಿಂದಎಲಿಮಿನೇಟ್ ಆಗಿರುವೆ: ಕಾವ್ಯಾಶ್ರೀ

ಚಿಕನ್‌ ಕೇಳಿವ ವಿಚಾರವನ್ನು ನೆಗೆಟಿವ್ ಆಗಿ ಸ್ವೀಕರಿಸಿದ ನೆಟ್ಟಿಗರಿಗೆ ಕ್ಲಾರಿಟಿ ಕೊಟ್ಟ ಕಾವ್ಯಾ. ಎಲಿಮಿನೇಟ್ ಆಗಲು ಕಾರಣ ಇಷ್ಟೆ...
 

Fever and medication made me weak says bigg boss 9 kavya shree vcs
Author
First Published Dec 9, 2022, 12:08 PM IST

ಬಿಗ್ ಬಾಸ್‌ ಸೀಸನ್ 9ರಿಂದ ಹೊರ ಬಂದಿರುವ 7ನೇ ಸ್ಪರ್ಧಿ ಕಾವ್ಯಾಶ್ರೀ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ನಾಮಿನೇಟ್ ಆಗದೇ ಸೇಫ್ ಆದವರು, ನಾಮಿನೇಟ್ ಆಗಿಯೂ ಸೇಫ್ ಆದವರು, ಕ್ಯಾಪ್ಟನ್ ಆನಂತರ ಕಿಚ್ಚನ ಚಪ್ಪಾಳೆ ಎಲ್ಲವೂ ಸಿಕ್ಕಿದೆ ಆದರೆ ಟಾಸ್ಕ್‌ ಮಾಡಿಲ್ಲ ಎಂದು. ವೀಕ್ಷಕರು ಮಾತ್ರವಲ್ಲದೆ ಬಿಬಿ ಮನೆಯಲ್ಲಿ ಅರುಣ್ ಸಾಗರ್, ಆರ್ಯವರ್ಧನ್ ಮತ್ತು ರಾಕೇಶ್ ಅಡಿಗ ಚರ್ಚೆ ಮಾಡಿದ್ದರು. ಅಷ್ಟಕ್ಕೂ ಕಾವ್ಯಾ ಎಲಿಮಿನೇಟ್ ಆಗಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. 

'ಮಂಗಳಗೌರಿ ಮದುವೆ ಸೀರಿಯಲ್‌ನ ನೋಡಿ ಜನರು ನನ್ನ ಪಾತ್ರಕ್ಕೆ ಕನೆಕ್ಟ್‌ ಮಾಡಿಕೊಳ್ಳುತ್ತಾರೆ. ಆ ಧಾರಾವಾಹಿಯಲ್ಲಿ ಎಮೋಷನಲ್‌ ಹುಡುಗಿ ಆಗಿ ಸದಾ ಕಣ್ಣೀರು ಹಾಕುತ್ತಿದ್ದೆ. ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಲು ಕಾರಣವೇ ನನ್ನ ರಿಯಲ್ ವ್ಯಕ್ತಿತ್ವ ಏನೆಂದು ಜನರಿಗೆ ತಿಳಿಯಬೇಕು ಎಂದು ಅಲ್ಲದೆ ಈ ಮೂಲಕ ನನ್ನ ಜೀವನ ಒಳ್ಳೆ ರೂಪ ತೆಗೆದುಕೊಳ್ಳಬೇಕು. ಫೇಕ್ ಮಾಡದೆ ಪ್ರಾಮಾಣಿಕವಾಗಿ ಜೀವನ ನಡೆಸುತ್ತಿದ್ದೆ ಆದರೆ ಜನರು ಹೇಗೆ ಸ್ವೀಕರಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ' ಎಂದು ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಕಾವ್ಯಾಶ್ರೀ ಮಾತನಾಡಿದ್ದಾರೆ. 

ನೆಗೆಟಿವ್ ಕಾಮೆಂಟ್ಸ್‌: 

ಕಾವ್ಯಾಶ್ರೀಗೆ ಚಿಕನ್ ಅಂದ್ರೆ ತುಂಬಾನೇ ಇಷ್ಟ. ಪದೇ ಪದೇ ಕ್ಯಾಮೆರಾ ಮುಂದೆ ನಿಂತುಕೊಂಡು ಬಿಗ್ ಬಾಸ್ ಚಿಕನ್ ಕೊಡಿ, ಸುದೀಪ್ ಸರ್ ಚಿಕನ್ ಕೊಡಿ, ಮನೆಗೆ ದಿನಸಿ ಬೇಡ ಚಿಕನ್ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದರು. ಕಾವ್ಯಾ ಬೇಡಿಕೆಯನ್ನು ನೆಟ್ಟಿಗರು ನೆಗೆಟಿವ್ ಆಗಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ. 'ಫುಡ್‌ ಕ್ರೇವಿಂಗ್ ಆಗುವುದು ತುಂಬಾನೇ ಕಾಮನ್ ಬಿಬಿ ಮನೆಯಲ್ಲಿ ಏನೂ ಇಲ್ಲದೆ ಜೀವನ ನಡೆಸಬೇಕು ಆಸೆಗಳು ತುಂಬಾನೇ ಇರುತ್ತದೆ ಫ್ಯಾಮಿಲಿ ಬಿಟ್ಟು ಇರಬೇಕು' ಎಂದು ಕಾವ್ಯಾ ಹೇಳಿದ್ದಾರೆ.

Fever and medication made me weak says bigg boss 9 kavya shree vcs

ಜ್ವರ ಕಾರಣ:

'ಹಲವು ದಿನಗಳ ಕಾಲ ನಾನು ಔಷದಿಗಳನ್ನು ತೆಗೆದುಕೊಳ್ಳುತ್ತಿದ್ದೆ. ನನ್ನ ಆರೋಗ್ಯದಲ್ಲಿ ಏರುಪೇರು ಕಂಡಿತ್ತು ಹೀಗಾಗಿ ನನ್ನ ಎನರ್ಜಿ ಲೆವೆಲ್ ಕಡಿಮೆ ಆಗಿತ್ತು ಈ ಕಾರಣಕ್ಕೆ ನಾನು ಎಲಿಮಿನೇಟ್ ಆಗಿಬಹುದು. ನಾನು ಪ್ರತಿ ಗೇಮ್‌ನಲ್ಲೂ ಭಾಗವಹಿಸಿರುವ ರೀತಿ ಬಗ್ಗೆ ತುಂಬಾನೇ ಹೆಮ್ಮೆ ಇದೆ.' ಎಂದಿದ್ದಾರೆ ಕ್ಯಾವ್ಯಾ.

BBK9 ಬಿಗ್ ಬಾಸ್ ಮನೆಯಿಂದ ಮಂಗಳ ಗೌರಿ ಔಟ್‌; ಹುಡುಕ್ರೋ ಪೊಲೀಸಪ್ಪನ...

ಕ್ಯಾಪ್ಟನ್ಸಿ:

ಒಂದು ವಾರಕ್ಕೆ ಕಾವ್ಯಾ ಬಿಬಿ ಮನೆ ಕ್ಯಾಪ್ಟನ್ ಆಗುತ್ತಾರೆ. ಕ್ಯಾಪ್ಟನ್ ಆದಾಗ ಇಡೀ ಮನೆಯನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ ಎಂದು ಕಿಚ್ಚ ಸುದೀಪ್ ಮೆಚ್ಚಿದ್ದಾರೆ. 'ಬಿಗ್ ಬಾಸ್‌ ಮನೆಯಲ್ಲಿ ಜವಾಬ್ದಾರಿಯನ್ನು ಹೊತ್ತಿಕೊಳ್ಳುವುದು ಸುಲಭದ ಮಾತಲ್ಲ. ಕ್ಯಾಪ್ಟನ್ ಆದ ವಾರ ನನ್ನಲ್ಲಿ ತುಂಬಾನೇ ಕೋಪವಿತ್ತು ಆದರೆ ಇದರಿಂದ ನನಗೆ ಪಾಸಿಟಿವ್ ಟ್ಯಾಗ್ ಸಿಕ್ಕಿ ಇಡೀ ವಾರ ನನ್ನ ಕಾನ್ಫಿಡೆನ್ಸ್‌ ಹೆಚ್ಚಿಸಿತ್ತು. ಸುದೀಪ್ ಸರ್ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

BBK9 ನಕ್ಕರೆ ಬೈಯುತ್ತಿದ್ದರು, ಆಗ ತಾಯಿಗೆ ಆಗೋ ನೋವು ಅಷ್ಟಿಷ್ಟಲ್ಲ: ವಿನೋದ್ ಗೊಬ್ಬರಗಾಲ

ವಿನೋದ್ ಸ್ನೇಹ:

'ವಿನೋದ್ ಗೊಬ್ಬರಗಾಲ ಮತ್ತು ನಾನು ಒಂದೇ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆವು ಹಲವು ಕಾರ್ಯಕ್ರಮಗಳಿಗೆ ಭೇಟಿ ಮಾಡಿದ್ದೀವಿ ತುಂಬಾನೇ ಗೌರವದಿಂದ ಮಾತನಾಡಿಸಿಕೊಂಡು ನಡೆಸಿಕೊಳ್ಳುತ್ತಿದ್ದರು ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಮೇಲೆ ವರ್ತಿಸುತ್ತಿರುವ ರೀತಿ ಬದಲಾಗಿದೆ. ವಿನೋದ್ ಹೊಸ ಗುಣವನ್ನು ನನಗೆ ತಡೆದುಕೊಳ್ಳಲು ಆಗುತ್ತಿರಲಿಲ್ಲ. ರೂಪೇಶ್ ಕೂಲ್ ಮತ್ತು ತಾಳ್ಮೆ ಹೊಂದಿರುವ ವ್ಯಕ್ತಿ. ಆಟವನ್ನು ಸ್ಮಾರ್ಟ್‌ ಆಗಿ ಆಡುತ್ತಾರೆ. ವಿನ್ನರ್ ಸ್ಥಾನಕ್ಕೆ ರಾಕೇಶ್‌ನ ಆಯ್ಕೆ ಮಾಡಿಕೊಳ್ಳುವೆ' ಎಂದು ಕಾವ್ಯಾ ಹೇಳಿದ್ದಾರೆ.

Follow Us:
Download App:
  • android
  • ios