ದೀಪಿಕಾ ಪಡುಕೋಣೆ ಬೆಂಗಳೂರಿಗೆ ಬಂದ್ರೆ ಈ ಫುಡ್ ಜಾಯಿಂಟ್‌ಗೆ ಗ್ಯಾರಂಟಿ!
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಈಗ ನ್ಯೂ ಮಾಮ್. ಇವರು ಇತ್ತೀಚೆಗೆ ದಿಲ್ಜಿತ್ ದೋಸಾಂಜ್ ಆರ್ಕೆಸ್ಟ್ರಾದಲ್ಲಿ ಭಾಗವಹಿಸೋಕೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಬೆಂಗಳೂರಿಗೆ ಬಂದಾಗ ತಮ್ಮ ಕೆಲವು ಫೇವರಿಟ್ ಫುಡ್ ಜಾಯಿಂಟ್‌ಗಳಿಗೆ ಭೇಟಿ ಕೊಡ್ತಾರಂತೆ. ಅದ್ಯಾವುದು, ನೀವೂ ಟ್ರೈ ಮಾಡಿ.
ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಬೆಂಗಳೂರಿನ ಹೆಮ್ಮೆ. ಬೆಂಗಳೂರಿನ ಫುಡ್ ಅಂದ್ರೆ ಆಕೆಗೆ ಆಸೆ. ರಸಂ ಅವರ ಇಷ್ಟದ ಆಹಾರವಂತೆ. ಮನೆಯಲ್ಲಿ ತಯಾರಿಸಿದ ದಕ್ಷಿಣ ಭಾರತೀಯ ಭಕ್ಷ್ಯಗಳೆಂದರೆ ಇಷ್ಟ. ಇಲ್ಲಿ ಆಕೆಯ ನೆಚ್ಚಿನ ಸಿಹಿತಿಂಡಿ ಅಂಗಡಿಯಿಂದ ಹಿಡಿದು ಹಲವು ಈಟರಿಗಳನ್ನು ಇಲ್ಲಿ ನೀಡಲಾಗಿದೆ. ನೀವು ದೀಪಿಕಾ ಫ್ಯಾನ್ ಆಗಿದ್ದರೆ ಫುಡ್ಡೀ ಆಗಿದ್ದರೆ ಇದನ್ನು ಗಮನಿಸಿ.
ಇಂದಿರಾ ನಗರ ಕಾರ್ನರ್ ಹೌಸ್
ಬೆಂಗಳೂರಿಗೆ ದೀಪಿಕಾ ಪಡುಕೋಣೆ ಬಂದರೆ ಇಂದಿರಾ ನಗರದ ಕಾರ್ನರ್ ಹೌಸ್‌ಗೆ ಭೇಟಿ ಕೊಟ್ಟು ತಮ್ಮ ನೆಚ್ಚಿನ ಚಾಕೋಲೇಟ್ ಐಸ್‌ಕ್ರೀಮ್ ಸವಿಯುತ್ತಾರೆ. ಇದು ಬಹಳ ಪ್ರಸಿದ್ಧವಾದ ಮತ್ತು ಹಳೆಯ ಐಸಿಕ್ರೀಮ್ ಶಾಪ್. ಡೆತ್ ಬೈ ಚಾಕೊಲೇಟ್ ಅಂದರೆ ದೀಪಿಕಾಗೆ ತುಂಬಾನೇ ಇಷ್ಟ. ಈಗ ತಾವಿರುವ ಹೋಟೆಲ್‌ಗೇ ಅದನ್ನು ತರಿಸಿಕೊಳ್ಳುತ್ತಾರೆ.
ವೀಣಾ ಸ್ಟೋರ್ಸ್ ಇಡ್ಲಿ-ವಡಾ
ದೀಪಿಕಾ ಪಡುಕೋಣೆ ನಿಜವಾದ ಬೆಂಗಳೂರಿಗರಂತೆ, ದಕ್ಷಿಣ ಭಾರತದ ರುಚಿಕರವಾದ ಇಡ್ಲಿ-ವಡಾ ಸವಿಯಲು ಮಲ್ಲೇಶ್ವರಂನಲ್ಲಿರುವ ವೀಣಾ ಸ್ಟೋರ್ಸ್‌ಗೆ ಹೋಗುವುದುಂಟು. ಈ ತಿನಿಸು ಬೆಂಗಳೂರಿನಲ್ಲಿ ಅವರ ಮೆಚ್ಚಿನ ಪಟ್ಟಿಯಲ್ಲಿದೆ. ಹಿಂದೊಮ್ಮೆ ಅವರು ವೀಣಾ ಸ್ಟೋರ್ಸ್‌ನಲ್ಲಿ ಬೆಳಗಿನ ಜಾವದಲ್ಲಿ ರುಚಿಕರವಾದ ಉಪಹಾರ ಸವಿಯಲು ಕಾಣಿಸಿಕೊಂಡಿದ್ದರು. ಬೆಂಗಳೂರಿನ ಜನರಿಗೆಲ್ಲ ಇದು ಫೇವರಿಟ್. ಸಿಹಿ ಪೊಂಗಲ್, ಬಿಸಿ ಬೇಳೆ ಬಾತ್, ಪುಳಿಯೋಗರೆ, ಇಡ್ಲಿ ಚಟ್ನಿ ಮತ್ತು ಉಪ್ಮಾ ಲಭ್ಯ.
ಶ್ರೀ ಕೃಷ್ಣ ಸ್ವೀಟ್ಸ್ ಮೈಸೂರು ಪಾಕ್
ದೇಸಿ ತುಪ್ಪ, ಬೇಳೆ ಹಿಟ್ಟು, ಸಕ್ಕರೆ ಪಾಕ ಮತ್ತು ಒಂದು ಚಿಟಿಕೆ ಅರಿಶಿನ ಪುಡಿಯ ಅದ್ಭುತ ಸಂಯೋಜನೆ ಮೈಸೂರು ಪಾಕ್. ಅದು ಕೂಡ ಶ್ರೀ ಕೃಷ್ಣ ಸ್ವೀಟ್ಸ್‌ನಿಂದ ಆಗಿದ್ದರೆ ದೀಪಿಕಾ ಬಾಯಲ್ಲಿ ನೀರು. ಹಿಂದೆ ಒಮ್ಮೆ ಈ ಅಂಗಡಿಯ ಮೈಸೂರು ಪಾಕ್ ಮೇಲಿನ ಪ್ರೀತಿಯ ಬಗ್ಗೆ ದೀಪಿಕಾ ಟ್ವೀಟ್ ಮಾಡಿದ್ದರು. ಅಲ್ಲಿಂದ ಮೈಸೂರು ಪಾಕ್ ತರುವಂತೆ ರಣವೀರ್ ಸಿಂಗ್ ಅವರನ್ನು ಕೇಳಿದ್ದರು. ಬಾಣಸವಾಡಿಯ ಈ ಅಂಗಡಿ ಎಲ್ಲಾ ಸಿಹಿತಿಂಡಿಗಳಿಗೆ ಫೇವರಿಟ್.
ಲೆ ಸರ್ಕ್ ಸಿಗ್ನೇಚರ್
ಈ ಸುಂದರವಾದ ಇಟಾಲಿಯನ್ ರೆಸ್ಟೋರೆಂಟ್ ದೀಪಿಕಾ ಅವರ ಅಚ್ಚುಮೆಚ್ಚಿನ ಈಟರಿಗಳಲ್ಲಿ ಒಂದಾಗಿದೆ. ನ್ಯೂಯಾರ್ಕಿನ Le Cirqueನ ಬೆಂಗಳೂರು ಫ್ರಾಂಚೈಸ್ ಆಗಿರುವ Le Cirque Signature, ಹೋಟೆಲ್ ಲೀಲಾ ಪ್ಯಾಲೇಸ್‌ನಲ್ಲಿದೆ. ಆಕೆಯ ಮದುವೆಯ ಆರತಕ್ಷತೆ ಅಲ್ಲೇ ನಡೆದಿತ್ತು. ಆಕೆ ನ್ಯೂಯಾರ್ಕ್ ನಗರದ ರೆಸ್ಟೋರೆಂಟ್ ಅನ್ನು ಪ್ರೀತಿಸುತ್ತಾರೆ. ಸಕತ್ ಇಟಾಲಿಯನ್ ತಿನಿಸುಗಳು ಇಲ್ಲಿ ಲಭ್ಯ.
ಹಾಟ್ ಚಿಪ್ಸ್
ನೀವು ಬೆಂಗಳೂರಿಗರಾದರೆ ಇಲ್ಲಿ ರುಚಿಕರವಾದ ಚಿಪ್ಸ್ ಖರೀದಿಸಿರಲೇಬೇಕು. ದೀಪಿಕಾ ಅವರ ಟ್ವೀಟ್‌ಗಳಲ್ಲಿ ಹಾಟ್ ಚಿಪ್ಸ್ ಬಹಳ ಸಲ ಉಲ್ಲೇಖ ಪಡೆದಿದೆ. ಅಂಗಡಿಯಿಂದ ತಂದ ಮಸಾಲೆಯುಕ್ತ ಆಲೂಗಡ್ಡೆ ಚಿಪ್ಸ್ ದೀಪಿಕಾಳಿಗೆ ಇಷ್ಟ. ಮತ್ತು ಅದನ್ನು ಯಾರು ಇಷ್ಟಪಡುವುದಿಲ್ಲ? ದಕ್ಷಿಣ ಭಾರತದ ಸಿಗ್ನೇಚರ್ ಸಾಲ್ಟೆಡ್ ಬನಾನಾ ಚಿಪ್ಸ್ ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಲಭ್ಯ.
ಸಾವಿರ ಕೋಟಿ ಗಳಿಸಿದ ಭಾರತದ ಮೊದಲ ನಟಿ ಯಾರು? ಊಹೆಗೂ ನಿಲುಕದ 54 ವರ್ಷದ ದಕ್ಷಿಣದ ಬೆಡಗಿ ಈಕೆ!
ಸಿಟಿಆರ್ ಮಸಾಲೆ ದೋಸೆ
ಗೋಲ್ಡನ್ ಬ್ರೌನ್ ಬಣ್ಣದ ಗರಿಗರಿಯಾದ ದೋಸೆ, ಅದರ ತೆಳುವಾದ ಕಾಗದದ ಮೇಲ್ಮೈಯಲ್ಲಿ ಬೆಣ್ಣೆಯನ್ನು ಜಾರುವಂತೆ ಮಾಡುತ್ತದೆ. ಅದು ದೀಪಿಕಾ ಅವರ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಸೆಂಟ್ರಲ್ ಟಿಫಿನ್ ರೂಮ್ (CTR) ನ ಸಿಗ್ನೇಚರ್ ಖಾದ್ಯ. ಇದು ಆಕೆಗೆ ಇಷ್ಟ. ಪಡುಕೋಣೆ ಪ್ರಕಾರ, ಈ ರೆಸ್ಟೊರೆಂಟ್‌ನಲ್ಲಿರುವ ಎಲ್ಲ ಆಹಾರವೂ ಆಕೆಗೆ ಇಷ್ಟ. 1920 ರ ದಶಕದಲ್ಲಿ ಮಲ್ಲೇಶ್ವರಂನಲ್ಲಿ ಸ್ಥಾಪಿಸಲಾದ CTR ತನ್ನದೇ ಆದ ಪರಂಪರೆ ಹೊಂದಿದೆ. ಪ್ರತಿಯೊಬ್ಬರೂ ಇಲ್ಲಿ ಗೋಳಿಬಜೆ, ಬೆಣ್ಣೆ ದೋಸೆ, ರವಾ ಇಡ್ಲಿ, ಕೊತ್ತಂಬರಿ ಚಟ್ನಿ ಮತ್ತು ಇಡ್ಲಿ ಚಟ್ನಿಯನ್ನು ಇಷ್ಟಪಡುತ್ತಾರೆ.
ಲವ್ & ಕ್ರಂಬಲ್
ಲವ್ & ಕ್ರಂಬಲ್ ಒಂದು ಉಪಾಹಾರ ಗೃಹವಲ್ಲ, ಅದೊಂದು ಹೋಮ್‌ಮೇಡ್ ಕುಕೀ. ದೀಪಿಕಾ ಇದನ್ನು ವಿಶ್ವದ ಅತ್ಯುತ್ತಮ ಕುಕೀ ಎಂದು ಕರೆದಿದ್ದಾರೆ. ದೀಪಿಕಾ ಈ ಬ್ರ್ಯಾಂಡ್‌ನ ಹೋಮ್‌ಬೇಕ್ ಮಾಡಿದ ಕುಕೀಗಳನ್ನು ಪ್ರೀತಿಸುತ್ತಾರೆ. ಬೇಕರ್ ಅನುತಾ ಅವರು ಇದರ ಮೆನುವಿನಲ್ಲಿ ವಿವಿಧ ರೀತಿಯ ಕುಕೀಸ್ ಮತ್ತು ಬ್ರೂಕಿಗಳನ್ನು ನೀಡುತ್ತಾರೆ. ಡಾರ್ಕ್ ಚಾಕೊಲೇಟ್ ಚಿಪ್, ಎಸ್'ಮೋರ್ಸ್, ನುಟೆಲ್ಲಾ ಸೀ ಸಾಲ್ಟ್, ಕಡಲೆಕಾಯಿ ಬೆಣ್ಣೆ ಮತ್ತು ಡಚ್ ಮಿಲ್ಕ್ ಚಾಕೊಲೇಟ್ ಇವುಗಳಲ್ಲಿ ಕೆಲವು.
ಮದುವೆಯಾಗುತ್ತಿದ್ದಂತೆಯೇ ಕೀರ್ತಿ ಸುರೇಶ್ ನಟನಗೆ ಗುಡ್ ಬೈ! ಅಭಿಮಾನಿಗಳಿಗೆ ಶಾಕ್?