ಡಬಲ್ ಡೋಸ್ ತಗೊಂಡಿದ್ರೂ ಫರಾ ಖಾನ್ಗೆ ಕೊರೋನಾ
* ಬಾಲಿವುಡ್ ನಿರ್ಮಾಪಕಿ ಫರಾ ಖಾನ್ ಗೆ ಕೊರೋನಾ ಪಾಸಿಟಿವ್
* ಡಬಲ್ ಡೋಸ್ ಲಸಿಕೆ ತೆಗೆದುಕೊಂಡಿದ್ದರು
* ಸೋಶಿಯಲ್ ಮೀಡಿಯಾ ಮುಖೆನ ತಿಳಿಸಿದ ಕೋರಿಯೋಗ್ರಾಫರ್
ಮುಂಬೈ (ಸೆ. 01) ಬಾಲಿವುಡ್ ನಿರ್ಮಾಪಕಿ-ನೃತ್ಯ ನಿರ್ದೇಶಕಿ ಫರಾ ಖಾನ್ ಕುಂದರ್ ಕೊರೋನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಅವರೇ ಬರೆದುಕೊಂಡಿದ್ದಾರೆ.
"ಮೈ ಹೂನ್ ನಾ", "ಓಂ ಶಾಂತಿ ಓಂ" ಮತ್ತು "ಹ್ಯಾಪಿ ನ್ಯೂ ಇಯರ್" ನಂತಹ ಚಿತ್ರಗಳಿಗೆ ಹೆಸರುವಾಸಿಯಾದ , ಫರಾ ಖಾನ್ ಲಸಿಕೆ ಪಡೆದುಕೊಂಡಿದ್ದರೂ ವೈರಸ್ ತಗುಲಿದೆ.
ಪಿಪಿಇ ಕಿಟ್ ಅಗತ್ಯ ಇಲ್ಲವೆಂದ ವೈದ್ಯರು
ಡಬಲ್ ವ್ಯಾಕ್ಸಿನೇಷನ್ ಮಾಡಲಾಗಿದ್ದರೂ ಮತ್ತು ಹೆಚ್ಚಾಗಿ ಡಬಲ್ ವ್ಯಾಕ್ಸ್ಡ್ ಜನರೊಂದಿಗೆ ಕೆಲಸ ಮಾಡುತ್ತಿದ್ದರೂ, ನನಗೆ ಕೋವಿಡ್ ಇರುವುದು ಧೃಢಪಟ್ಟಿದೆ.ಪರೀಕ್ಷೆಗೆ ಒಳಗಾಗಲು ನಾನು ಸಂಪರ್ಕ ಹೊಂದಿದ ಎಲ್ಲರಿಗೂ ಈಗಾಗಲೇ ತಿಳಿಸಿದ್ದೇನೆ ಎಂದು 56 ವರ್ಷದ ನಿರ್ಮಾಪಕಿ ತಿಳಿಸಿದ್ದಾರೆ.
ನನ್ನ ಸಂಪರ್ಕಕ್ಕೆ ಬಂದ ಯಾರನ್ನಾದರೂ ಮರೆತಿದ್ದರೆ ನೀವೇ ನೆನಪು ಮಾಡಿಕೊಂಡು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಖಾನ್ ಮನವಿ ಮಾಡಿಕೊಂಡಿದ್ದಾರೆ.
ಫರಾ ಪ್ರಸ್ತುತ ಜೀ ಕಾಮಿಡಿ ಶೋ ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಶಿಲ್ಪಾ ಶೆಟ್ಟಿ ಕುಂದ್ರಾ ಜೊತೆ ಡ್ಯಾನ್ಸ್ ರಿಯಾಲಿಟಿ ಶೋ ಶೂಟಿಂಗ್ ಮಾಡಿದ್ದರು. ಫರಾ ಖಾನ್ ಬಾಲಿವುಡ್ ನ ಡ್ಯಾನ್ಸ್ ಗೆ ಹೊಸ ಆಯಾಮ ಕೊಟ್ಟವರು.