ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಸೊಳ್ಳೆ ಬ್ಯಾಟ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ಸೊಳ್ಳೆ ಬ್ಯಾಟ್ ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಟಾರ್ ಮನೆ ಅಂದ್ಮೇಲೆ ಸೊಳ್ಳೆಗಳಿಗೂ ಎಂಟ್ರಿ ಇರಲ್ಲ ಅಂತ ಅಭಿಮಾನಿಗಳು ಅಂದುಕೊಂಡಿರುತ್ತಾರೆ. ಆದರೆ ತಲೈವಾ ಮನೆಗೂ ಸೊಳ್ಳೆಗಳು ನುಗ್ಗುತ್ತವೆ ಎಂದು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಅಷ್ಟಕ್ಕೂ ಈ ಅಚ್ಚರಿಗೆ ಕಾರಣವಾಗಿದ್ದು ಇತ್ತೀಚಿಗಷ್ಟೆ ರಿಷಬ್ ಶೆಟ್ಟಿ ಸೂಪರ್ ಸ್ಟಾರ್ ಮನೆಗೆ ಭೇಟಿ ನೀಡಿ ಕ್ಲಿಕ್ಕಿಸಿಕೊಂಡ ಫೋಟೋಗಳು. ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿರುವ ರಜನಿಕಾಂತ್, ರಿಷಬ್ ಶೆಟ್ಟಿ ಅವರನ್ನು ಮನೆಗೆ ಕರೆದಿದ್ದರು. ತಲೈವಾ ಭೇಟಿಯಾದ ಫೋಟೋಗಳನ್ನು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ಈ ಫೋಟೋದಲ್ಲಿ ರಿಷಬ್ ಶೆಟ್ಟಿ ಮತ್ತು ರಜನಿಕಾಂತ ಮಾತನಾಡುತ್ತಾ ಕುಳಿದ್ದಾರೆ. ಮತ್ತೊಂದು ಫೋಟೋದಲ್ಲಿ ರಿಷಬ್ ಶೆಟ್ಟಿ, ಸೂಪರ್ ಸ್ಟಾರ್ ಪಾದ ಮುಟ್ಟಿ ನಮಸ್ಕರಿಸಿದ್ದಾರೆ. ಆದರೆ ಅಭಿಮಾನಿಗಳ ಮಾತ್ರ ಟೇಬಲ್ ಮೇಲೆ ಹಾಗೂ ಮತ್ತೊಂದು ಟೇಬಲ್ ಕೆಳಗೆ ಇಟ್ಟಿದ್ದ ಸೊಳ್ಳೆ ಬ್ಯಾಟ್ ಮೇಲೆ ಹೋಗಿದೆ. ಸಾಮಾನ್ಯವಾಗಿ ಸೊಳ್ಳೆ ಬ್ಯಾಟ್ ಮದ್ಯಮ ವರ್ಗದ ಕುಟುಂಬದವರ ಮನೆಯಲ್ಲಿ ಇರುತ್ತದೆ. ಆದರೆ ಸೂಪರ್ ಸ್ಟಾರ್ ಮನೆಯಲ್ಲೂ ಸೊಳ್ಳೆ ಬ್ಯಾಟ್ ನೋಡಿ ಅಭಿಮಾನಿಗಳಿಗೆ ಅಚ್ಚರಿಯಾಗಿದೆ.
ಇದನ್ನು ನೋಡಿದ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ರಜನಿಕಾಂತ್ ಅವರಿಗೂ ಸೊಳ್ಳೆ ಬ್ಯಾಟ್ ಬೇಕು ಎಂದು ತಿಳಿದು ಸಮಾಧಾನ ಆಯಿತು. ಅವರ ಮನೆ ಪ್ರವೇಶ ಮಾಡುವ ಧೈರ್ಯ ಮಾಡಲ್ಲ ಎಂದು ಭಾವಿಸಿದ್ದೆ' ಎಂದು ಒಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ರಜನಿಕಾಂತ್ ಕೂಡ ತಮ್ಮ ಮನೆಯಲ್ಲಿ ಸೊಳ್ಳೆ ಬ್ಯಾಟ್ ಬಳಸುತ್ತಾರೆ, ಅದು ಮಧ್ಯಮ ವರ್ಗಕ್ಕೆ ಮಾತ್ರ ಸೀಮಿತ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.
Rishab Shetty Meets Rajinikanth: ಕಾಂತಾರದ ಶಿವನಿಗೆ ಗೋಲ್ಡ್ ಚೈನ್ ಗಿಫ್ಟ್ ಆಗಿ ನೀಡಿದ ರಜನಿಕಾಂತ್?
ಅಂದಹಾಗೆ ಅಭಿಮಾನಿಗಳು ಇಷ್ಟಕ್ಕೆ ಸುಮ್ಮನಾಗದೆ ರಿಷಬ್ ಜೊತೆ ಯಾವ ಭಾಷೆಯಲ್ಲಿ ಮಾತನಾಡಿದ್ರು ಅಂತ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಾಂತಾರ ಸ್ಟಾರ್ ಕನ್ನಡ ಎಂದು ಹೇಳಿದ್ದಾರೆ. ಇನ್ನು ರಿಷಬ್ ಶೆಟ್ಟಿ ಕೊರಳಲ್ಲಿ ಚಿನ್ನದ ಸರವನ್ನು ಗಮನಿಸಿದ ಅಭಿಮಾನಿಗಳು ಇದು ರಜನಿಕಾಂತ್ ನೀಡಿದ ಗಿಫ್ಟ್ ಎಂದು ಕಂಡುಹಿಡಿದಿದ್ದಾರೆ. ಸೂಪರ್ ಭೇಟಿಯ ವೇಳೆ ಚಿನ್ನದ ಸರ ಕಂಡಿರಲಿಲ್ಲ. ಬಳಿಕ ರಿಷಬ್ ಕೊರಳಲ್ಲಿ ಸರ ನೋಡಿದ ಅಭಿಮಾನಿಗಳು ಸೂಪರ್ ಸ್ಟಾರ್ ನೀಡಿದ ಗಿಫ್ಟ್ ಕಾಮೆಂಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಉತ್ತರಿಸಿದ ರಿಷಬ್ ಹೌದು ಎನ್ನುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
Rishab Shetty ರಜಿನಿಕಾಂತ್ ಭೇಟಿ ಮಾಡಿದ ಆಶೀರ್ವಾದ ಪಡೆದ ಕಾಂತಾರ ಶಿವ!
ಅಂದಹಾಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯಿಂದನೂ ಚಿತ್ರಕ್ಕೆ ಮೆಚ್ಚುಗೆ ಹರಿದುಬಂದಿದೆ. ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾ ನೋಡಿ ಹಾಡಿಹೊಗಳಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ರಿಷಬ್ ನಟನೆಗೆ ರಜನಿಕಾಂತ್ ಫಿದಾ ಆಗಿದ್ದರು. ಬಳಿಕ ರಿಷಬ್ ಶೆಟ್ಟಿ ಅವರನ್ನು ಮನೆಗೆ ಆಹ್ವಾನಿಸಿ ವಿಶೇಷ ಆತಿಥ್ಯ ನೀಡಿದ್ದರು. ಇಬ್ಬರ ಭೇಟಿಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
