Rishab Shetty ರಜಿನಿಕಾಂತ್ ಭೇಟಿ ಮಾಡಿದ ಆಶೀರ್ವಾದ ಪಡೆದ ಕಾಂತಾರ ಶಿವ!
ಚೆನ್ನೈ ನಿವಾಸದಲ್ಲಿ ತಲೈವ ರಜನಿಕಾಂತ್‌ನ ಭೇಟಿ ಮಾಡಿದ ನಟ ರಿಷಬ್ ಶೆಟ್ಟಿ. ಫೋಟೋ ವೈರಲ್...
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ರನ್ನು ಚೆನ್ನೈ ನಿವಾಸದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಭೇಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದೆ.
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನ ಮೆಚ್ಚಿಕೊಂಡ ತಲೈವ ಬೆನ್ನು ತಟ್ಟಿ ಕುಶಲೋಪರಿ ವಿಚಾರಿಸಿದ್ದಾರೆ. ಜೊತೆ ಶಾಲು ಹಾರ ಹಾಕಿ ಸನ್ಮಾನ ಮಾಡಿದ್ದಾರೆ.
'ನಾವು ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚಿದೆ' ಹೊಂಬಾಳೆ ಫಿಲ್ಮ್ಸ್‌ನ ಕಾಂತರ ಚಿತ್ರಕ್ಕಿಂತ ಅದ್ಬುತವಾಗಿ ಇದನ್ನು ಯಾರೂ ಹೇಳಿರಲಿಲ್ಲ. ರಿಷಭ್ ಶೆಟ್ಟಿ ನೀವು ನನಗೆ ಮೈನವಿರೇಳಿಸುವಂಥ ಚಿತ್ರ ನೀಡಿದ್ದೀರಿ' ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದರು.
'ರಿಷಬ್ ಒಬ್ಬ ರೈಟರ್, ನಟ ಹಾಗೂ ನಿರ್ದೇಶಕರಾಗಿ ನಾನು ನಿಮಗೆ ಹ್ಯಾಟ್ಸ್‌ಆಫ್ ಹೇಳುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇರುವ ಮಾಸ್ಟರ್‌ಪೀಸ್ ಇದರ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಅಭಿನಂದನೆಗಳು' ಎಂದು ರಜನಿಕಾಂತ್ ಹೇಳಿದ್ದರು.
'ನಿರೀಕ್ಷೆಯಂತೆಯೇ ರಿಷಭ್ ಶೆಟ್ಟಿ ಕೂಡ ರಜನಿಕಾಂತ್ ಅವರ ಪ್ರತಿಕ್ರಿಯೆಯಿಂದ ಆಕಾಶದಲ್ಲಿ ತೇಲುತ್ತಿದ್ದಾರೆ. ' ಪ್ರೀತಿಯ ರಜನಿಕಾಂತ್ ಸರ್. ನೀವು ಭಾರತ ಕಂಡ ಅತೀದೊಡ್ಡ ಸೂಪರ್ ಸ್ಟಾರ್. ಬಾಲ್ಯದಿಂದಲೂ ನಾನು ನಿಮ್ಮ ಅಭಿಮಾನಿ. ನಿಮ್ಮ ಈ ಮೆಚ್ಚುಗೆಯ ಮಾತುಗಳು ನನ್ನ ಕನಸನ್ನು ನನಸು ಮಾಡಿದೆ' ಎಂದಿದ್ದಾರೆ.
'ಸ್ಥಳೀಯವಾದಂಥ ಕಥೆಗಳನ್ನು ಮಾಡಲು ನೀವೇ ನನಗೆ ಸ್ಪೂರ್ತಿ. ನನ್ನೊಂದಿಗೆ ಇಡೀ ಪ್ರೇಕ್ಷಕರ ವರ್ಗಕ್ಕೂ ನೀವು ಆದರ್ಶ. ಥ್ಯಾಂಕ್ ಯು ಸರ್' ಎಂದು ಅವರ ಟ್ವೀಟ್‌ಗೆ ರಿಪ್ಲೈ ಮಾಡಿದ್ದಾರೆ.