ಶಿವಣ್ಣನಿಗೆ ಇಂದು ಆಪರೇಷನ್‌: ಬೇಗ ಗುಣಮುಖರಾಗಲೆಂದು ಅಭಿಮಾನಿಗಳಿಂದ ವಿಶೇಷ ಪೂಜೆ, ಹೋಮ!

ಗೋವಿಂದಣ್ಣ ದಂಪತಿಯಿಂದ ವಿಶೇಷ ಪೂಜೆಗಳು & ಹೋಮಗಳು ನಡೆಸುತ್ತಿದ್ದಾರೆ. ಗೋವಿಂದಣ್ಣ ಅವರು ಇಂದು ಇಡೀ ದಿನ ಹೋಮಗಳನ್ನ ಮಾಡಿಸಲಿದ್ದಾರೆ. ಗಣಪತಿ ಪೂಜೆ & ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ & ಹೋಮ, ಸುದರ್ಶನ ಪೂಜೆ & ಹೋಮ ನಡೆಯಲಿದೆ.
 

Fans Held Special Pooja and Homa For Actor Shivarajkumar Speedy Recovery grg

ಬೆಂಗಳೂರು(ಡಿ.24):  ಸ್ಯಾಂಡಲ್‌ವುಡ್‌ನ ಹ್ಯಾಟ್ರಿಕ್‌ ಹೀರೋ ನಟ ಡಾ. ಶಿವರಾಜ್ ಕುಮಾರ್‌ ಅವರಿಗೆ ಇಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ.  ಅಮೆರಿಕದ ನ್ಯೂಯಾರರ್ಕ್‌ನ ಎನ್‌ಸಿಐ ಆಸ್ಪತ್ರೆಯಲ್ಲಿ ನಟ ಶಿವರಾಜ್ ಕುಮಾರ್‌ಗೆ ಆಪರೇರಷನ್ ನಡೆಯಲಿದೆ. 

ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರು 35 ದಿನಗಳ ಕಾಲ ಅಮೆರಿಕದಲ್ಲೇ ಇಲಿದ್ದಾರೆ. ಮಿಯಾಮಿ ಕ್ಯಾನ್ಸರ್ ಇನ್ಸುಟ್ಯುಟ್‌ನಲ್ಲಿ ಶಿವಣ್ಣನಿಗೆ ಚಿಕಿತ್ಸೆ ನಡೆಯುತ್ತಿದೆ. ಇಂದು ಆಪರೇಷನ್ ಬಳಿಕ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿದ್ದಾರೆ. ಡಾ ಮುರುಗೇಶನ್ ಮನೋಹರ್ ವೈಧ್ಯರಿಂದ ಶಿವಣ್ಣನಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ.  ಮೂತ್ರ ಕೋಶದ ಕೆಳಭಾಗದಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಇನ್ನೂ ಮೊದಲ ಹಂತದಲ್ಲೇ ಇದೆ. ಹೀಗಾಗಿ ಕ್ಯಾನ್ಸರ್‌ಗೆ ಶಿವರಾಜ್ ಕುಮಾರ್ ಆಪರೇಷನ್ ಮಾಡಿಸಲಿದ್ದಾರೆ. 

ಸತತ 38 ವರ್ಷ, ಶಿವಣ್ಣ ಬಣ್ಣ ಹಚ್ಚದ ದಿನವೇ ಇಲ್ಲ! ಸಿನಿಕಾರ್ಮಿಕರ ಅನ್ನದಾತ, ದೊರೆಗಾಗಿ ಕಾದಿದೆ ಚಿತ್ರಲೋಕ!

ಇನ್ನು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್ ಬೇಗ ಗುಣಮುಖರಾಗಿ ಬರಲಿ ಎಂದು ಅಭಿಮಾನಿಳು ಹಾರೈಸಿದ್ದಾರೆ. ಬೇಗ ಗುಣಮುಖರಾಗಲೆಂದು ಶಿವಣ್ಣನ ಫ್ಯಾನ್ಸ್ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಸರ್ಜರಿ ಫಲಿಸಲು ವಿಶೇಷ ಪೂಜೆ, ಹೋಮಗಳನ್ನ ನಡೆಸುತ್ತಿದ್ದಾರೆ. 

32 ವರ್ಷಗಳಿಂದ‌ ಶಿವಣ್ಣ ಕಾರ್ ಡ್ರೈವರ್ ಆಗಿರುವ ಗೋವಿಂದಣ್ಣ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ‌ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಇನ್ನು ಶಿವಣ್ಣನ ಮನೆಯಲ್ಲೂ ಪೂಜೆ ಮಾಡುವ ಗಂಗಾಧರ ಸ್ವಾಮಿಗಳಿಂದ ಹೋಮ ನಡೆಯುತ್ತಿದೆ.  

ಗೋವಿಂದಣ್ಣ ದಂಪತಿಯಿಂದ ವಿಶೇಷ ಪೂಜೆಗಳು & ಹೋಮಗಳು ನಡೆಸುತ್ತಿದ್ದಾರೆ. ಗೋವಿಂದಣ್ಣ ಅವರು ಇಂದು ಇಡೀ ದಿನ ಹೋಮಗಳನ್ನ ಮಾಡಿಸಲಿದ್ದಾರೆ. ಗಣಪತಿ ಪೂಜೆ & ಹೋಮ, ಗುರು ಪ್ರಾರ್ಥನ ಸಂಕಲ್ಪ, ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ & ಹೋಮ, ಸುದರ್ಶನ ಪೂಜೆ & ಹೋಮ ನಡೆಯಲಿದೆ.

ಮಗಳು, ಪತ್ನಿಯೊಂದಿಗೆ ಮನೆಯಿಂದ ಹೊರಟಾಗ ಎಮೋಶನಲ್ ಆದ ಶಿವರಾಜ್‌ಕುಮಾರ್

ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್‌ಕುಮಾರ್  ಅವರು ಇಂದು  ಅಮೆರಿಕಕ್ಕೆ ಹೊರಟಿದ್ದರು. ಶಿವಣ್ಣ ಕುಟುಂಬ, ಅವರ ಆಪ್ತರು, ಸುದೀಪ್, ವಿನೋದ್ ರಾಜ್ ಸೇರಿದಂತೆ ಚಿತ್ರರಂಗದ ಹಲವು ಹಿತೈಷಿಗಳು ಅವರನ್ನು ಭೇಟಿಯಾಗಿ ಶುಭ ಹಾರೈಸಿದ್ದಾರೆ. ಬೆಳಿಗ್ಗೆ ಶಿವಣ್ಣ ಮನೆಯಲ್ಲಿ ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜೆ ನಡೆದಿದೆ. ಹಾಗೇ, ನಟ ಶಿವಣ್ಣರ ನಾಗಾವರದ ಮನೆಗೆ ತೆರಳಿ,  ಅವರು ಕ್ಷೇಮವಾಗಿ ಬರಲೆಂದು ಪೂಜೆ ಮಾಡಿದ್ದಾರೆ ಅರ್ಚಕರು. 

ಕನ್ನಡನಾಡು ಹಾಗೂ ಹೊರಗಡೆಯ ಅಸಂಖ್ಯಾತ ಅಭಿಮಾನಿಗಳು ನಟ ಶಿವರಾಜ್‌ಕುಮಾರ್ ಅವರು ಅನಾರೋಗ್ಯದಿಂದ ಚೇತರಿಸಿಕೊಂಡು ಅಮೆರಿಕಾದಿಂದ ಬರಲಿ ಎಂದು ಅಶಿಸಿದ್ದಾರೆ. ಹೊರಡುವ ವೇಳೆ ನಟ ಶಿವಣ್ಣ ಅವರು ಎಮೋಶನಲ್ ಆಗಿದ್ದರು ಎನ್ನಲಾಗಿದೆ. ಈ ವೇಳೆ ಶಿವರಾಜ್‌ಕುಮಾರ್ ಅವರು ಹೇಳಿಕೆ ಕೂಡ ನೀಡಿದ್ದರು. 

ಅಮೆರಿಕಾಗೆ ಹೊರಟ ಶಿವಣ್ಣ: ಈ ಸರ್ಜರಿ ಅದೆಷ್ಟು ಡೇಂಜರ್? ಹೇಗಿರುತ್ತೆ ಶಸ್ತ್ರಚಿಕಿತ್ಸೆ?

'ನಾನು ಧೈರ್ಯವಾಗಿದ್ದೇನೆ. ಎಲ್ಲರ ಹಾರೈಕೆ ಇದೆ. ಮನೆಯಿಂದ ಹೋಗುವಾಗ ಸ್ವಲ್ಪ ಎಮೋಷನಲ್ ಆಗುತ್ತಿದ್ದೇನೆ. ಮಾಧ್ಯಮದ ಪತ್ರಕರ್ತರು ಎಲ್ಲರು ಧೈರ್ಯ ತುಂಬಿದ್ದಾರೆ. ನನಗೆ ಸ್ನೆಹಿತರು ಹಾಗೂ ಅಭಿಮಾನಿಗಳ ಆಶೀರ್ವಾದ ಇದೆ. ಎಲ್ಲರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ರಿಗೂ ಒಳ್ಳೆಯದಾಗಲಿ, ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು..' ಎಂದಿದ್ದರು ನಟ ಶಿವರಾಜ್‌ಕುಮಾರ್. 

'ನಾನು, ಗೀತಾ ಮತ್ತು ಮಗಳು ನಿವೇದಿತಾ ಹೋಗುತ್ತಿದ್ದೇವೆ. ಅಲ್ಲಿ ನನ್ನನ್ನು ಡಾ. ಮುರುಗೇಶ್ ಟ್ರೀಟ್ ಮಾಡುತ್ತಿದ್ದಾರೆ. ಇಂದು ಸುದೀಪ್ ಬಂದು ಪ್ರೀತಿ ತೋರಿಸಿದ್ರು. ನಾನು ಸೇಫ್ ಜೋನ್ ನಲ್ಲೇ ಇದ್ದೇನೆ. ಎಲ್ಲ 'ಟೆಸ್ಟ್'ನಲ್ಲಿ ಪಾಸಿಟೀವ್ ಆಗಿದೆ. ಯಾವತ್ತೂ ನಾನು ಒಂದು ತಿಂಗಳು ಪೂರ್ತಿಯಾಗಿ ವಿದೇಶಕ್ಕೆ ಹೋಗಿಲ್ಲ. ಇದೇ ಮೊದಲ ಬಾರಿಗೆ ಇಷ್ಡು ದಿನ ವಿದೇಶದಲ್ಲಿ ಇರುತ್ತೇನೆ.. ಜನವರಿ 26 ಕ್ಕೆ ವಾಪಸ್ ಬರುತ್ತೇನೆ.' ಎಂದಿದ್ದರು ಶಿವಣ್ಣ. 
ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಗಳು ನಿವೇದಿತಾ ಜೊತೆ ವಿದೇಶಕ್ಕೆ ಪ್ರಯಾಣ ಮಾಡಿದ್ದಾರೆ ನಟ ಶಿವಣ್ಣ. ಮನೆಯಿಂದ ಹೋಗುವಾಗ ಶಿವಣ್ಣ ಬಹಳಷ್ಟು ಎಮೋಷನಲ್ ಆಗಿದ್ದರು. ಕಣ್ಣೀರು ತುಂಬಿಕೊಂಡೇ ಹೊರಟಿದ್ದಾರೆ ಶಿವರಾಜ್ ಕುಮಾರ್. ಸಹಜವಾಗಿಯೇ ಮನೆ, ತಾಯ್ನಾಡು ಬಿಟ್ಟು ಬಹಳಷ್ಟು ದಿನಗಳು ವಿದೇಶದಲ್ಲಿ ಕಳೆಯಬೇಕು ಎಂದಾಗ ಆಗುತ್ತಲ್ಲಾ, ಹಾಗೆ ಎಮೋಶನಲ್ ಆಗಿ ಕಣ್ಣೀರಿಟ್ಟಿದ್ದಾರೆ ಶಿವರಾಜ್‌ಕುಮಾರ್. 

Latest Videos
Follow Us:
Download App:
  • android
  • ios