Asianet Suvarna News Asianet Suvarna News

2.5 ಕೋಟಿ ಪಡೆಯೋ ಈ ನಟಿ ನೋಡಲು 5 ದಿನ ರಸ್ತೇಲಿ ಮಲಗಿದ ಫ್ಯಾನ್!

ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ ಮೀಟ್‌ ಬಾಲಿವುಡ್‌ನಲ್ಲೂ ಹೆಸರು ಮಾಡಿದವರು. ಆದರೆ, ಇದೀಗ ಟಾಲಿವುಡ್‌ನಲ್ಲೂ ಫುಲ್ ಬ್ಯುಸಿ. ಈಕೆಯನ್ನು ನೋಡಲು ಅಭಿಮಾನಿಯೊಬ್ಬ 5 ದಿನ ರಸ್ತೆಯಲ್ಲಿ ಮಲಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪೂಜಾ ರಿಯಾಕ್ಟ್‌ ಮಾಡಿದ್ದು ಹೀಗೆ...

Tollywood actress pooja hegde meets her biggest fan who slept on footpath for 5 days
Author
Bangalore, First Published Jan 16, 2020, 2:25 PM IST
  • Facebook
  • Twitter
  • Whatsapp

2012ರಲ್ಲಿ 'ಮುಗಾಮೂದಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪೂಜಾ ಹೆಗ್ಡೆ, ಈಗ ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ಇತ್ತೀಚಿಗೆ 'ಅಲಾ ವೈಕುಂಠಪುರಮುಲೋ' ಚಿತ್ರಕ್ಕೆ ಪಡೆದುಕೊಂಡಿರುವ ಸಂಭಾವನೆ ವಿಚಾರದಲ್ಲಿ ಸುದ್ದಿಯಾಗಿದ್ದರು. 

ದಿಢೀರನೇ ಸಂಭಾವನೆ ಹೆಚ್ಚಿಸಿಕೊಂಡ 'ಮಹರ್ಷಿ' ನಟಿ!ಕೋಟಿನೂ ಕಮ್ಮಿ ಆಯ್ತಾ?

ಅಲ್ಲು ಅರ್ಜುನ್‌ಗೆ ಜೋಡಿಯಾಗಿ 'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ಮಿಂಚಿರುವ ಪೂಜಾ ಬರೋಬ್ಬರಿ 2.5 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರೆಂಬ ಸುದ್ದಿ ಇದೆ. ಇನ್ನು ಅಕ್ಷಯ್ ಕುಮಾರ್ ಜೊತೆ 'ಹೌಸ್‌ಫುಲ್‌ -4' ಚಿತ್ರದಲ್ಲೂ ಮಿಂಚಿದ್ದಾರೆ. ಹೃತಿಕ ರೋಷನ್ ಜತೆ 'ಮೊಹೆಂಜದಾರೋ' ಎಂಬ ಐತಿಹಾಸಿಕ ಚಿತ್ರದಲ್ಲೂ ನಟಿಸಿ, ಸೈ ಎನಿಸಿಕೊಂಡವರು. ಆಕೆ ಅಭಿನಯ ಹಾಗೂ ಬ್ಯೂಟಿಗೆ ಫುಲ್ ಫಿದಾ ಆದವರು ಅದೆಷ್ಟು ಮಂದಿಯೋ? ಆದರೆ, ಪೂಜಾಳ ಹುಚ್ಚು ಅಭಿಮಾನಿಯೊಬ್ಬ 5 ದಿನಗಳ ಕಾಲ ರಸ್ತೆಯಲ್ಲೇ ಮಲಗಿ ಆಕೆಯನ್ನು ಭೇಟಿ ಮಾಡಿದ್ದಾನೆ.  

ನೀರಲ್ಲಿ ಮೀನಾಗಿ ಬಿಕಿನಿ ತೊಟ್ಟ ನಟಿ!

ಮನೆ ಮುಂದೆ ಕಾಯುತ್ತಿದ್ದ ಅಭಿಮಾನಿಯನ್ನು ನೋಡಿ, ಪೂಜಾ ಮಾತನಾಡಿಸಿದ್ದಾರೆ. ಈ  ಅಮೂಲ್ಯವಾದ ಕ್ಷಣವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 

'ಬಾಂಬೆಯಿಂದ ನನ್ನ ನೋಡಲು ಬಂದ ಅಭಿಮಾನಿ ಭಾಸ್ಕರ್ ರಾವ್. ಅವರು ಅಭಿಮಾನ ನನ್ನ ಹಾರ್ಟ್‌‌ಗೆ ಟಚ್‌ ಆಗಿದೆ. ಅದರೆ ಅವರು ಮನೆ ಮುಂದೆ 5 ದಿನಗಳ ಕಾಲ ರಸ್ತೆಯಲ್ಲಿ ಮಲಗಿರುವುದು ಕೇಳಿ ತುಂಬಾ ಬೇಸರವಾಗಿದೆ. ನೀವು ಎಲ್ಲೇ ಇದ್ದರೂ ನಿಮ್ಮ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲಿರಲಿ, ' ಎಂದು ಬರೆದುಕೊಂಡಿದ್ದಾರೆ.

 

Follow Us:
Download App:
  • android
  • ios