Asianet Suvarna News Asianet Suvarna News

ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ ಪ್ರಕರಣ; ಕಾಶ್ಮೀರದವರು ತುಂಬಾ ಪ್ರೀತಿಯ ಜನ ಎಂದ ನಟ

ಕಾಶ್ಮೀರದಲ್ಲಿ ಕಲ್ಲುತೂರಾಟ ಘಟನೆ ಬಗ್ಗೆ ನಟ ಇಮ್ರಾನ್ ಹಶ್ಮಿ ಪ್ರತಿಕ್ರಿಯೆ ನೀಡಿದ್ದಾರೆ. ಕಲ್ಲುತೂರಾಟದಲ್ಲಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಹಶ್ಮಿ ಇದು ಸುಳ್ಳು ಸುದ್ದಿ ಎಂದಿದ್ದಾರೆ.

Emraan Hashmi reacts on reports of him getting injured in stone pelting kashmir sgk
Author
First Published Sep 20, 2022, 1:09 PM IST

ಬಾಲಿವುಡ್ ಸ್ಟಾರ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆದಿದೆ. ಚಿತ್ರೀಕರಣಕ್ಕೆಂದು ಕಾಶ್ಮೀರಕ್ಕೆ ತೆರಳಿದ್ದ ಇಮ್ರಾನ್ ಹಶ್ಮಿ ಮತ್ತು ಚಿತ್ರತಂಡದ ಮೇಲೆ  ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಘಟನೆ ಬಳಿಕ ನಟ ಇಮ್ರಾನ್ ಹಶ್ಮಿ ಗಾಯಗೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇಮ್ರಾನ್ ಹಶ್ಮಿಗೆ ಏನೋ ಆಗಿದೆ ಎಂದು ಅಭಿಮಾನಿಗಳು ಸಹ ಆಂತಕಗೊಂಡಿದ್ದರು. ಇದೀಗ ನಟ ಇಮ್ರಾನ್ ಹಶ್ಮಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟ ಇಮ್ರಾನ್ ಹಶ್ಮಿ ಇದು ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಇಮ್ರಾನ್ ಹಶ್ಮಿ ಸದ್ಯ ಕಾಶ್ಮೀರದಲ್ಲಿ ಮರಾಠಿ ನಿರ್ದೇಶಕ ತೇಜಸ್ ವಿಜಯ್ ದಿಯೋಸ್ಕರ್ ಅವರ ಸಾರಥ್ಯದಲ್ಲಿ ಬರ್ತಿರುವ ಗ್ರೌಂಡ್ ಝೀರೋ ಚಿತ್ರೀಕರಣದಲ್ಲಿದ್ದಾರೆ. ಈ ಸಮಯಕ್ಕೆ ಕಲ್ಲುತೂರಾಟದ ಘಟನೆ ನಡೆದಿದೆ ಎಂದು ವರದಿಯಾಗಿದೆ. 

ನಟ ಇಮ್ರಾನ್ ಹಶ್ಮಿ ಟ್ವೀಟ್ ಮಾಡಿ, ಕಾಶ್ಮೀರದ ಜನರು ತುಂಬಾ ಪ್ರೀತಿನೀಡುತ್ತಾರೆ ಮತ್ತು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಶ್ರೀನಗರ ಮತ್ತು ಪಹಲ್ಗಾಮ್‌‌‌ನಲ್ಲಿ ಶೂಟಿಂಗ್ ಮಾಡಿದ್ದು ತುಂಬಾ ಖುಷಿಯಾಗಿದೆ. ನಾನು ಕಲ್ಲು ತೂರಾಟದ ಘಟನೆಯಲ್ಲಿ ಗಾಯಗೊಂಡಿದ್ದೇನೆ ಎಂಬ ಸುದ್ದಿ ನಿಜವಲ್ಲ' ಎಂದು ಹೇಳಿದ್ದಾರೆ. ಆದರೆ ಇಮ್ರಾನ್ ಹಶ್ಮಿ ಕಲ್ಲುತೂರಾಟ ಘಟನೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  

ಮಗನ ಕ್ಯಾನ್ಸರ್ ಚಿಕಿತ್ಸೆ ವೇಳೆ ಅಕ್ಷಯ್ ಕುಮಾರ್ ಮಾಡಿದ ಸಹಾಯ ನೆನೆದ ಇಮ್ರಾನ್ ಹಶ್ಮಿ

ಇಮ್ರಾನ್ ಹಶ್ಮಿ ಟ್ವೀಟ್‌ಗೆ ಅಭಿಮಾನಿಗಳು ತರಹೇವಾರು ಕಾಮೆಂಟ್ ಮಾಡುತ್ತಿದ್ದಾರೆ.  ಅಭಿಮಾನಿಗಳು ಇಮ್ರಾನ್ ಹಶ್ಮಿ ಮೇಲೆ ಕಳವಳ ವ್ಯಕ್ತಪಡಿಸಿದರು. ಟ್ವಿಟ್ಟರ್‌ನಲ್ಲಿ ಇಮ್ರಾನ್ ಪ್ರತಿಕ್ರಿಯೆ ನೋಡಿ ಅಭಮಾನಿಗಳು ಸಮಾಧಾನಗೊಂಡಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಸುರಕ್ಷಿತರಾಗಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಯೊಬ್ಬ ಕಾಮೆಂಟ್ ಮಾಡಿ, 'ನೀವು ಚೆನ್ನಾಗಿದ್ದೀರೆಂದು ಸಂತೋಷವಾಯಿತು' ಎಂದು ಹೇಳಿದರು. 'ಟ್ವೀಟ್ ಮಾಡುತ್ತಲೇ ಇರಿ' ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾರೆ.  ಇನ್ನೊಬ್ಬ ವ್ಯಕ್ತಿ 'ದೇವರಿಗೆ ಧನ್ಯವಾದಗಳು, ಸುರಕ್ಷಿತವಾಗಿರಿ ಬಾಸ್' ಎಂದು ಹೇಳಿದರು. 

ಇಮ್ರಾನ್ ಹಶ್ಮಿ ತನ್ನ ಗ್ರೌಂಡ್ ಜೀರೋ ಚಿತ್ರಣಕ್ಕೆಂದು ಕಳೆದ ತಿಂಗಳೇ ಕಾಶ್ಮೀರ ತಲುಪಿದ್ದರು. ಕಳೆದ ಕೆಲವು ವಾರಗಳಿಂದ ಅಲ್ಲೇ ಶೂಟಿಂಗ್ ನಡೆಸುತ್ತಿದ್ದಾರೆ. ಈ ಹಿಂದೆ, ಪಹಲ್ಗಾಮ್‌ನಲ್ಲಿ ಚಿತ್ರತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಎಎನ್‌ಐ ವರದಿ ಹೇಳಿತ್ತು. ಇದೀಗ ಮತ್ತೆ ಕಲ್ಲು ತೂರಾಟ ಆಗಿರುವುದು ಆತಂಕ ಸೃಷ್ಟಿಮಾಡಿದೆ.

Aishwarya Rai ಬಗ್ಗೆ ಅಸಭ್ಯ ಕಾಮೆಂಟ್‌ ಮಾಡಿ ಸಿಕ್ಕಿಬಿದ್ದ Emraan Hashmi!

ಇನ್ನು ಇಮ್ರಾನ್ ಹಶ್ಮಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸೆಲ್ಫಿ, ಟೈಗರ್ 3 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಗ್ರೌಂಡ್ ಜೀರೋ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಕೆಲವು ಸಮಯ ಸಿನಿಮಾರಂಗದಿಂದ ಬ್ರೇಕ್ ಪಡೆದಿದ್ದ ಇಮ್ರಾನ್ ಇದಾಗ ಮತ್ತೆ ಸಿನಿಮಾಗಳಲ್ಲಿ ಸಕ್ರೀಯರಾಗಿದ್ದಾರೆ. 

Follow Us:
Download App:
  • android
  • ios