ಮಗನ ಕ್ಯಾನ್ಸರ್ ಚಿಕಿತ್ಸೆ ವೇಳೆ ಅಕ್ಷಯ್ ಕುಮಾರ್ ಮಾಡಿದ ಸಹಾಯ ನೆನೆದ ಇಮ್ರಾನ್ ಹಶ್ಮಿ
ಇಮ್ರಾನ್ ಹಶ್ಮಿ ಪುತ್ರ ಅಯಾನ್ ಕ್ಯಾನ್ಸರ್ ಚಿಕಿತ್ಸೆ ವೇಳೆ ನಟ ಅಕ್ಷಯ್ ಕುಮಾರ್ ಮಾಡಿದ ಸಹಾಯವನ್ನು ಇಮ್ರಾನ್ ನೆನಪಿಸಿಕೊಂಡಿದ್ದಾರೆ. ಇಮ್ರಾನ್ ಹಶ್ಮಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಬಾಲಿವುಡ್ ಖ್ಯಾತ ನಟ ಇಮ್ರಾನ್ ಹಶ್ಮಿ(Emraan Hashmi) ಅವರಿಗೆ ಇಂದು (ಮಾರ್ಚ್ 24) ಹುಟ್ಟುಹಬ್ಬದ(Birthday) ಸಂಭ್ರಮ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಇಮ್ರಾನ್ ಹಶ್ಮಿಗೆ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಇಮ್ರಾನ್ ಹಶ್ಮಿ ಬಾಲಿವುಡ್ ಸೀರಿಯಲ್ ಕಿಸ್ಸರ್ ಎಂದೇ ಖ್ಯಾತಿಗಳಿಸಿದ್ದಾರೆ. ಅವರ ಆನ್ ಸ್ಕ್ರೀನ್ ರೋಮ್ಯಾನ್ಸ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಈ ವಿಚಾರದಲ್ಲಿ ಇಮ್ರಾನ್ ಹಶ್ಮಿಯನ್ನು ತಪ್ಪಾಗಿ ಭಾವಿಸಿದವರೇ ಹೆಚ್ಚು. ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಇಮ್ರಾನ್ ಹಶ್ಮಿ ತನ್ನ ಪುತ್ರ ಅಯಾನ್ ಅನಾರೋಗ್ಯದ ವಿಚಾರದಲ್ಲಿ ಸಿಕ್ಕಾಪಟ್ಟೆ ಕಷ್ಟ ಅನುಭವಿಸಿದ್ದಾರೆ.
ಇಮ್ರಾನ್ ಹಶ್ಮಿ ಪುತ್ರ ಅಯಾನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದೀಗ ಅಯಾನ್ ಸಂಪೂರ್ಣ ಗುಣಮುಖರಾಗಿದ್ದಾರೆ. ಆದರೆ ಪ್ರಾರಂಭದಲ್ಲಿ ಮಗನನ್ನು ಉಳಿಸಿಕೊಳ್ಳಲು ಇಮ್ರಾನ್ ಹಶ್ಮಿ ತುಂಬಾ ಕಷ್ಟಪಟ್ಟಿದ್ದಾರೆ. ಈ ಸಮಯದಲ್ಲಿ ನಟ ಅಕ್ಷಯ್ ಕುಮಾರ್(Akshay Kumar) ಮಾಡಿದ ಸಹಾಯವನ್ನು ಇಮ್ರಾನ್ ನೆನಪಿಸಿಕೊಂಡಿದ್ದಾರೆ.
2014ರಲ್ಲಿ ಇಮ್ರಾನ್ ಹಶ್ಮಿ ತನ್ನ ಮೂರು ವರ್ಷದ ಪುಟ್ಟ ಮಗು ಅಯಾನ್(Ayaan) ಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರ ತಿಳಿದು ಕುಸಿದು ಹೋಗಿದ್ದರು. ಮಗನಿಗೆ ಮೊದಲ ಹಂತದ ಕ್ಯಾನ್ಸರ್ ಇರುವುದು ತಿಳಿಯಿತು. ಮಗನಿಗಾಗಿ ಇಮ್ರಾನ್ ತನ್ನ ನಟನ ವೃತ್ತಿಯಿಂದ ಸಂಪೂರ್ಣ ದೂರ ಉಳಿದರು. ಸುಮಾರು 5 ವರ್ಷಗಳ ಕಠಿಣ ಹೋರಾಟದ ಬಳಿಕ ಅಯಾನ್ ಸಂಪೂರ್ಣ ಕ್ಯಾನ್ಸರ್ ಮುಕ್ತರಾದರು. ಮಗನ ಅನಾರೋಗ್ಯದ ಬಗ್ಗೆ ಇಮ್ರಾನ್ ಪುಸ್ತಕವನ್ನು ಬರೆದಿದ್ದಾರೆ. ದಿ ಕಿಸ್ ಆಫ್ ಲೈಫ್- ಹವ್ ಎ ಸೂಪರ್ ಹೀರೋ ಆಂಡ್ ಮೈ ಸನ್ ಡಿಫೀಟೆಡ್ ಕ್ಯಾನ್ಸರ್ ಎನ್ನುವ ಶೀರ್ಷಿಕೆಯಲ್ಲಿ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇಮ್ರಾನ್, ಅಕ್ಷಯ್ ಕುಮಾರ್ ಹೇಗೆ ಸಹಾಯ ಮಾಡಿದರು ಎಂದು ಬರೆದಿದ್ದಾರೆ.
Emraan Hashmi birthday ಪತಿ ಕಿಸ್ಸಿಂಗ್ ಸೀನ್ ನೋಡಲಾಗದೆ ಚಿತ್ರಮಂದಿರದಿಂದ ಹೊರ ನಡೆದ ಪರ್ವೀನ್!
2016ರಲ್ಲಿ ಈ ಪುಸ್ತಕ ಪ್ರಕಟವಾಯಿತು. ಇದರಲ್ಲಿ ಇಮ್ರಾನ್, ಮಗನ ಕ್ಯಾನ್ಸರ್ ರೋಗ ಕುಟುಂಬಕ್ಕೆ ತಂದ ಕಷ್ಟದ ಬಗ್ಗೆ ಮಾತನಾಡಿದ್ದಾರೆ. 2014ರಲ್ಲಿ ಮಗನ ಚಿಕಿತ್ಸೆ ನಂತರ ಚೇತರಿಸಿಕೊಳ್ಳುವಾಗ ಅಕ್ಷಯ್ ಕುಮಾರ್ ನನಗೆ ಸಂದೇಶ ಕಳುಹಿಸಿದರು. ಅಕ್ಷಯ್ ಕರೆ ಮಾಡಿ ಅಯಾನ್ ಆರೋಗ್ಯ ವಿಚಾರಿಸಿದರು. ಬಳಿಕ ನಿಮಗೆ ಏನಾದರು ಸಹಾಯ ಮಾಡುತ್ತೇನೆ, ನನಗೆ ಉತ್ತಮ ವೈದ್ಯರು ಗೊತ್ತಿದೆ. ನಿಮಗೆ ಏನೆ ಸಹಾಯ ಬೇಕಾದರು ತಿಳಿಸಿ ಎಂದು ಅಕ್ಷಯ್ ಕೇಳಿದ ಸಹಾಯದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಅಯಾನ್ ನನ್ನು ವಿಚಾರಿಸಲು ಅಕ್ಷಯ್ ಪ್ರತೀದಿನ ಕರೆ ಮಾಡಿ ಮಾತನಾಡುತ್ತಿದ್ದರಂತೆ. ಮೂರು ವರ್ಷದ ಮಗು ಅಯಾನ್ ಆಸ್ಪತ್ರೆಯಿಂದ ಮನೆಗೆ ವಾಪಾಸ್ ಆದಾಗ ಅಕ್ಷಯ್ ಕುಮಾರ್ ಭೇಟಿ ಮಾಡಿದ್ದರು. ಅಯಾನ್ ನನ್ನು ನೋಡಿ ಅಕ್ಷಯ್ ಕಣ್ಣೀರು ಹಾಕಿದ್ದರು ಎಂದು ಇಮ್ರಾನ್ ಪುಸ್ತಕದಲ್ಲಿ ಬರೆದಿದ್ದಾರೆ. ಅಕ್ಷಯ್ ಕುಮಾರ್ ತಂದೆ ಹರಿ ಓಂ ಭಾಟಿಯ ಸಹ ಕ್ಯಾನ್ಸರ್ ನಿಂದ ನಿಧನಹೊಂದಿದರು. ಹಾಗಾಗಿ ಇಮ್ರಾನ್ ಕಷ್ಟ ಅಕ್ಷಯ್ ಕುಮಾರ್ ಅವರಿಗೂ ಅರ್ಥವಾಗಿದೆ ಎನ್ನುವ ಸತ್ಯ ಇಮ್ರಾನ್ ಗೆ ತಿಳಿಯಿತು ಎಂದು ಹೇಳಿದ್ದಾರೆ.
ಮಲಯಾಳಂನ ಡ್ರೈವಿಂಗ್ ಲೈಸೆನ್ಸ್ ಹಿಂದಿಯಲ್ಲಿ, ಅಕ್ಷಯ್, ಇಮ್ರಾನ್ ಸಿನಿಮಾ
ಅಕ್ಷಯ್ ಕುಮಾರ್, ಇಮ್ರಾನ್ ಅವರ ಪುಸ್ತಕಕ್ಕೆ ಮುನ್ನುಡಿ ಬರೆದ್ದಾರೆ. ಅದರಲ್ಲಿ ಅಯಾನ್ ಅನಾರೋಗ್ಯದ ಬಗ್ಗೆ ನಾನು ಕೇಳಿದಾಗ ನನಗೆ ಆಘಾತವಾಯಿತು. ಆಗ ನಾನು ಚಾಲನೆ ಮಾಡುತ್ತಿದ್ದೆ. ನನಗೆ ಇನ್ನು ನೆನಪಿದೆ, ನಾನು ಕಾರು ನಿಲ್ಲಿಸಿ ಇಮ್ರಾನ್ ಫೋನ್ ನಂಬರ್ ಹುಡುಕಿ ತಕ್ಷಣ ಅವರಿಗೆ ಕರೆ ಮಾಡಿದೆ. ಏಕೆಂದರೆ ತುಂಬಾ ಪ್ರೀತಿಸುವ ವ್ಯಕ್ತಿ ಆ ಕಾಯಿಲೆಗೆ ತುತ್ತಾದರೆ ಏನಾಗುತ್ತೆ ಎಂದು ನನಗೆ ತಿಳಿದಿದೆ ಎಂದು ಬರೆದಿದ್ದಾರೆ.
ಅಂದಹಾಗೆ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರೂ ಒಂದೇ ಸಿನಿಮಾದಲ್ಲಿ ಯಾವಾಗ ನಟಿಸುತ್ತಾರೆ ಎಂದು ಅಭಿಮಾನಿಗಳು ಸಹ ಕಾಯುತ್ತಿದ್ದರು. ಇದೀಗ ಆ ಸಮಯ ಬಂದಿದೆ. ಅಕ್ಷಯ್ ಮತ್ತು ಇಮ್ರಾನ್ ಒಂದೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಮ್ರಾನ್ ಹಶ್ಮಿ ಅವರ ಹುಟ್ಟುಹಬ್ಬವನ್ನು ಚಿತ್ರೀಕರಣ ಸೆಟ್ ನಲ್ಲೇ ಆಚರಿಸಿದ್ದಾರೆ. ಜೊತೆಯಲ್ಲಿ ಅಕ್ಷಯ್ ಕುಮಾರ್ ಸಹ ಇದ್ದಾರೆ.