ಪ್ರತಿಷ್ಠಿತ ಎಮಿ ಅವಾರ್ಡ್ಸ್​ 2022 ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಲಾಸ್​ ಎಂಜಲೀಸ್​ನ ಮೈಕ್ರೋಸಾಫ್ಟ್​ ಥಿಯೇಟರ್​ನಲ್ಲಿ ಸೋಮವಾರ (ಸೆಪ್ಟೆಂಬರ್ 12) ರಾತ್ರಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. 

ಪ್ರತಿಷ್ಠಿತ ಎಮಿ ಅವಾರ್ಡ್ಸ್​ 2022 ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಲಾಸ್​ ಎಂಜಲೀಸ್​ನ ಮೈಕ್ರೋಸಾಫ್ಟ್​ ಥಿಯೇಟರ್​ನಲ್ಲಿ ಸೋಮವಾರ (ಸೆಪ್ಟೆಂಬರ್ 12) ರಾತ್ರಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಎಮಿ ಅವಾರ್ಡ್, ಆಸ್ಕರ್ ಅಷ್ಟೆಯೇ ಜನಪ್ರಿಯತೆ ಹೊಂದಿದೆ. ಕಿರುತೆರೆ ಲೋಕದ ಕಲಾವಿದರು ಮತ್ತು ತಂತ್ರಜ್ಞರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ HBO ವಾಹಿನಿಯ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಶಸ್ತಿಗಳು ಒಲಿದಿರುವುದು ವಿಶೇಷ. ಕಳೆದ 8 ವರ್ಷಗಳಲ್ಲಿ HBO ವಾಹಿನಿ ಈ ರೀತಿ ಹೆಗ್ಗಳಿಕೆಗೆ ಪಾತ್ರವಾಗಿರುವುದು ಇದು ಆರನೇ ಬಾರಿ ಎಂಬುದು ವಿಶೇಷ. ಎಮಿ ಅವಾರ್ಡ್ಸ್​ 30ಕ್ಕೂ ಅಧಿಕ ವಿಭಾಗಗಳಲ್ಲಿ ನೀಡಲಾಗಿದೆ.

ಸಕ್ಸೆಷನ್​‌ಗೆ ಅತ್ಯುತ್ತಮ ಡ್ರಾಮಾ ಸೀರಿಸ್​ ಪ್ರಶಸ್ತಿ ನೀಡಲಾಗಿದೆ ಇನ್ನು ಟೆಡ್​ ಲಾಸೋ ಸೀರಿಸ್ ಅತ್ಯುತ್ತಮ ಕಾಮಿಡಿ ಸೀರಿಸ್ ಪ್ರಶಸ್ತಿ ಪಡೆದುಕೊಂಡಿದೆ. ಯುಫೋರಿಯಾ ಸೀರಿಸ್​ನಲ್ಲಿನ ನಟನೆಗಾಗಿ ನಟಿ ಝಿಂಡೆಯಾ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದ್ರೆ, ಡ್ರಾಮಾ ಸೀರಿಸ್​ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಲೀ ಜಂಗ್​ ಜೇ (ಸ್ಕ್ವಿಡ್​ ಗೇಮ್​) ಪಡೆದುಕೊಂಡಿದ್ದಾರೆ. ಅತ್ಯುತ್ತಮ ಆಂಥಾಲಜಿ ಸೀರಿಸ್​ ಪ್ರಶಸ್ತಿಯು ದಿ ವೈಟ್​ ಲೋಟಸ್​ ಪಾಲಾಗಿದೆ. ಎಂಜೆ ಡಿಲೇನಿ ಅವರು ಅತ್ಯುತ್ತಮ ಕಾಮಿಡಿ ಸೀರಿಸ್​ ನಿರ್ದೇಶನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾಮಿಡಿ ಸೀರಿಸ್​ನ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಜೀನ್​ ಸ್ಮಾರ್ಟ್​ ಅವರ ಪಾಲಾಗಿದೆ. 

ಎಮಿ ಅವಾರ್ಡ್‌ಗೆ ಆಯ್ಕೆಯಾದ ದೆಹಲಿ ಕ್ರೈಂನ ಖಡಕ್ ಪೊಲೀಸ್ ಇವ್ರೇ ನೋಡಿ

ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ಬ್ರೆಟ್​ ಗೋಲ್ಡ್​ಸ್ಟೀನ್​ ಪೆದುಕೊಂಡಿದ್ದಾರೆ. ಟೆಡ್​ ಲಾಸೋ ಕಾಮಿಡಿ ಸೀರಿಸ್​ನಲ್ಲಿನ ನಟನೆಗಾಗಿ ಬ್ರೆಟ್​ ಗೋಲ್ಡ್​ಸ್ಟೀನ್​ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ಇನ್ನು ಶೆರ್ಲಿ ಲೀ ರಾಲ್ಫ್​ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದು ಬೀಗಿದರು. ಡ್ರಾಮಾ ಸೀರಿಸ್​ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ಮ್ಯಾಥೀವ್​ ಮೆಕ್​ಫೆಡೀನ್​ (ಸಕ್ಸೆಷನ್​) ಅವರಿಗೆ ಸಿಕ್ಕಿದೆ. ಇನ್ನು ಸ್ಕ್ವಿಡ್​ ಗೇಮ್​ ನಿರ್ದೇಶನಕ್ಕಾಗಿ ಹ್ವಾಂಗ್​ ಡಾಂಗ್​ ಹ್ಯೂಕ್ ಅವರು ಅತ್ಯುತ್ತಮ ಡ್ರಾಮಾ ಸೀರಿಸ್​ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡರು. 

700ಕ್ಕೂ ಹೆಚ್ಚು ಪುರುಷರ ಜೊತೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಬಹಿರಂಗ ಪಡಿಸಿದ ಖ್ಯಾತ ನಟಿ

ಎಮಿ 2022 ದಕ್ಷಿಣ ಕೊರಿಯಾ ಮನರಂಜನಾ ಕ್ಷೇತ್ರಕ್ಕೆ ಐತಿಹಾಸಿಕ ಅವಾರ್ಡ್ ಸೆರೆಮನಿಯಾಗಿತ್ತು. ಏಕೆಂದರೆ ಸ್ಕ್ವಿಡ್ ಗೇಮ್ ಪ್ರಶಸ್ತಿ ಪಡೆದುಕೊಂಡಿದೆ. ಸ್ಕ್ವಿಡ್​ ಗೇಮ್​ ನಿರ್ದೇಶನಕ್ಕಾಗಿ ಹ್ವಾಂಗ್​ ಡಾಂಗ್​ ಹ್ಯೂಕ್ ಹಾಗೂ ಡ್ರಾಮಾ ಸೀರಿಸ್​ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಲೀ ಜಂಗ್​ ಜೇ ಪಾಲಾಗಿದೆ. ಈ ಎರಡು ಪ್ರಶಸ್ತಿಗಳನ್ನು ಗೆದ್ದಿ ಬೀಗಿದೆ. ಇನ್ನು HBO ವಾಹಿನಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತು. ಡ್ರಾಮ ಸೀರಿಸ್ ನಲ್ಲಿ ಅನೇಕ ಪ್ರಶಸ್ತಿ ಗೆದ್ದು ಬೀಗಿದೆ. ಇನ್ನು Apple TV ಸಹ ಪ್ರಶಸ್ತಿ ಪಡೆಕೊಂಡಿದೆ. ಟೆಡ್ ಲಾಸೋ ಅತ್ಯುತ್ತಮ ಕಾಮಿಡಿ ಸರಣಿ ಗೆದ್ದಿದೆ.