‘ಓ ಕಾದಲ್ ಕಣ್ಮಣಿ’ ಮಣಿರತ್ನಂ ನಿರ್ದೇಶನದ ಈ ಸಿನಿಮಾ ಬಂದು ಐದು ವರ್ಷಗಳೇ ಕಳೆದಿವೆ. ಆದರೆ ದುಲ್ಖರ್ ಸಲ್ಮಾನ್ ಹಾಗೂ ನಿತ್ಯಾ ಮೆನನ್ ಮುದ್ದು ಜೋಡಿಯನ್ನು ಜನ ಮರೆತಿಲ್ಲ. ಬೆಂಗಳೂರು ಡೇಸ್ ನಲ್ಲೂ ಈ ಜೋಡಿ ನಟಿಸಿದ್ದರು. 100 ಡೇಸ್ ಆಫ್ ಲವ್ ಸಿನಿಮಾದಲ್ಲೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಕಾದಲ್ ಕಣ್ಮಣಿ ಸಿನಿಮಾ ಬಂದ ಮೇಲೆ ಇವರಿಬ್ಬರ ಕೆಮೆಸ್ಟ್ರಿ ಎಷ್ಟು ಚೆನ್ನಾಗಿ ಮ್ಯಾಚ್ ಆಗ್ತಿತ್ತು ಅಂದರೆ, ಇವರಿಬ್ಬರು ರಿಯಲ್ ಲೈಫ್ ನಲ್ಲೂ ಜೋಡಿಗಳಾಗಲಿ ಅಂತ ಹಾರೈಸಿದವರು ಬಹಳ ಮಂದಿ. ಬಹಳ ಮಂದಿ ಸೋಷಲ್ ಮೀಡಿಯಾದಲ್ಲೂ ಈ ಬಗ್ಗೆ ಬರೆದುಕೊಂಡಿದ್ದರು. 

ಇದೀಗ ಸಂದರ್ಶನವೊಂದರಲ್ಲಿ ನಿತ್ಯಾ ಮೆನನ್ ಒಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ದುಲ್ಖರ್ ತನನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದರು, ಅನ್ನೋ ರಹಸ್ಯವನ್ನು ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ. ಕಾದಲ್ ಕಣ್ಮಣಿ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಇವರಿಬ್ಬರು ರಿಲೇಶನ್ಶಿಪ್ ಬಗ್ಗೆ ಕೇಳಿದಾಗಲೆಲ್ಲ ಇಬ್ಬರೂ ಮಾತು ಹಾರಿಸಿ ನಗುತ್ತಿದ್ದರು. ಅಷ್ಟಾದ ಮೇಲೆ ನೀವಿಬ್ಬರು ತೆರೆಯ ಮೇಲೆ ಅಷ್ಟೊಂದು ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳಲು ಏನು ಕಾರಣ ಅನ್ನೋ ಪ್ರಶ್ನೆಯೂ ಬಂದಿತ್ತು. ಅದಕ್ಕೆ ನಾವಿಬ್ಬರೂ ಆತ್ಮೀಯ ಗೆಳೆಯರಾಗಿರುವ ಕಾರಣ ತೆರೆಯ ಮೇಲೆ ಹಾಗೆ ಕಾಣಿಸಿಕೊಳ್ಳಲು ಸಾಧ್ಯವಾಯಿತು ಅಂತ ಈ ಜೋಡಿ ಸಂದರ್ಶನಗಳಲ್ಲಿ ಹೇಳುತ್ತಿತ್ತು. ಅಷ್ಟೇ ಅಲ್ಲ, ಕಾದಲ್ ಕಣ್ಮಣಿ ಸಿನಿಮಾದಲ್ಲಿ ತಮ್ಮಿಬ್ಬರ ಆನ್‌ಸ್ಕ್ರೀನ್ ಕೆಮೆಸ್ಟ್ರಿ ನೋಡಿ ಇವರಿಗೇ ಅಚ್ಚರಿಯಾಗಿತ್ತಂತೆ. ಇದನ್ನ ದುಲ್ಖರ್ ಅವರೇ ಎಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಜೊತೆಗೆ ತಮ್ಮಿಬ್ಬರನ್ನೂ ಅಷ್ಟು ಅದ್ಭುತವಾಗಿ ತೆರೆಯ ಮೇಲೆ ತಂದ ಮಣಿರತ್ನಂ ಅವರಿಗೆ ಈ ಜೋಡಿ ಕೃತಜ್ಞತೆ ಸಲ್ಲಿಸಿತ್ತು.

 

 ಆದರೆ ಇದೀಗ ಐದು ವರ್ಷಗಳ ಬಳಿಕ ನಿತ್ಯಾ ಮೆನನ್ ಒಂದು ಗುಟ್ಟನ್ನು ಸಂದರ್ಶನದ ವೇಳೆಗೆ ಬಾಯಿ ಬಿಟ್ಟಿದ್ದಾರೆ. ಅದು ಮತ್ತೇನಲ್ಲ, ದುಲ್ಖರ್ ಸಲ್ಮಾನ್ ತನ್ನನ್ನು ಮದುವೆಯಾಗಲು ಬಹಳ ಕನ್ವಿನ್ಸ್ ಮಾಡುತ್ತಿದ್ದರು. ಆದರೆ ತಾನು ಒಪ್ಪಿಲ್ಲ ಅನ್ನೋದು. ಈಗ ಇನ್ನೊಂದು ಪ್ರಸ್ನೆ ಬರುತ್ತೆ. ಕಾದಲ್ ಕಣ್ಮಣಿ ಸಿನಿಮಾ ವೇಳೆಗಾಗಲೇ ದುಲ್ಖರ್ ಗೆ ಮದುವೆಯಾಗಿತ್ತು. ೨೦೧೧ರಲ್ಲೇ ಅವರು ಆರ್ಕಿಟೆಕ್ಟ್ ಅಮಲ್ ಸುಫಿಯಾ ಅವರನ್ನು ವಿವಾಹವಾಗಿದ್ದರು. ಅವರ ವೈವಾಹಿಕ ಜೀವನ ಚೆನ್ನಾಗಿಯೇ ಇತ್ತು. ಅಪಸ್ವರವೇನೂ ಕೇಳಿಬಂದಿರಲಿಲ್ಲ. ಫ್ಯಾಮಿಲಿ ಮ್ಯಾನ್ ಆಗಿಯೇ ಗುರುತಿಸಿಕೊಂಡಿರುವ, ತನ್ನನ್ನು ಹಾಗೇ ಬಿಂಬಿಸುತ್ತಿರುವ ದುಲ್ಖರ್ ನಿತ್ಯಾ ಎಂಬ ಮುದ್ದು ಮುಖದ ಚೆಲುವೆಗೆ ಮರುಳಾದರಾ, ಅವರ ಆದರ್ಶಗಳೆಲ್ಲ ಈ ಕಣ್ಮಣಿಯೆದುರು ನಿಲ್ಲದೇ ಹೋಯ್ತಾ ಎಂಬೆಲ್ಲ ಪ್ರಶ್ನೆಗಳು ಬರುತ್ತವೆ. 

ತಲೆಗೂದಲು ಬೋಳಿಸಿ ಶಾಕ್ ಕೊಟ್ಟ ನಿತ್ಯಾ ಮೆನನ್‌; ಇದರ ಹಿಂದಿದೆ ಶಾಕಿಂಗ್ ಘಟನೆ! ..

ಆದರೆ ವಾಸ್ತವ ಬೇರೆಯೇ ಇದೆ. ನಿತ್ಯಾ ಮೆನನ್ ಗೆ ದುಲ್ಖರ್ ಮದುವೆಯಾಗು ಅಂದಿದ್ದರೇ ಹೊರತು ತನ್ನನ್ನು ಮದುವೆಯಾಗಿ ಅಂದಿರಲಿಲ್ಲ. ಒಬ್ಬ ಫ್ರೆಂಡ್‌ನಂತೆ ಬೇಗ ಮದುವೆಯಾಗಿ ಸುಖವಾಗಿರು ಅಂತ ಹಾರೈಸಿದ್ದರು. ಒಬ್ಬ ವಿವಾಹಿತ ವ್ಯಕ್ತಿಯಾಗಿ ತಾನು ಎಂಥಾ ಕಂಫರ್ಟ್ ಅನುಭವಿಸುತ್ತಿದ್ದೇನೆ, ಮದುವೆ, ಫ್ಯಾಮಿಲಿ ಲೈಫ್‌ನಲ್ಲಿರುವ ಖುಷಿ ಎಂಥಾದ್ದು ಎಂಬುದನ್ನು ಆಕೆಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು. ಆದರೆ ತನ್ನ ಫ್ರೆಂಡ್ ಮಾತನ್ನಾಗ ನಿತ್ಯಾ ನಯವಾಗಿಯೇ ತಳ್ಳಿ ಹಾಕಿದ್ದರಂತೆ. ದುಲ್ಖರ್ ತನ್ನ ಫ್ಯಾಮಿಲಿಗೆ ಎಷ್ಟು ಡೆಡಿಕೇಟೆಡ್ ಅಂದರೆ ಅಪ್ಪಿತಪ್ಪಿಯೂ ಯಾವುದೇ ಹುಡುಗಿ ಜೊತೆಗೆ ಓಡಾಡಿ ವಿವಾದ ಮೈಮೇಲೆ ಎಳೆದುಕೊಂಡವರಲ್ಲ. ಅವರ ಲಕ್ಷಾಂತರ ಫಾಲೋವರ್ಸ್, ಅದರಲ್ಲೂ ಹೆಣ್ಮಕ್ಕಳಿಗೆ ತಮ್ಮ ಕನಸಿನ ಹೀರೋ ರಿಯಲ್ ಲೈಫ್‌ನಲ್ಲೂ ಹೀರೋ ಅನ್ನುವ ಬಗ್ಗೆ ಹೆಮ್ಮ ಇದೆ.

ನಾನು ಡುಮ್ಮಿ, ಏನೀವಾಗ? ಬಾಡಿ ಶೇಮ್ ಮಾಡೋರಿಗೆ ನಿತ್ಯಾ ಮೆನನ್ ಫುಲ್ ಕ್ಲಾಸ್ ನ...

ಸೋಷಲ್ ಮೀಡಿಯಾದಲ್ಲಿ ಆಗಾಗ ಪತ್ನಿ, ಮಗುವಿನ ಫೋಟೋ ಪೋಸ್ಟ್ ಮಾಡುವ ಈ ನಟನಿಗೆ ತಾನೊಬ್ಬ ಸೂಪರ್ ಸ್ಟಾರ್ ಅನ್ನೋದಾಗಲೀ, ಮಮ್ಮುಟ್ಟಿಯಂಥಾ ನಟನ ಮಗ ಅನ್ನೋದಾಗಲೀ, ಲಕ್ಷಾಂತರ ಹುಡುಗೀರು ತನ್ನ ಒಂದು ನಗೆಗೆ ಫಿದಾ ಆಗ್ತಾರೆ ಅನ್ನೋದರ ಬಗೆಗಾಗಿ ಹಮ್ಮು ಇಲ್ಲ. ಸಂಕೋಚದ ನಗೆಯಲ್ಲೇ ಎಲ್ಲರ ಜೊತೆಗೆ ಬೆರೆಯುವ ಈ ನಟ ನಿತ್ಯಾ ರ ಬಹುಕಾಲದ ಫ್ರೆಂಡೂ ಹೌದು. ತನ್ನ ಗೆಳತಿ ಮದುವೆಯಾಗಿ ಲೈಫ್ ನಲ್ಲಿ ಸೆಟಲ್ ಆಗಲಿ ಅನ್ನೋದು ದುಲ್ಖರ್ ಸಹಜ ಆಸೆ. ಆದರೆ ಈಗಲೂ ನಿತ್ಯಾಗೆ ಮದುವೆಯ ಬಗ್ಗೆ ಅಂಥಾ ಒಲವು ಇದ್ದ ಹಾಗಿಲ್ಲ. 32 ವರ್ಷದ ನಿತ್ಯಾ ಇದೀಗ ಜಯಲಲಿತಾ ಅವರ ಬದುಕನ್ನಾಧರಿಸಿದ 'ಐರನ್ ಲೇಡಿ' ಸಹಿತ ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಎಂದಿಗೂ ಆಡಿಶನ್‌ ಕೊಡದೇ ಪಂಚಭಾಷಾ ತಾರೆಯಾದ 'ಮೈನಾ' ಹಕ್ಕಿ!