Asianet Suvarna News Asianet Suvarna News

ತಲೆಗೂದಲು ಬೋಳಿಸಿ ಶಾಕ್ ಕೊಟ್ಟ ನಿತ್ಯಾ ಮೆನನ್‌; ಇದರ ಹಿಂದಿದೆ ಶಾಕಿಂಗ್ ಘಟನೆ!

'ಮೈನಾ' ಚೆಲುವೆ ನಿತ್ಯಾ ಮೆನನ್ 'ಮಿಷನ್ ಮಂಗಲ್' ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಅನುಶ್ರೀ ಯೂಟ್ಯೂಬ್‌ ಚಾನೆಲ್‌ಗೆ ಇಂಟರ್‌ವ್ಯೂ ಕೊಟ್ಟಿದ್ದು ತಲೆಗೂದಲು ಬೋಳಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ.  

Kannada actress Nitya Menon shares a head shave incident with anchor Anushree you tube channel
Author
Bengaluru, First Published Dec 3, 2019, 10:53 AM IST
  • Facebook
  • Twitter
  • Whatsapp

ಬಹುಭಾಷಾ ನಟಿ, ಕನ್ನಡದ 'ಮೈನಾ' ಹಕ್ಕಿ ನಿತ್ಯಾ ಮೆನನ್ ಮಾಡಿದ್ದು ಕೆಲವೇ ಸಿನಿಮಾಗಳಾದರೂ ಅದರಲ್ಲೇ ಹೆಸರು ಮಾಡಿದ್ದಾರೆ. ಇತ್ತೀಚಿಗೆ 'ಮಿಷನ್ ಮಂಗಲ್‌'ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 

ಸಿನಿಮಾ ನಟಿಯೆಂದರೆ ಹೀಗೆ ಇರಬೇಕು, ಹೀಗೆ ಬಟ್ಟೆ ಹಾಕಬೇಕು, ಹೀಗೆ ಕಾಣಿಸಿಕೊಳ್ಳಬೇಕು, ತೆಳ್ಳಗಿರಬೇಕು, ಬೆಳ್ಳಗಿರಬೇಕು ಎನ್ನುವ ಸ್ಟೀರಿಯೋಟೈಪನ್ನು ಬ್ರೇಕ್ ಮಾಡಿ ಹೀಗೂ ಇರಬಹುದು ಎಂದು ತೋರಿಸಿಕೊಟ್ಟ ಮುದ್ದು ಮುಖದ ಚೆಲುವೆ. 

ರಪ್ ರಪ್ ಅಂತ ಉತ್ತರ ಕೊಡುವ ರ‍್ಯಾಪಿಡ್ ರಶ್ಮಿ ಅಸಲಿ ಕಹಾನಿಯಿದು!

ನಿತ್ಯಾ ಮೆನನ್ ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ಕೊಟ್ಟ ಸಂದರ್ಶನದಲ್ಲಿ ತಮ್ಮ ಲೈಫ್‌ನ ಇಂಟರೆಸ್ಟಿಂಗ್ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ.  ನಿತ್ಯಾ ಮೆನನ್ ಕರ್ಲಿ ಕೂದಲು ಅವರ ಬ್ಯೂಟಿಗೆ ಪ್ಲಸ್ ಪಾಯಿಂಟ್.  ಒಮ್ಮೆ ಮಣಿಪಾಲ್‌ನಲ್ಲಿ ಓದುತ್ತಿರಬೇಕಾದ್ರೆ ಕರ್ಲಿ ಕೂದಲು ಬೇಡ. ಪೂರ್ತಿ ತೆಗೆಸಬೇಕು ಅನ್ನಿಸಿ ಅಪ್ಪನಿಗೆ ಮೆಸೇಜ್ ಮಾಡಿದ್ರಂತೆ. ಅಪ್ಪ ಏನು ಹೇಳಬಹುದೋ ಎಂದುಕೊಂಡಿದ್ದವರಿಗೆ ಶಾಕ್! ಅಪ್ಪ 'good' ಅಂದು ಬಿಟ್ರಂತೆ! ಆಮೇಲೆ ಸಲೂನ್‌ ಶಾಪ್‌ಗೆ ಹೋಗಿ ಪೂರ್ತಿ ಕೂದಲು ತೆಗೆಸಿಕೊಂಡರಂತೆ! 

 

ಯಾವುದಕ್ಕೂ ಅಷ್ಟೆಲ್ಲಾ ತಲೆಕೆಡಿಸಿಕೊಳ್ಳದ ನಿತ್ಯಾ ಡೌನ್ ಟು ಅರ್ಥ್ ಪರ್ಸನಾಲಿಟಿ. ಎಂಥವರಿಗೂ ಇಷ್ಟವಾಗುವ ಕ್ಯಾರೆಕ್ಟರ್.  ಮೈನಾ, ಜೋಶ್, 7 o clock, ಕೋಟಿಗೊಬ್ಬ- 3, ಮಿಷನ್ ಮಂಗಲ್‌ನಲ್ಲಿ ನಟಿಸಿದ್ದಾರೆ. 

ನಿತ್ಯಾ ಮೆನನ್ ಬರೀ ನಟಿಯಷ್ಟೇ ಅಲ್ಲ. ಉತ್ತಮ ಗಾಯಕಿ ಕೂಡಾ ಹೌದು. ಉಪೇಂದ್ರ ಅವರ A ಚಿತ್ರದ ಸುಮ್ ಸುಮ್ನೆ ನಗ್ತಾಳೆ ಹಾಡನ್ನು ಗುನುಗಿದರು. ನಿತ್ಯಾ ಮೆನನ್ ನಗುವಿನ ಹಿಂದಿನ ಕಾರಣವೂ ಇದೇ ಆಗಿರಬಹುದಪ್ಪಾ! 

Follow Us:
Download App:
  • android
  • ios