ಪಠಾಣ್ ಫ್ಯಾನ್ಸ್‌ಗೆ ಡಬಲ್ ಧಮಾಕಾ: ಒಂದೇ ಬಾರಿ ಎರಡೆರಡು ಟ್ರೇಲರ್?
ಪಠಾಣ್ ಚಿತ್ರದ ಟ್ರೇಲರ್ ಒಂದಲ್ಲ, ಎರಡು ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ, ಏನಿದು ಗಾಸಿಪ್?
ಬಿಡುಗಡೆಗೆ ಮುನ್ನವೇ ಭಾರಿ ವಿವಾದ ಸೃಷ್ಟಿಸಿರುವ ಚಿತ್ರ ಪಠಾಣ್. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿಯನದ ಪಠಾಣ್‌ನಲ್ಲಿ ದೀಪಿಕಾರ ಕೇಸರಿ ಬಿಕನಿಯಿಂದಾಗಿ ಬೈಕಾಟ್ ಬಿಸಿ ಅನುಭವಿಸುತ್ತಿರುವ ಈ ಚಿತ್ರ ಇದಾಗಲೇ ಹಲವಾರು ಗಣ್ಯರಿಂದಲೂ ಛೀಮಾರಿ ಹಾಕಿಸಿಕೊಂಡಿದೆ.
ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧದ ಬೆನ್ನಲ್ಲೇ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(CBFC) ಕೆಂಗಣ್ಣಿಗೂ ಗುರಿಯಾಗಿದೆ ಚಿತ್ರ. ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆಯ ನೃತ್ಯದ ಕೆಲ ಸೀನ್‌ಗೆ ಕತ್ತರಿ ಹಾಕಲು ಸಿಬಿಎಫ್‌ಸಿ ನಿರ್ದೇಶಿಸಿದೆ. ದೀಪಿಕಾ ಪಡುಕೋಣೆ ಬಿಕಿನಿ ಸೀನ್ ಹಾಗೂ ನೆಲದಲ್ಲಿ ಸೊಂಟ ಬಳುಕಿಸಿದ ದೃಶ್ಯ ತೆಗೆದು ಹಾಕಲು ಸಿಬಿಎಫ್‌ಸಿ ಸೂಚಿಸಿದೆ. ಕೇಸರಿ ಬಿಕಿನಿ (Bikini) ದೃಶ್ಯ ಕೂಡ ತೆಗೆದು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ.
ಕೇಸರಿ ತುಂಡುಡುಗೆ ಹಾಕ್ಕೊಂಡು ಉರ್ಫಿ ಮಾಡಿರೋ ಕಿತಾಪತಿ ಇದು!
ಇಷ್ಟೆಲ್ಲಾ ಗಲಾಟೆ ನಡುವೆಯೇ ಪಠಾಣ್ (Pathaan) ಚಿತ್ರದ ಅನ್ಆಫೀಷಿಯಲ್ ಟ್ರೇಲರ್ ಕೂಡ ಬಿಡುಗಡೆಯಾಗಿ ಚಿತ್ರತಂಡಕ್ಕೆ ಭಾರಿ ತಲೆನೋವು ತಂದಿತ್ತು. ಅಸಲಿ ಟ್ರೇಲರ್ ಬೇಷರಂ ರಂಗ್ ಹಾಡಿನ ಗಲಾಟೆಯಿಂದ ಬಿಡುಗಡೆಯಾಗದೇ ಮುಂದೂಡುತ್ತಲೇ ಸಾಗಿತ್ತು. ಆದಷ್ಟು ಬೇಗ ಟ್ರೇಲರ್ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತಲೇ ಇತ್ತು. ಆದರೆ ಗಲಾಟೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದರಿಂದ ಬಿಡುಗಡೆಯ ಭಾಗ್ಯ ಸಿಗುವ ಸಂದೇಹ ಕಾಡತೊಡಗಿತ್ತು. ಆದರೆ ಕೊನೆಗೂ ಚಿತ್ರತಂಡ ಆಫೀಷಿಯಲ್ ಟ್ರೇಲರ್ (Official Trailer) ಬಿಡುಗಡೆಗೆ ಜನವರಿ 25ರ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಆದರೆ ಬಹು ಕುತೂಹಲ ಎಂಬಂತೆ, ಅಭಿಮಾನಿಗಳು ಒಂದು ಟ್ರೇಲರ್‌ಗೆ (Trailer) ಕಾಯುತ್ತಿದ್ದರೆ, ಈಗ ಎರಡು ಟ್ರೇಲರ್‌ಗಳು ಬಿಡುಗಡೆಯಾಗುತ್ತಿವೆ ಎಂಬ ಸುದ್ದಿ ಹರಡಿದೆ! ಬಹುತೇಕರಿಗೆ ತಿಳಿದಿರುವಂತೆ ಈ ಚಿತ್ರದಲ್ಲಿ ಶಾರುಖ್ ಖಾನ್, (Shah Rukh Khan) ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಜಾನ್ ಅಬ್ರಹಾಂ ಪ್ರತಿನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಸಲ್ಮಾನ್ ಖಾನ್ ಕೂಡ ಇದ್ದಾರೆ.
ಇತ್ತೀಚಿನ ಬಾಲಿವುಡ್ ಸುದ್ದಿ ಏನೆಂದರೆ, ರಷ್ಯಾದ ಸೈನ್ಯದಿಂದ ನಾಯಕ ಶಾರುಖ್ ಖಾನ್ ಅವರನ್ನು ರಕ್ಷಿಸಲು ಸಲ್ಮಾನ್ ಖಾನ್ ವೀರೋಚಿತವಾಗಿ ಆಗಮಿಸುವ ಪಾತ್ರ ಈ ಚಿತ್ರದಲ್ಲಿದೆ. ಆದ್ದರಿಂದ ಟ್ರೇಲರ್ನಲ್ಲಿ ಸಲ್ಮಾನ್ ಖಾನ್ ಅವರ ಈ ಸೀನ್ ಇರಬೇಕೋ ಅಥವಾ ಕೇವಲ ಶಾರುಖ್ ಮತ್ತು ದೀಪಿಕಾ ಅವರ ಸೀನಷ್ಟೆ ಸಾಕೋ ಎನ್ನುವ ಕನ್ಫ್ಯೂಷ್ನಲ್ಲಿ ಚಿತ್ರತಂಡ ಇದೆಯಂತೆ.
ಶಾರುಖ್ ಖಾನ್‌ರ ಪಠಾಣ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಬೇಷರಂ ರಂಗ್ ಹಾಡು ಕದ್ದಿದ್ದಾ?
ಟ್ರೇಲರ್ನಲ್ಲಿ ಸಲ್ಮಾನ್ ಖಾನ್ ಅವರು ವೀರೋಚಿತ ಎಂಟ್ರಿ (entry) ಕೊಡುವ ದೃಶ್ಯ ಕೂಡ ಇದ್ದರೆ ಚೆನ್ನ ಎನ್ನುವುದು ಒಂದು ಯೋಚನೆಯಾದರೆ, ಈ ದೃಶ್ಯವನ್ನು ಉಳಿದ ಸೀನ್ಗಳ ಜೊತೆ ಹೊಂದಾಣಿಕೆ ಮಾಡಿ ಟ್ರೇಲರ್ನಲ್ಲಿ ತೋರಿಸುವುದು ಅಷ್ಟು ಸರಿ ಇರುವುದಿಲ್ಲ ಎನ್ನುವ ಯೋಚನೆ ಇನ್ನೊಂದೆಡೆ. ಇದೇ ಕಾರಣಕ್ಕೆ ಸಲ್ಮಾನ್ ಖಾನ್ ಇರುವ ಒಂದು ಟ್ರೇಲರ್ ಹಾಗೂ ಸಲ್ಮಾನ್ ಖಾನ್ ಅವರ ದೃಶ್ಯ ಇಲ್ಲದೇ ಇರುವ ಇನ್ನೊಂದು ಟ್ರೇಲರ್ ಬಿಡುಗಡೆ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ದರಿಂದ ಒಂದು ಟ್ರೇಲರ್‌ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ (Fans) ಎರಡೆರಡು ಟ್ರೇಲರ್ ನೋಡುವ ಭಾಗ್ಯ ಸಿಗುತ್ತದೆ ಎಂದು ವರದಿಯಾಗಿದೆ.
ಅಂದಹಾಗೆ ಪಠಾಣ್, ರಹಸ್ಯ ಪೊಲೀಸ್ ಅಧಿಕಾರಿ ಮತ್ತು ಡ್ರಗ್ ಪೆಡ್ಲರ್ ನಡುವೆ ಹೆಣೆದಿರುವ ಕತೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ ಮತ್ತು ಆದಿತ್ಯ ಛೋಪ್ರಾ (Adithya Chopra) ನಿರ್ಮಿಸಿದ ಪಠಾಣ್‌ನಲ್ಲಿ ವಿಶಾಲ್ ದಾದ್ಲಾನಿ (Vishal Dadlani) ಮತ್ತು ಶೇಖರ್ ರಾವ್ಜಿಯಾನಿ ಇದರ ಸಂಗೀತದಲ್ಲಿ ಕೆಲಸ ಮಾಡಿದ್ದಾರೆ. ಇದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.