ಸಿಎಂ ನಡೆಯಿಂದ ಸೋನು ನಿಗಮ್ ಗರಂ, ನೀವು ಕಾರ್ಯಕ್ರಮಕ್ಕೆ ಬರಲೇಬೇಡಿ ಎಂದ ಗಾಯಕ!

ನೀವು ಮ್ಯೂಸಿಕ್ ಕಾರ್ಯಕ್ರಮಗಳಿಗೆ ಬರಲೇಬೇಡಿ. ಇದು ಖ್ಯಾತ ಗಾಯಕ ಸೋನು ನಿಗಮ್ ರಾಜಕಾರಣಿಗಳಿಗೆ ನೀಡಿದ ಖಡಕ್ ಸೂಚನೆ. ಮುಖ್ಯಮಂತ್ರಿ ನಡೆಯಿಂದ ಕೆರಳಿದ ಸೋನು ನಿಗಮ್ ಎಲ್ಲಾ ರಾಜಕಾರಣಿಗಳಿಗೆ ಸೂಚನೆ ನೀಡಿದ್ದಾರೆ. 

Dont come if you leave abruptly Sonu Nigam slams politician after Rajasthan music ckm

ಜೈಪುರ್(ಡಿ.10)  ದೇಶಾದ್ಯಂತ ಖ್ಯಾತ ಗಾಯಕ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಅದ್ಧೂರಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದೆ. ಇದೀಗ ಸೋನು ನಿಮಗ್ ಈ ರೀತಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯೊಬ್ಬರು ನಡೆದುಕೊಂಡ ರೀತಿಗೆ ಗರಂ ಆಗಿದ್ದಾರೆ.  ಈ ಕುರಿತು ಆಕ್ರೋಶ ಹೊರಹಾಕಿರುವ ಸೋನು ನಿಮಗ್  ಈ ರೀತಿಯ ಮ್ಯೂಸಿಕ್ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಮಾತ್ರ ಬರಲೇ ಬೇಡಿ ಎಂದು ಖ್ಯಾತ ಗಾಯಕ ಸೋನು ನಿಗಮ್ ಸೂಚಿಸಿದ್ದಾರೆ. 

ರಾಜಸ್ಥಾನದಲ್ಲಿ ವಿಶೇಷ ಮ್ಯೂಸಿಕ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೈಸಿಂಗ್ ರಾಜಸ್ಥಾನ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.ಈ ಕಾರ್ಯಕ್ರಮಕ್ಕೆ ರಾಜಸ್ಥಾನ ಮುಖ್ಯಮಂತ್ರಿ, ಕ್ರೀಡಾ ಸಚಿವರು ಸೇರಿದಂತೆ ಹಲವು ಗಣ್ಯರ ದಂಡು ಆಗಮಿಸಿತ್ತು. ಸೋನು ನಿಮಗ್ ಹಾಡಿನ ಮೂಲಕ ಅಭಿಮಾನಿಗಳ ರಂಜಿಸುತ್ತಿದ್ದರು. ಆರಂಭದಲ್ಲಿ ರಾಜಸ್ಥಾನ ಭಜನ್ ಲಾಲ್ ಶರ್ಮಾ ಸೇರಿದಂತೆ ಸಚಿವರ ದಂಡು ಕಾರ್ಯಕ್ರಮದಲ್ಲಿ ಹಾಜರಿತ್ತು. ಆದರೆ ಕೆಲ ಹಾಡುಗಳ ಬಳಿಕ ಮುಖ್ಯಮಂತ್ರಿ ಸೇರಿದಂತೆ ಸಚಿವರು ಜಾಗ ಖಾಲಿ ಮಾಡಿದ್ದರು. ಇದರಿಂದ ಇತರ ಕೆಲ ಗಣ್ಯರು ಕೂಡ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು.

ಮುಂಗಾರು ಮಳೆಯೇ... ಗಾಯಕ ಸೋನು ನಿಗಮ್ ಕನ್ನಡ ಹಾಡು ಕಲಿಯಲು ಎಷ್ಟೆಲ್ಲಾ ಕಷ್ಟ ಪಡ್ತಾರೆ ನೋಡಿ...

ರಾಜಕಾರಣಿಗಳ ಈ ನಡೆಯನ್ನು ಸೋನು ನಿಗಮ್ ಖಂಡಿಸಿದ್ದಾರೆ. ಘಟನೆ ಕುರಿತು ಮಾತನಾಡಿರುವ ಸೋನು ನಿಗಮ, ದೇಶ ವಿದೇಶಗಳಿಂದ ಗಣ್ಯರು, ಜನರು ಆಗಮಿಸಿದ್ದರು. ರಾಜಸ್ಥಾನದ ಹೆಮ್ಮೆಯ ನಾಗರೀಕರು, ಸಾಧಕರು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಕಾರ್ಯಕ್ರಮಕ್ಕಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಅವರ ಜೊತೆ ಕೆಲ ಗಣ್ಯರು ಆಗಮಿಸಿದ್ದರು. ನಾನು ಒಂದೆರೆಡು ಹಾಡುಗಳನ್ನು ಹಾಡಿದ ಬಳಿಕ ನೋಡಿದರೆ ಮುಖ್ಯಮಂತ್ರಿ, ಸಚಿವರು, ಗಣ್ಯರು ನಿರ್ಗಮಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ ನಿರ್ಗಮಿಸಿದ್ದರು ಎಂದು ಸೋನು ನಿಗಮ್ ಹೇಳಿದ್ದಾರೆ.

ಒಬ್ಬ ಕಲಾವಿಧ, ಗಾಯಕ ಅಥವಾ ಯಾವುದೇ ಆರ್ಟಿಸ್ಟ್ ಪ್ರದರ್ಶನ ನೀಡುವಾಗ ಮಧ್ಯದಲ್ಲಿ ಎದ್ದು ಹೋಗಬೇಡಿ. ಎದ್ದು ಹೋಗುವ ಅನಿವಾರ್ಯತೆಗಳಿದ್ದ ರಾಜಕಾರಣಿಗಳು ಕಾರ್ಯಕ್ರಮಕ್ಕೆ ಬರಲೇ ಬೇಡಿ. ಹಾಡುವಾಗ ಅರ್ಧದಿಂದ ಎದ್ದು ಹೋಗುವುದು ಸರಸ್ವತಿಗೆ ಅವಮಾನ ಮಾಡಿದಂತೆ. ಎದ್ದು ಹೋಗುವುದಿದ್ದರೆ ಕಾರ್ಯಕ್ರಮ ಆರಂಭಕ್ಕೂ ಮೊದಲೇ ಹೋಗಿ. ಆದರೆ ನಡುವಿನಲ್ಲಿ ಈ ರೀತಿ ಮಾಡಿ ಕಲಾವಿಧರ ಅವಮಾನಿಸಬೇಡಿ. ಇದು ನನ್ನ ಮನವಿ ಎಂದು ಸೋನು ನಿಗಮ್ ಹೇಳಿದ್ದಾರೆ.

ರಾಜಕಾರಣಿಗಳಿಗೆ ಸಾಕಷ್ಟು ಜವಾಬ್ದಾರಿ, ಕೆಲಸವಿರುತ್ತದೆ. ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾದ ಅನಿವಾರ್ಯತೆ ಇರುತ್ತದೆ. ಇದನ್ನು ನಾನು ಮನಗಂಡಿದ್ದೇನೆ. ಆದರೆ ಕಾರ್ಯಕ್ರಮ ಆರಂಭವಾಗುವ ಅಥವ ಕಲಾವಿದನ ಪ್ರದರ್ಶನ ಆರಂಭಗೊಳ್ಳುವ ಮೊದಲೇ ನಿರ್ಗಮಿಸಿ. ಸುಮ್ಮನೆ ಸ್ವಲ್ಪಹೊತ್ತು ಕಾರ್ಯಕ್ರಮದಲ್ಲಿ ಕುಳಿತು ಬಳಿಕ ಎದ್ದು ಹೋಗುವ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ ಎಂದು ಸೋನು ನಿಗಮ್ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios