Asianet Suvarna News Asianet Suvarna News

ಮುಂಗಾರು ಮಳೆಯೇ... ಗಾಯಕ ಸೋನು ನಿಗಮ್ ಕನ್ನಡ ಹಾಡು ಕಲಿಯಲು ಎಷ್ಟೆಲ್ಲಾ ಕಷ್ಟ ಪಡ್ತಾರೆ ನೋಡಿ...

ಬಾಲಿವುಡ್​ ಗಾಯಕ ಸೋನು ನಿಗಮ್​ ಕನ್ನಡ ಹಾಡಿಗೆ ಹಿನ್ನಲೆ ದನಿ ನೀಡಲು ಪಡುವ ಶ್ರಮ ಎಂಥದ್ದು ಗೊತ್ತಾ? ವಿಡಿಯೋ ವೈರಲ್
 

hard work of Bollywood singer Sonu Nigam to provide background music for a Kannada films suc
Author
First Published Aug 21, 2024, 10:28 PM IST | Last Updated Aug 21, 2024, 10:28 PM IST

ಮುಂಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ... ಆಗಲೀ ಅನಿಸುತೆ ಯಾಕೋ ಇಂದು... ಹಾಡಾಗಲಿ ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುವ ಹಂಬಲ. 2006 ರಲ್ಲಿ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಇಂದಿಗೂ ಅದೇ ಸ್ವಾರಸ್ಯವನ್ನು ಉಳಿಸಿಕೊಂಡಿವೆ. ಅಂದಹಾಗೆ ಈ ಚಿತ್ರದ ಹಾಡುಗಳನ್ನು ಹಾಡಿದವರು ಕನ್ನಡವೇ ಬಾರದ ಬಾಲಿವುಡ್​ ಗಾಯಕ ಸೋನು ನಿಗಮ್​. ಹೌದು.  ಕನ್ನಡವೇ ಬಾರದ ಪಂಜಾಬಿ ಗಾಯಕ ಜಸ್ಕರಣ್​ ಸಿಂಗ್​  ಅವರು ಹಾಡಿರುವ  ದ್ವಾಪರದ ಹಾಡು ಸದ್ಯ ಟ್ರೆಂಡಿಂಗ್​ನಲ್ಲಿದೆ. ಅದೇ ರೀತಿ ಗಾಯಕ ಸೋನು ನಿಗಮ್​ ಅವರ ಕನ್ನಡದ ಹಾಡುಗಳು ಎಂದಿಗೂ ಜನಜನಿತವಾಗಿವೆ. ಹೀಗೆ ಗಾಯಕರು ತಮಗೆ ಗೊತ್ತೇ ಇಲ್ಲದ ಭಾಷೆಯ ಹಾಡುಹಾಡುವುದು ಹೊಸ ವಿಷಯವಲ್ಲವಾದರೂ ಈಪರಿಯಲ್ಲಿ ಒಂದುಹಾಡು ಮೋಡಿ ಮಾಡುತ್ತದೆ ಎಂದರೆ ಅವರು ಅಷ್ಟೇ ಕಷ್ಟಪಟ್ಟಿರುತ್ತಾರೆ.

ಕನ್ನಡದ ಉಚ್ಚಾರಣೆ, ಸ್ಪಷ್ಟತೆ,ಅಲ್ಪ ಪ್ರಾಣ-ಮಹಾಪ್ರಾಣ ಹೀಗೆ ಎಲ್ಲವನ್ನೂ ತಿಳಿದುಕೊಂಡು ಹಾಡುವುದು ಕಷ್ಟಸಾಧ್ಯವೇ. ಆದರೆ ಹೀಗೆ ಕನ್ನಡದ ಹಾಡನ್ನು ಕಲಿಯಲು ಸೋನು ನಿಗಮ್​ ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಎನ್ನುವ ವಿಡಿಯೋ ಒಂದು ಈಗ ವೈರಲ್​ ಆಗಿದೆ. ಇಂಗ್ಲಿಷ್​ನಲ್ಲಿಯೇ ಕನ್ನಡ ಹಾಡಿನ ಅರ್ಥ ಇತ್ಯಾದಿಗಳನ್ನು ಕೇಳಿ ಇಂಗ್ಲಿಷ್​ನಲ್ಲಿಯೇ ಅವುಗಳನ್ನು ಬರೆದುಕೊಂಡು ಸೋನು ನಿಗಮ್​ ಹಾಡುವುದು ಇದರಲ್ಲಿ ನಾವು ನೋಡಬಹುದು. ಅಷ್ಟಕ್ಕೂ ಸೋನಿ ನಿಗಮ್​ ಕನ್ನಡದ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಇವುಗಳಲ್ಲಿ ಬಹುತೇಕ ಹಿಟ್​ ಆಗಿವೆ. ಮುಸ್ಸಂಜೆ ಮಾತು, ಜಾಕಿ, ರಾಜಧಾನಿ, ಶ್ರಾವಣಿ- ಸುಬ್ರಹ್ಮಣ್ಯ ಸೇರಿದಂತೆ ಹಲವು ಕನ್ನಡ ಹಾಡುಗಳಿಗೆ ದನಿಯಾಗಿದ್ದಾರೆ. ಇದೀಗ ಅವರು ಹೇಗೆ ಕನ್ನಡದ ಹಾಡುಗಳನ್ನು ಕಲಿಯುತ್ತಾರೆ ಎನ್ನುವ ವಿಡಿಯೋ ವೈರಲ್​ ಆಗಿದೆ. red FM Kannada ಇದನ್ನು ಶೇರ್​ ಮಾಡಿಕೊಂಡಿದೆ.

ಡಿಕೆಡಿ ವೇದಿಕೆಯಲ್ಲಿ ಜಸ್ಕರಣ್‌ ಸಿಂಗ್‌ ‘ದ್ವಾಪರ‘ ಮೋಡಿ! ಕನ್ನಡ ಪ್ರೀತಿಗೆ, ಇಂಪಾದ ದನಿಗೆ ಮರುಳಾದ ಪ್ರೇಕ್ಷಕರು

ಇನ್ನು ಸೋನು ನಿಗಮ್​ ಕುರಿತು ಹೇಳುವುದಾದರೆ,  ಇವರು ಜನಿಸಿದ್ದು 30 ಜುಲೈ 1973 ಹರಿಯಾಣದ ಫರಿದಾಬಾದ್ ನಲ್ಲಿ. ಕನ್ನಡ, ತಮಿಳು, ತೆಲುಗು, ಪಂಜಾಬಿ, ಬಂಗಾಳಿ, ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿ ಹಿನ್ನಲೆ ಗಾಯಕರಾಗಿ ಖ್ಯಾತಿ ಗಳಿಸಿರುವ ಇವರಿಗೆ ಕನ್ನಡ ಜನತೆ ಕರ್ನಾಟಕದ "ಗೋಲ್ಡನ್" ಸ್ಟಾರ್ ಸಂಗೀತಗಾರ ಎಂಬ ಬಿರುದನ್ನೂ ಸಹ ನೀಡಿದ್ದಾರೆ. ಇವರಿಗೆ ಸಂಗೀತ  ತಂದೆ ಆಗಂ ಕುಮಾರ್ ನಿಗಮ್ ಅವರಿಂದ ಬಂದಿದೆ.  ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಸೋನು ಅವರಿಗೆ 18ನೇ ವಯಸ್ಸಿನಲ್ಲಿ ಇವರಿಗೆ ಬಾಲಿವುಡ್ ಚಿತ್ರವೊಂದಕ್ಕೆ ಹಾಡುವ ಅವಕಾಶ ಸಿಕ್ಕಿತು.  ಬಾಲ್ಯದಿಂದಲೇ ತಂದೆ ಜೊತೆ ಸೇರಿಕೊಂಡು ಸಂಗೀತದಲ್ಲಿ ಆಸಕ್ತಿ ತೋರಿಸುತ್ತಿದ್ದ ಸೋನು ನಿಗಮ್ ಇಂದು ಭಾರತೀಯ ಪ್ರಸಿದ್ಧ ಗಾಯಕರು ಎಂದು ಪ್ರಸಿದ್ಧಿ ಪಡೆದುಕೊಂಡಿದ್ದಾರೆ.

ಇವರು ಪಾಪ್, ಕ್ಲಾಸಿಕಲ್, ಇನ್ನು ಅನೇಕ ರೀತಿಯ ಸಂಗೀತ ರಚನೆ ಮಾಡಿ ಹಾಡುವುದರಲ್ಲಿ ನಿಸ್ಸಿಮರು. 1996ರಲ್ಲಿ ಬಿಡುಗಡೆಗೊಂಡ ವಿಷ್ಣುವರ್ಧನ್ ಅವರ ಚಿತ್ರ "ಜೀವನಧಿ" ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.ಇವರೆಗೂ ಇವರು 70 ಕನ್ನಡ ಚಿತ್ರಗಳಿಗೆ ಸಂಗೀತ, ಹಿನ್ನಲೆ ಗಾಯಕರಾಗಿ ಹಾಡಿ ರಂಜಿಸಿ ಎಲ್ಲರ ಮನ ಗೆದ್ದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಉತ್ತಮ್ಮ ಗಾಯಕನಾಗಿ ಪರಿಚಿತಗೊಂಡ ಸೋನು ನಿಗಮ್ ಕನ್ನಡದಲ್ಲಿ ಒಂದು ಅಲ್ಬಮ್ ನ್ನು ಬಿಡುಗಡೆ ಮಾಡಿದ್ದಾರೆ. ಈ ಆಲ್ಬಮ್ ನ ಮೂಲಕ ಕನ್ನಡ ಜನತೆಗೆ ಮತ್ತಷ್ಟು ಹತ್ತಿರವಾದರು. ಇವರು 2002 ರಲ್ಲಿ  ಬೆಂಗಾಲಿಯ ಬೆಡಗಿ ಮಧುರಿಮ ಎನ್ನುವರನ್ನು  ವಿವಾಹವಾಗಿದ್ದಾರೆ. 

ಜೇನ ದನಿಯೋಳೆ, ಮೀನ ಕಣ್ಣೋಳೆ... 'ದ್ವಾಪರ' ಹಾಡಿನ ಮ್ಯಾಜಿಕ್​ ಮಾಡಿದ್ದು ಕನ್ನಡವೇ ಬಾರದ ಈ ಗಾಯಕ!

 

Latest Videos
Follow Us:
Download App:
  • android
  • ios