Asianet Suvarna News Asianet Suvarna News

ಸಿಕ್ಕಾಪಟ್ಟೆ ಇದೆ ಜ್ಯೂ.ಸಿಲ್ಕ್ ಸ್ಮಿತಾ ಟ್ರೆಂಡು: ಮಾರ್ಕೆಟ್‌ಗೆ ಬಂದ ಹೊಸ ಹಾಟ್ ಬಾಂಬ್!

ಸಿಲ್ಕ್ ಸ್ಮಿತಾ. ಐಟಂ ಬಾಂಬ್. ಮಾಧಕ ಚೆಲುವೆ. ಒಂದು ಕಾಲದಲ್ಲಿ ಡಾನ್ಸರ್ಸ್ಗಳ ರೋಲ್ ಮಾಡೆಲ್.. ದಕ್ಷಿಣ ಭಾರತ ಚಿತ್ರರಂಗವನ್ನ ಅನಭಿಶಕ್ತ ರಾಣಿಯಂತೆ ಆಳಿದ ಹಾಟಿ. ಒಬ್ಬ ಟಾಪ್ ಹೀರೋಗೆ ಇದ್ದ ಬೇಡಿಕೆ ಸಿಲ್ಕ್ ಸ್ಮಿತಾಗೆ ಇತ್ತು. 

silk smitha doppelganger actress vishnu priya gandhi in vishal mark antony gvd
Author
First Published Sep 16, 2023, 10:03 PM IST

ಸಿಲ್ಕ್ ಸ್ಮಿತಾ. ಐಟಂ ಬಾಂಬ್. ಮಾಧಕ ಚೆಲುವೆ. ಒಂದು ಕಾಲದಲ್ಲಿ ಡಾನ್ಸರ್ಸ್ಗಳ ರೋಲ್ ಮಾಡೆಲ್.. ದಕ್ಷಿಣ ಭಾರತ ಚಿತ್ರರಂಗವನ್ನ ಅನಭಿಶಕ್ತ ರಾಣಿಯಂತೆ ಆಳಿದ ಹಾಟಿ. ಒಬ್ಬ ಟಾಪ್ ಹೀರೋಗೆ ಇದ್ದ ಬೇಡಿಕೆ ಸಿಲ್ಕ್ ಸ್ಮಿತಾಗೆ ಇತ್ತು. ಸಿಲ್ಕ್ ಸ್ಮಿತಾ ಮನೆ ಮುಂದೆ ನಿರ್ಮಾಪಕರ ಕ್ಯೂ ಇರುತ್ತಿತ್ತು. 40 ವರ್ಷಗಳ ಹಿಂದೆ ಯಾವ್ದೇ ಥಿಯೇಟರ್ನಲ್ಲಿ ಪ್ರೇಕ್ಷಕ ಕಿಕ್ಕಿರಿಯಬೇಕು ಅಂದ್ರೆ ಆ ಸಿನಿಮಾದಲ್ಲಿ ಈ ಐಟಂ ಬಾಂಬ್ ಡಾನ್ಸ್ ಇರಬೇಕಿತ್ತು. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಹಳ್ಳಿ ಮೇಸ್ಟ್ರೇ ಸಿನಿಮಾದಲ್ಲಿ ಸಿಲ್ಕ್ ಸೌಂಧರ್ಯ. 

14ನೇ ವಯಸ್ಸಿಗೆ ಬಣ್ಣ ಹಚ್ಚಿ ಪಡ್ಡೆಗಳ ಮೈ ಒದ್ದೆ ಮಾಡಿದ್ದ ಈ ಐಟಂ ಬಾಂಬ್ ಬದುಕಿದ್ದ 35 ವರ್ಷಗಳಲ್ಲಿಯೇ 450 ಸಿನಿಮಾಗಳಲ್ಲಿ ವಿಜೃಂಭಿಸಿದ್ರು. 1996, ಸೆಪ್ಟೆಂಬರ್ 23ರಂದು ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಂಡ್ರು. ಅಂದಿನಿಂದ ಸಿಲ್ಕ್ ಸ್ಮಿತಾ ಸೃಷ್ಟಿಸುತ್ತಿದ್ದ ಮಾದಕ ಲೋಕ ಬಣ್ಣದ ಜಗತ್ತು ಕಣ್ಮರೆಯಾಗಿಬಿಡ್ತು. ಆದ್ರೆ ಈಗ ಮತ್ತೆ ಸಿಲ್ಕ್ ಸ್ಮಿತಾ ಘಮಲು ಸೃಷ್ಟಿಯಾಗಿದೆ. ಮತ್ತೆ ಬಂದ ಸಿಲ್ಮ್ ಸ್ಮಿತಾ, ಆದ್ರೆ ಇವ್ರು ಜ್ಯೂನಿಯರ್ ಸಿಲ್ಕ್ ಸ್ಮಿತಾ. ತೇಟ್ ಐಟಂ ಬಾಂಬ್ಅನ್ನೇ ಹೋಲೂ ಜ್ಯೂನಿಯರ್ ಸಿಲ್ಕ್ ಸ್ಮಿತಾ ಈಕೆ. ಹಿಂದಿಯಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಬಂದಾಗ್ಲೆ ನಟಿ ವಿದ್ಯಾ ಬಾಲನ್ ಅಂತ ಟ್ಯಾಲೆಂಟೆಡ್ ನಟಿಗೆ ಸಿಲ್ಕ್ ಸ್ಮಿತಾರನ್ನು ಮ್ಯಾಚ್ ಮಾಡೋಕೆ ಆಗ್ಲಿಲ್ಲ. 

ತಮಿಳು ಸ್ಟಾರ್‌ಗಳ ವಿರುದ್ಧ ಸಿಡಿದೆದ್ದ ಕಾಲಿವುಡ್‌: ದೌಲತ್ತಿನ ಹೀರೋಗಳಿಗೆ ವಾರ್ನಿಂಗ್!

ಆದ್ರೀಗ ಈ ಸಿಲ್ಕ್ ಸ್ಮಿತಾರನ್ನೇ ಹೋಲೋ ಜ್ಯೂನಿಯರ್ ಸಿಲ್ಕ್ ಸ್ಮಿತಾ  ತಮಿಳು ಚಿತ್ರರಂಗಕ್ಕೆ ಬಂದಿದ್ದಾರೆ. ನೋಟ, ಹಾವ-ಭಾವ, ನಟನೆ ಅವತಾರ ಎಲ್ಲವೂ ರಿಯಲ್ ಸಿಲ್ಕ್ ಸ್ಮಿತಾನ ಹಾಗೆ. ಈ ಜ್ಯೂನಿಯರ್ ಸಿಲ್ಕ್ ಸ್ಮಿತಾ ಸಿಕ್ಕಿದ್ದು, ತಮಿಳು ನಟ ವಿಶಾಲ್ ಅಭಿನಯದ 'ಮಾರ್ಕ್ ಆಂಟೋನಿ' ಸಿನಿಮಾದಲ್ಲಿ. ಯಾರು ಗೊತ್ತಾ ಈ ಜ್ಯೂನಿಯರ್ ಸಿಲ್ಕ್ ಸ್ಮಿತಾ..? ಯುವ ನಟಿ ವಿಷ್ಣು ಪ್ರಿಯ ಗಾಂಧಿ. ವಿಷ್ಣು ಪ್ರಿಯಾ ಗಾಂಧಿ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್. ಈಗ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಂಜಿನಿಯರಿಂಗ್ ಓದಿರೋ ವಿಷ್ಣು ಪ್ರಿಯಾ ಗಾಂಧಿ ಈಗ ಜೂನಿಯರ್ ಸಿಲ್ಕ್ ಸ್ಮಿತಾ ಅಂತ ಫೇಮಸ್ ಆಗ್ತಿದ್ದಾರೆ. ಭಟ್ ಯಾರೇ ಬಂದ್ರು ಸಿಲ್ಕ್ ಸ್ಮಿತಾ ಜಾಗವನ್ನಂತೂ ತುಂಬಲಾಗಲ್ಲ ಬಿಡಿ.

Follow Us:
Download App:
  • android
  • ios