Asianet Suvarna News Asianet Suvarna News

ನೂರು ಚಿತ್ರಗಳಲ್ಲಿ ಕಾಣಿಸಿಕೊಂಡ್ರೂ ನೂರು ರೂ. ಸಿಗಲ್ಲ... 10 ನಿಮಿಷ ಬೆತ್ತಲಾದ್ರೆ ಹತ್ತಾರು ಕೋಟಿ!

ಬಾಲಿವುಡ್​ನ ಕರಾಳ ಮುಖ ತೆರೆದಿಟ್ಟಿದ್ದಾರೆ ನಟಿ ಸುನೀತಾ ರಜ್ವಾರ್​. ಸೈಡ್​​ ನಟರು ಮತ್ತು ಬೆತ್ತಲಾಗುವ ನಟರ ಮಧ್ಯೆ ಇರುವ ವ್ಯತ್ಯಾಸ ಹೇಳಿದ್ದಾರೆ. ನಟಿ ಹೇಳಿದ್ದೇನು?
 

Do small roles  treats like animal ten minutes nude scene crores rupees says Sunita Rajwar
Author
First Published Jun 15, 2024, 6:02 PM IST

 ಚಿತ್ರರಂಗವೇ ಹಾಗಲ್ಲವೆ? ನಟಿಯರೇ ಹೇಳುವಂತೆ ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದರೆ. ಇಲ್ಲಿ ನಾಯಕಿಯಾಗಿ ಹೊರಹೊಮ್ಮಲು ಏನೇನು ಮಾಡಬೇಕು, ಯಾರ ಜೊತೆ ಅಡ್ಜಸ್ಟ್​ ಆಗಬೇಕು, ಯಾರ ಜೊತೆ ಮಂಚ ಹಂಚಿಕೊಳ್ಳಬೇಕು ಇತ್ಯಾದಿ ಇತ್ಯಾದಿ ಕುರಿತು ಇದಾಗಲೇ ಹಲವಾರು ನಟಿಯರು ಮಾತನಾಡಿದ್ದಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಚಿತ್ರರಂಗದಲ್ಲಿ ಛಾನ್ಸ್​ ಸಿಕ್ಕೇ ಸಿಗುತ್ತೆ ಎಂದು ಹೇಳಲಾಗದು. ಅದೃಷ್ಟ ಇರುವವರುಸ್ಟಾರ್​ ಪಟ್ಟ ಗಿಟ್ಟಿಸಿಕೊಂಡರೆ, ಹಲವರ ಕನಸು ಅಲ್ಲಿಯೇ ನುಚ್ಚು ನೂರಾಗಿರುತ್ತದೆ. ಸಾಲು  ಸಾಲು ಚಿತ್ರಗಳು ಫ್ಲಾಪ್​  ಆಗುತ್ತಾ ಹೋದರೆ ಅಂತ ನಟ-ನಟಿಯರು ಯಾವುದೇ ರೀತಿ ಅಡ್ಜಸ್ಟ್​ ಮಾಡಿಕೊಂಡರೂ ಅವರಿಗೆ ಚಿತ್ರರಂಗದ ಬಾಗಿಲು ಸದಾ ಮುಚ್ಚೇ ಹೋಗುತ್ತದೆ.

ಇದೇ ಕಾರಣಕ್ಕೆ ಪೈಪೋಟಿಗೆ ಬಿದ್ದವರಂತೆ ಇಂದು ನಟಿಯರು ಎಲ್ಲದಕ್ಕೂ ಸೈ ಎನ್ನುತ್ತಿದ್ದಾರೆ. ಹಿಂದೆಲ್ಲಾ ದೇಹ ಪ್ರದರ್ಶನಕ್ಕಾಗಿಯೇ, ಐಟಂ ಸಾಂಗ್​ಗಾಗಿಯೇ ಒಂದಿಷ್ಟು ಸೈಡ್​ ಆ್ಯಕ್ಟ್ರೆಸ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಚಿತ್ರಗಳ ಒಳಗೆ ಒಂದೆರಡು ಮಾದಕ ದೃಶ್ಯಗಳನ್ನು ಆ ನಟಿಯರಿಂದ ಮಾಡಿಸಲಾಗುತ್ತಿತ್ತು. ಆದರೆ ಇದೀಗ ಸ್ಟಾರ್​ ನಟಿಯರೇ ಎಲ್ಲವನ್ನೂ ಮಾಡುತ್ತಿದ್ದಾರೆ. ಅರೆ ಬೆತ್ತಲೆ ಹೋಗಿ ಸಂಪೂರ್ಣ ಬೆತ್ತಲೂ ಆಗಿದ್ದಾರೆ. ಬಳಕುವ ಬಳ್ಳಿಯಂತೆ ಕಾಣಿಸಲು ಹಗಲಿರಳು ಸರ್ಕಸ್​  ಮಾಡುವ ಕೆಲ ನಟಿಯರು ದೇಹದ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಕೊಂಡು ಚಿತ್ರರಂಗದಲ್ಲಿ ನೆಲೆಯೂರುತ್ತಿದ್ದಾರೆ. 

ಸಸ್ಯಾಹಾರಿ ಪತ್ರಕರ್ತೆಗೆ ಮಾಂಸ ತಿನ್ನಿಸಿದ್ರಾ ಆಲಿಯಾ! ರಾಮನ ಪಾತ್ರಕ್ಕೆ ರಣಬೀರ್ ಮದ್ಯ ಬಿಟ್ಟಿದ್ದು ಸುಳ್ಳಾ?

ಇವೆಲ್ಲವೂ ಮಾಮೂಲಾಗಿರುವ ನಡುವೆಯೇ ಚಿಕ್ಕ ಚಿಕ್ಕ ಪಾತ್ರಗಳ ಮೂಲಕ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸುನೀತಾ ರಜ್ವಾರ್​ ಅವರು ನೀಡಿರುವ ಹೇಳಿಕೆಯೊಂದು ಇದೀಗ ವೈರಲ್​ ಆಗುತ್ತಿದೆ. ಸೈಡ್​  ಆ್ಯಕ್ಟರ್​ಗಳಿಗೆ ಇಂದು ಬೆಲೆಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಚಿತ್ರರಂಗ ಹೋಗಿದೆ ಎನ್ನುವುದು ಅವರ ಮಾತು. ದಿನಪೂರ್ತಿ ದುಡಿಸಿಕೊಂಡರೂ ತಮ್ಮನ್ನು ಕಡೆಗಣಿಸಲಾಗುತ್ತದೆ. ಅಲ್ಪ ಸ್ವಲ್ಪ ಹಣವನ್ನೂ ನೀಡದೇ ದೂರ ತಳ್ಳಲಾಗುತ್ತದೆ. ನಮ್ಮನ್ನು ಪ್ರಾಣಿಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೈಡ್​ ಆ್ಯಕ್ಟರ್​ಗಳ ಪೈಕಿ ಎಷ್ಟೋ ಮಂದಿ ಪ್ರತಿಭಾನ್ವಿತರಿದ್ದಾರೆ. ಹೀರೋ-ಹೀರೋಯಿನ್​ಗಳನ್ನು ಮೀರಿಸುವ ಚೆಲುವೆ-ಚೆಲವರೂ ಇದ್ದಾರೆ. ಆದರೆ ಅವರ ದುರಾದೃಷ್ಟಕ್ಕೆ ಉತ್ತಮ ರೋಲ್​ಗಳು  ಕೊನೆಯವರೆಗೂ ಸಿಗುವುದೇ ಇಲ್ಲ. ಅವರಿಗೆ ಸರಿಯಾಗಿ ಪೇಮೆಂಟ್​ ಕೂಡ ಮಾಡಲಾಗುವುದಿಲ್ಲ ಎನ್ನುವುದು ಸುನೀತಾ ರಜ್ವಾರ್​ ಮಾತು.

ಇದೇ ವೇಳೆ ತೃಪ್ತಿ ದಿಮ್ರಿಯ ವಿಷಯವೂ ಬೆಳಕಿಗೆ ಬಂದಿದೆ. ಇಂಥೊಬ್ಬ ನಟಿ ಇದ್ದಾರೆ ಎಂದು ತಿಳಿಯದೇ ಇದ್ದರೂ ರಾತ್ರೋ ರಾತ್ರಿ ಈಕೆ ನ್ಯಾಷನಲ್​ ಕ್ರಷ್​ ಆಗಿಬಿಟ್ಟರು. ಅದಕ್ಕೆ ಕಾರಣ ಎನಿಮಲ್​ ಚಿತ್ರ. ಈ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ 10 ನಿಮಿಷ ನಟಿಸಿದ ನಟಿ 14 ಕೋಟಿ ರೂಪಾಯಿ ಬಂಗಲೆ ಖರೀದಿಸಿದರು. ಇದೊಂದೇ ದೃಶ್ಯಕ್ಕಾಗಿ ಈಗ ಹಲವಾರು ಆಫರ್​ಗಳು ಅವರ ಕೈಯಲ್ಲಿವೆ.   ಗೂಗಲ್​ ಸರ್ಚ್​ನಲ್ಲಿಯೂ ನಂಬರ್​ 1 ಸ್ಥಾಪ ಪಡೆದರು ಈ ನಟಿ. ಅರೆಬರೆ ಬೆತ್ತಲಾಗುವ ನಟಿಯರೂ ಮುಜುಗರ ಪಡುವಂತೆ ತೃಪ್ತಿ ದಿಮ್ರಿಯ ಪಾತ್ರ ಎಲ್ಲರ ಹುಬ್ಬೇರಿಸಿದ್ದು ಮಾತ್ರವಲ್ಲದೇ ಅತ್ಯಂತ ಕ್ರೂರ, ಹಿಂಸಾಚಾರದ ಚಿತ್ರ ಎನಿಸಿಕೊಂಡ ನಡುವೆಯೇ ಅನಿಮಲ್​ ನೂರಾರು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತು. ಇದೇ ವಿಷಯವನ್ನು ಸುನೀತಾ ಹೇಳಿದ್ದಾರೆ. 

ಐಶ್​ ಮಾತ್ರವಲ್ಲ ಸಲ್ಮಾನ್​ ಹಾರ್ಟ್​ ಬ್ರೇಕ್​ ಮಾಡಿದ್ರು ಈ ನಟಿ! ಅಪ್ಪನ ಕಾರಣದಿಂದ ಮದ್ವೆ ಕ್ಯಾನ್ಸಲ್​

Latest Videos
Follow Us:
Download App:
  • android
  • ios