Asianet Suvarna News Asianet Suvarna News

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ನಟಿ ಕಂಗನಾ ರಣಾವತ್​ ತಾವು ಗೆದ್ದರೆ ನಟನೆ ಬಿಡ್ತಾರಾ? ಪ್ರಶ್ನೆಗೆ ನಟಿ ಹೇಳಿದ್ದೇನು?
 

Kangana Ranaut Says She Will Give Up Acting If She Wins Mandi Seat In Lok Sabha Polls suc
Author
First Published May 19, 2024, 3:36 PM IST

ಹಿಮಾಚಲ ಪ್ರದೇಶದ  ಮಂಡಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕಂಗನಾ ರಣಾವತ್ ಈಚೆಗಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ಗೆಲುವಿನ ಉತ್ಸಾಹದಲ್ಲಿರುವ ಅವರು, ಇದೀಗ ಹೇಳಿಕೆಯೊಂದನ್ನು ನೀಡಿದ್ದ ಈಕೆಯ ಫ್ಯಾನ್ಸ್​ ತುಂಬಾ ಶಾಕ್​ ಆಗಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ, ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ನಟನೆ ಬಿಡುತ್ತೀರಾ ಎನ್ನುವ ಪ್ರಶ್ನೆಗೆ ಕಂಗನಾ ಹೌದು ಎಂದು ಹೇಳಿದ್ದಾರೆ. ಆಜ್​ತಕ್​ಗೆ ನೀಡಿದ್ದ ಸಂದರ್ಶನದಲ್ಲಿ, ಕಂಗನಾ ಅವರಿಗೆ, ರಾಜಕೀಯ ಮತ್ತು ಸಿನಿಮಾದ ಕುರಿತು ಪ್ರಶ್ನೆ ಕೇಳಲಾಯಿತು. ಒಂದು ವೇಳೆ ಗೆದ್ದರೆ ಚಿತ್ರರಂಗವನ್ನು ತೊರೆಯುತ್ತೀರೋ ಎಂದು ಕೇಳಿದಾಗ ನಟಿ ಎಸ್​ ಎಂದಿದ್ದಾರೆ.  ನನಗೆ ಹಲವು ಚಲನಚಿತ್ರ ನಿರ್ಮಾಪಕರು  ನೀನು ಉತ್ತಮ ನಟಿ, ರಾಜಕೀಯಕ್ಕೆ ಹೋಗಬೇಡಿ, ಚಿತ್ರರಂಗವನ್ನು ಬಿಡಬೇಡಿ ಎಂದೆಲ್ಲಾ ಹೇಳುತ್ತಿದ್ದಾರೆ. ಇದನ್ನು ನಾನು ಕಾಂಪ್ಲಿಮೆಂಟ್​ ಆಗಿ ತೆಗೆದುಕೊಳ್ಳುತ್ತೇನೆ. ಆದರೆ ನಟನಾ ಕ್ಷೇತ್ರವನ್ನು  ಬಿಡುವುದಾಗಿ ಕಂಗನಾ ಹೇಳಿದ್ದಾರೆ. 

“ನಾನು ತುಂಬಾ ಭಾವೋದ್ರಿಕ್ತ ವ್ಯಕ್ತಿ. ನಾನು ಎಂದಿಗೂ ಒಂದೇ ಕೆಲಸ ಮಾಡಲು ಬಯಸುವವಳಲ್ಲ. ಆದರೆ ಸದಾ ಕೆಲಸ ಮಾಡುತ್ತಲೇ ಇರುತ್ತೇನೆ.  ಚಲನಚಿತ್ರಗಳಲ್ಲಿಯೂ ಸಹ ನಾನು ಬರೆಯಲು ಪ್ರಾರಂಭಿಸಿದ್ದೇನೆ.  ಪಾತ್ರವನ್ನು ನಿರ್ವಹಿಸುವುದು ನನಗೆ ಬೇಸರವಾದಾಗ, ನಾನು ನಿರ್ದೇಶಿಸುತ್ತೇನೆ ಅಥವಾ ನಿರ್ಮಿಸುತ್ತೇನೆ, ಆದ್ದರಿಂದ ನಾನು ತುಂಬಾ ಫಲವತ್ತಾದ ಮನಸ್ಸನ್ನು ಹೊಂದಿದ್ದೇನೆ, ಕೆಲಸದಲ್ಲಿ ನನ್ನನ್ನು ನಾನು ಉತ್ಸಾಹದಿಂದ ತೊಡಗಿಸಿಕೊಳ್ಳಲು ಬಯಸುತ್ತೇನೆ ಎಂದಿದ್ದಾರೆ. ಇವರ ಈ ವಿಡಿಯೋ ವೈರಲ್​ ಆಗಿದೆ. ವಿಡಿಯೋ ನೋಡಿ ಕಂಗನಾ ಅಭಿಮಾನಿಗಳು ಶಾಕ್​  ಆಗಿದ್ದಾರೆ. ದಯವಿಟ್ಟು ನಟನೆಯನ್ನು ಬಿಡಬೇಡಿ ಎನ್ನುತ್ತಿದ್ದಾರೆ. ನೀವು ಚುನಾವಣೆಯಲ್ಲಿ ಗೆಲುವು ಸಾಧಿಸಿಯೇ ಸಾಧಿಸುತ್ತೀರಿ ಎನ್ನುವ ವಿಶ್ವಾಸ ಇದೆ. ಆದರೆ ಎರಡನ್ನೂ ನಿಭಾಯಿಸಿಕೊಂಡು ಹೋಗುವ ತಾಕತ್ತು ನಿಮ್ಮಲ್ಲಿದೆ ಎನ್ನುತ್ತಿದ್ದಾರೆ. 

ಏನಮ್ಮಾ ಕಂಗನಾ ಇದು? ಮಾತಿನ ಆರ್ಭಟದಲ್ಲಿ ಬಿಜೆಪಿಯ ತೇಜಸ್ವಿ ಸೂರ್ಯಂಗೇ ಹೀಗೇ ಹೇಳೋದಾ?

ಅಂದಹಾಗೆ, ಕಂಗನಾ ಅವರು, ಕಳೆದ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.  ಅವರ ಚುನಾವಣಾ ಅಫಿಡವಿಟ್ ಪ್ರಕಾರ 28.7 ಕೋಟಿ ಚರಾಸ್ತಿ ಮತ್ತು 62.9 ಕೋಟಿ ಸ್ಥಿರಾಸ್ತಿ ಸೇರಿದಂತೆ 90 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.  ಇವರ  ಬಳಿ 2 ಲಕ್ಷ ರೂಪಾಯಿ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಸುಮಾರು 1.35 ಕೋಟಿ ರೂಪಾಯಿ ಹಣ ಇದೆ. ಕಂಗನಾ ಅವರು ಮುಂಬೈ, ಪಂಜಾಬ್ ಮತ್ತು ಮನಾಲಿಯಲ್ಲಿ ಆಸ್ತಿಯನ್ನು ಹೊಂದಿದ್ದಾರೆ ಮತ್ತು ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂಪಾಯಿಯ ಮರ್ಸಿಡಿಸ್ ಮೇಬ್ಯಾಚ್‌ ಸೇರಿದಂತೆ ಮೂರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

 ನಟಿಯ ಬಳಿ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 6.7 ಕೆಜಿ ಚಿನ್ನ, 50 ಲಕ್ಷ ರೂಪಾಯಿ ಮೌಲ್ಯದ 60 ಕೆಜಿ ಬೆಳ್ಳಿ ಮತ್ತು 3 ಕೋಟಿ ರೂಪಾಯಿ ಮೌಲ್ಯದ 14 ಕ್ಯಾರೆಟ್ ವಜ್ರದ ಆಭರಣಗಳನ್ನು ಹೊಂದಿದ್ದಾರೆ. ಆಕೆಯ ಹೆಸರಿನಲ್ಲಿ 50 ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (LIC) ಪಾಲಿಸಿಗಳಿವೆ ಮತ್ತು ಆಕೆಯ ಒಟ್ಟು ಸಾಲಗಳು 7.3 ಕೋಟಿ ರೂಪಾಯಿ ಆಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಕಂಗನಾ ಚಂಡೀಗಢದ ಖಾಸಗಿ ಶಾಲೆಯಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ. ಚುನಾವಣಾ ದಾಖಲೆಯಲ್ಲಿ ಬಿಜೆಪಿ ಅಭ್ಯರ್ಥಿ ಘೋಷಿಸಿರುವಂತೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮೂರು ಸೇರಿದಂತೆ ಕಂಗನಾ ವಿರುದ್ಧ ಒಟ್ಟು ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

Sanjay Leela Bhansali:ರೇಷನ್​ನಲ್ಲಿ ಕ್ಯೂ ನಿಲ್ಲೋ ಮಹಿಳೆಯರಿಗಿಂತ ನನಗೆ ವೇಶ್ಯೆಯರ ಮೇಲೆ ಹೆಚ್ಚು ವ್ಯಾಮೋಹ, ಏಕೆಂದ್ರೆ...

 

Latest Videos
Follow Us:
Download App:
  • android
  • ios