'ದಳಪತಿ 66' ಸಿನಿಮಾಗೆ ರಶ್ಮಿಕಾಗೂ ಮೊದಲು ಆಯ್ಕೆಯಾಗಿದ್ದು ಈ ಸ್ಟಾರ್ ನಟಿ
ದಳಪತಿ 66 ಸಿನಿಮಾಗೆ ಮೊದಲ ಆಯ್ಕೆ ರಶ್ಮಿಕಾ ಆಗಿರಲಿಲ್ಲ ಎನ್ನುವ ಸತ್ಯವನ್ನು ನಿರ್ಮಾಪಕ ದಿಲ್ ರಾಜು ಬಹಿರಂಗ ಪಡಿಸಿದ್ದಾರೆ. ವಿಜಯ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಪೂಜಾ ಹೆಗ್ಡೆ(Pooja Hegde). ಆದರೆ ಬಳಿಕ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿದ್ದಾರೆ.
ತಮಿಳು ಸ್ಟಾರ್ ನಟ ಇಳಯದಳಪತಿ ವಿಜಯ್(Vijay) ನಟನೆಯ ಹೊಸ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ(Rashmika Mandanna) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ 'ದಳಪತಿ 66' ಎಂದು ಕರೆಯಲಾಗುತ್ತಿದೆ. ರಶ್ಮಿಕಾ ಮಂದಣ್ಣಗೆ ತಮಿಳಿನ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಜೊತೆ ನಟಿಸಬೇಕೆನ್ನುವ ದೊಡ್ಡ ಕನಸಿತ್ತು. ವಿಜಯ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ತನ್ನ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದ್ದು ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಪೂಜೆಯಲ್ಲಿ ಭಾಗಿಯಾಗಿದ್ದರು. ವಂಶಿ ಪಡಿಪಲ್ಲಿ ಸಾರಥ್ಯದಲ್ಲಿ ಬರ್ತಿರುವ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡುತ್ತಿದ್ದಾರೆ.
ಅಂದಹಾಗೆ ದಳಪತಿ 66 ಸಿನಿಮಾಗೆ ಮೊದಲ ಆಯ್ಕೆ ರಶ್ಮಿಕಾ ಆಗಿರಲಿಲ್ಲ ಎನ್ನುವ ಸತ್ಯವನ್ನು ನಿರ್ಮಾಪಕ ದಿಲ್ ರಾಜು ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ಮತ್ಯಾರು ಎನ್ನುವ ಪ್ರಶ್ನೆ ಮೂಡುವುದು ಸಹಜ. ವಿಜಯ್ ಸಿನಿಮಾಗೆ ಮೊದಲು ಆಯ್ಕೆಯಾಗಿದ್ದು ಪೂಜಾ ಹೆಗ್ಡೆ(Pooja Hegde). ಆದರೆ ಪೂಜಾ ಹೆಗ್ಡೆಯನ್ನು ಸಿನಿಮಾದಿಂದ ಕೈಬಿಟ್ಟು ಬಳಿಕ ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ. ನಟಿ ಪೂಜಾ ಹೆಗ್ಡೆ ದಕ್ಷಿಣ ಭಾರತದಲ್ಲಿ ಬ್ಯುಸಿ ಇರುವ ನಟಿ. ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸೂಪರ್ ಸ್ಟಾರ್ ಗಳ ಜೊತೆ ನಟಿಸುತ್ತಿದ್ದಾರೆ. ಅಲ್ಲದೆ ವಿಜಯ್ ನಟನೆಯ ಬೀಸ್ಟ್ ಸಿನಿಮಾದಲ್ಲೂ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಹಾಗಾಗಿ ಪೂಜಾ ಹೆಗ್ಡೆ ಅವರನ್ನು ಕೈಬಿಟ್ಟು ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ದಿಲ್ ರಾಜು ಬಹಿರಂಗ ಪಡಿಸಿದ್ದಾರೆ.
ಈ ಚರ್ಚೆಯಲ್ಲಿ ನಟಿ ಪೂಜಾ ಹೆಗ್ಡೆ ಕೂಡ ಜೊತೆಯಲ್ಲೇ ಇದ್ದರು. ಸಾಕಷ್ಟು ಬ್ಯುಸಿ ಇದ್ದಾರೆ. ಡೇಟ್ ಸಮಸ್ಯೆ ಕೂಡ ಇತ್ತು. ಹಾಗಾಗಿ ಪೂಜಾ ಕೂಡ ವಿಜಯ್ 66ನೇ ಸಿನಿಮಾಗೆ ಸಹಿ ಮಾಡಿಲ್ಲ ಎಂದು ದಿಲ್ ರಾಜು ಹೇಳಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ಬೀಸ್ಟ್ ಸಿನಿಮಾ ಮೂಲಕ ತಮಿಳಿನಲ್ಲಿ ಖಾತೆ ತೆರೆದಿದ್ದಾರೆ. ಮೊದಲ ಸಿನಿಮಾಗೆ ಪ್ರೇಕ್ಷಕರಿಂದ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ಮುಂದಿನ ತಮಿಳು ಸಿನಿಮಾದ ಬಗ್ಗೆ ಯೋಚಿಸುವ ಸಾಧ್ಯತೆ ಇದೆ.
ತಮಿಳು ನಟನೊಂದಿಗೆ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ, ಇನ್ನು ಹಿಡಿಯೋರಿಲ್ಲ ಬಿಡಿ
ವಿಜಯ್ ಸದ್ಯ ಬೀಸ್ಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಬೀಸ್ಟ್ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ. ಕೆಜಿಎಫ್-2 ಬಿಡುಗಡೆಗೆ ಒಂದು ದಿನ ಮೊದಲು ತೆರೆಗೆ ಬರುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಮಾಸ್ಟರ್ ಸಿನಿಮಾ ಬಳಿಕ ವಿಜಯ್ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ವಿಜಯ್ 66ನೇ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಾಗಿದ್ದಾರೆ.
ರಶ್ಮಿಕಾ ಮಂದಣ್ಣ ಎಲ್ಲೆಲ್ಲಿ ಮನೆ ಕೊಂಡುಕೊಂಡಿದ್ದಾರೆ ಗೊತ್ತಾ?
ಇನ್ನು ರಶ್ಮಿಕಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಮಿಷನ್ ಮಜ್ನು ಹಾಗೂ ಗುಡ್ ಬೈ ಸಿನಿಮಾ ಜೊತೆಗೆ ರಣಬೀರ್ ಕಪೂರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಮೊದಲ ಸಿನಿಮಾ ಬಿಡುಗಡೆಗೂ ಮೊದಲು ರಶ್ಮಿಕಾ ಅನೇಕ ಸಿನಿಮಾಗೆ ಸಹಿ ಮಾಡಿದ್ದಾರೆ. ಇನ್ನು ಪುಷ್ಪ 2 ಚಿತ್ರದಲ್ಲು ನಟಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.