ನಟಿ ರಶ್ಮಿಕಾ ಮಂದಣ್ಣ ಪಾಲಿಗೆ ಇಂದು (ಏಪ್ರಿಲ್ 06) ಕನಸು ನನಸಾದ ದಿನ. ರಶ್ಮಿಕಾ ಮಂದಣ್ಣಗೆ ತಮಿಳಿನ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಜೊತೆ ನಟಿಸಬೇಕೆನ್ನುವ ದೊಡ್ಡ ಕನಸಿತ್ತು. ಇದೀಗ ವಿಜಯ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ತನ್ನ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಪಾಲಿಗೆ ಇಂದು (ಏಪ್ರಿಲ್ 06) ಕನಸು ನನಸಾದ ದಿನ. ರಶ್ಮಿಕಾ ಮಂದಣ್ಣಗೆ ತಮಿಳಿನ ಸೂಪರ್ ಸ್ಟಾರ್ ಇಳಯದಳಪತಿ ವಿಜಯ್ ಜೊತೆ ನಟಿಸಬೇಕೆನ್ನುವ ದೊಡ್ಡ ಕನಸಿತ್ತು. ಇದೀಗ ವಿಜಯ್ ಸಿನಿಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ತನ್ನ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹೌದು, ವಿಜಯ್ ನಟನೆಯ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಶ್ಮಿಕಾ ಮಂದಣ್ಣ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ರಶ್ಮಿಕಾ ಕಾಲ್ ​ಶೀಟ್​ ಪಡೆಯೋಕೆ ಸ್ಟಾರ್ ನಿರ್ಮಾಪಕರು ಕಾದು ಕೂತಿದ್ದಾರೆ. ಆದರೆ ರಶ್ಮಿಕಾ ಅಲೆದು ತೂಗಿ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಅದರಲ್ಲಿ ವಿಜಯ್ ಸಿನಿಮಾ ಕೂಡ ಒಂದು.

ಈ ಮೊದಲೆ ರಶ್ಮಿಕಾ, ದಳಪತಿ ವಿಜಯ್ (Thalapathy Vijay) ನಟನೆಯ 66ನೇ ಚಿತ್ರಕ್ಕೆ ನಾಯಕಿ ಎನ್ನುವ ವಿಚಾರ ಹರಿದಾಡಿತ್ತು. ಈ ಸುದ್ದಿ ಈಗ ನಿಜವಾಗಿದ್ದು, ವಿಜಯ್ ಜೊತೆ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರೆ. ಅಂದಹಾಗೆ ಈಗಾಗಲೇ ಸಿನಿಮಾದ ಮುಹೂರ್ತ ಕೂಡ ನೆರವೇರಿದೆ. ಇಂದು (ಏಪ್ರಿಲ್ 06) ನಡೆದ ಮುಹೂರ್ತ ಸಮಾರಂಭದಲ್ಲಿ ವಿಜಯ್ ಮತ್ತು ರಶ್ಮಿಕಾ ಇಬ್ಬರು ಹಾಜರಿದ್ದರು. ಮುಹೂರ್ತದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾಯುತ್ತಿದೆ.

Rashmika Mandanna ಅವರ ಗೋವಾ, ಮುಂಬೈನಲ್ಲಿ ರಶ್ಮಿಕಾ ಐಷಾರಾಮಿ ಮನೆ ನೋಡಿ ಹೇಗಿವೆ?

ಅಂದಹಾಗೆ ವಿಜಯ್ 66ನೇ ಸಿನಿಮಾಗೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಅಂದಹಾಗೆ ರಶ್ಮಿಕಾಗೆ ಇದು ಎರಡನೇ ತಮಿಳು ಸಿನಿಮಾವಾಗಿದೆ. ಈ ಮೊದಲು ತಮಿಳಿನಲ್ಲಿ ಸುಲ್ತಾನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ನಿರೀಕ್ಷೆಯ ಗೆಲವು ತಂದುಕೊಟ್ಟಿಲ್ಲ. ಇದೀಗ ವಿಜಯ್ ಜೊತೆ ನಟಿಸುವ ಮೂಲಕ ಮತ್ತೊಮ್ಮೆ ತಮಿಳಿನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಇನ್ನು ವಿಜಯ್ ಸದ್ಯ ಬಹುನಿರೀಕ್ಷೆಯ ಬೀಸ್ಟ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.

ನೆಲ್ಸನ್ ದಿಲೀಪ್ ಕುಮಾರ್ ಸಾರಥ್ಯದಲ್ಲಿ ಮೂಡಿಬಂದಿರುವ ಬೀಸ್ಟ್ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ಕೆಜಿಎಫ್2 ಸಿನಿಮಾ ಬಿಡುಗಡೆಗೂ ಒಂದು ದಿನ ಮೊದಲು ಬೀಸ್ಟ್ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ.

#Happybirthday ರಶ್ಮಿಕಾ ಮಂದಣ್ಣ, ಪ್ರೀತಿಯ ಶ್ವಾನಗಳ ಜೊತೆ ಕ್ಲಿಕ್!

ರಶ್ಮಿಕಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಮಿಷನ್​ ಮಜ್ನು ಹಾಗೂ ಗುಡ್​ ಬೈ ಸಿನಿಮಾ ಜೊತೆಗೆ ರಣಬೀರ್ ಕಪೂರ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಮೊದಲ ಸಿನಿಮಾ ಬಿಡುಗಡೆಗೂ ಮೊದಲು ರಶ್ಮಿಕಾ ಅನೇಕ ಸಿನಿಮಾಗೆ ಸಹಿ ಮಾಡಿದ್ದಾರೆ. ಇನ್ನು ಪುಷ್ಪ 2 ಚಿತ್ರದಲ್ಲು ನಟಿಸುತ್ತಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ‘ಆಡವಾಳ್ಳು ಮೀಕು ಜೋಹಾರ್ಲು’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಪಡೆದುಕೊಂಡಿಲ್ಲ. ಇನ್ನು, ದುಲ್ಕರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಕಾಶ್ಮೀರಿ ಹುಡುಗಿ ಆಗಿ ಕಾಣಿಸಿಕೊಂಡಿದ್ದು ಹುಟ್ಟುಹಬ್ಬದ ದಿನ ಫಸ್ಟ್ ಲುಕ್ ಬಿಡುಗಡೆಯಾಗಿದೆ.