ವಿನೋದ್‌ ಕುಮಾರ್‌ ಅವರ ಆರೋಪವನ್ನು ನೋಡಿ ಸೋಶಿಯಲ್‌ ಮೀಡಿಯಾದವರು ಕ್ರೇಜಿ ಆಗಿದ್ದಾರೆ. ಪ್ರಕಾಶ್‌ ರೈ ಅವರನ್ನು ಕಂಡರಾಗದವರು ಅವರ ಮೇಲೆ ಮುಗಿಬಿದ್ದಿದ್ದಾರೆ.

ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮೇಲೆ ಇನ್ನೊಂದು ಗಂಭೀರ ಆರೋಪ ಕೇಳಿಬಂದಿದೆ. ಯಾವಾಗಲೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ, ಬಿಜೆಪಿ ನಾಯಕರ ವಿರುದ್ಧ ಆರೋಪಗಳನ್ನು ಸಿಡಿಸುತ್ತಿರುವುದು ಪ್ರಕಾಶ್‌ ರೈ ಅವರ ರೂಢಿ. ಕೆಲವೊಮ್ಮೆ ಅವು ಬರೀ ಹಿಟ್‌ ಆಂಡ್‌ ರನ್‌ಗಳಾಗಿರುತ್ತವೆ ಎಂಬುದನ್ನೂ ಹೆಚ್ಚಿನವರು ಬಲ್ಲರು. ಎಕ್ಸ್‌ನಲ್ಲಿ ʼಜಸ್ಟ್‌ ಆಸ್ಕಿಂಗ್‌ʼ ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಯಾರ್ಯಾರಿಗೋ ಪ್ರಶ್ನೆಗಳನ್ನು ಕೇಳುತ್ತಾ ಕೆದಕುತ್ತಾ ಇರುತ್ತಾರೆ ಪ್ರಕಾಶ್‌ ರೈ. ಸದ್ಯ ಅವರೇ ಈಗ ಗಂಭೀರ ಆರೋಪವೊಂದಕ್ಕೆ ತುತ್ತಾಗಿದ್ದಾರೆ.

ಪ್ರಕಾಶ್‌ ರೈ ಬಹುಭಾಷೆಯ ಫೈನೆಸ್ಟ್‌ ಆಕ್ಟರ್‌ಗಳಲ್ಲಿ ಒಬ್ಬರು. ಕೆಲವು ಸಿನಿಮಾ ಪ್ರೊಡಕ್ಷನ್‌ಗಳನ್ನೂ ಮಾಡಿದ್ದಾರೆ. ರಾಜಕೀಯದಲ್ಲೂ ಸಕ್ರಿಯ. 2019ರಲ್ಲಿ ಕರ್ನಾಟಕದಲ್ಲಿ ಚುನಾವನೆಯಲ್ಲೂ ಸ್ಪರ್ಧಿಸಿದ್ದರು. ಮೊದಲು ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗಲಿ ಎಂದು ಹಾರೈಸಿದ್ದರು. ಆದರೆ ಕಾಂಗ್ರೆಸ್‌ ಇವರಿಗೆ ಟಿಕೆಟ್‌ ಕೊಡಲಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಠೇವಣಿಯನ್ನೂ ಕಳೆದುಕೊಂಡಿದ್ದರು. ಇದೆಲ್ಲ ನಿಮಗೆ ಗೊತ್ತಿದ್ದದ್ದೇ.

ಸದ್ಯ ಇವರ ಮೇಲೆ ಆರೋಪ ಮಾಡಿದವರು ವಿನೋದ್‌ ಕುಮಾರ್‌ ಎಂಬವರು. ಇವರು ತಮಿಳಿನ ಸಿನಿಮಾ ಪ್ರೊಡ್ಯೂಸರ್‌. ಮೊದಲು ಪ್ರಕಾಶ್‌ ರೈ, ತಾವು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್‌ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌ ಮತ್ತು ಇನ್ನೊಬ್ಬ ಸಚಿವರ ಜೊತೆಗೆ ಇರುವ ಫೋಟೋ ಒಂದನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರು. "ಡಿಸಿಎಂ ಜೊತೆಗೆ" ಎಂದು ಕ್ಯಾಪ್ಷನ್‌ ಹಾಕಿದ್ದರು. 

ಇದನ್ನು ಟ್ಯಾಗ್‌ ಮಾಡಿ ವಿನೋದ್‌ ಕುಮಾರ್‌ ಇದಕ್ಕೊಂದು ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್‌ನಲ್ಲಿ ಅವರು ಪ್ರಕಾಶ್‌ ರೈಗೆ ನೀಡಿದ ಉತ್ತರ ಹೀಗಿದೆ: "ನಿಮ್ಮ ಜೊತೆಗೆ ಇರುವ ಇನ್ನೂ ಮೂವರು ಚುನಾವಣೆಯಲ್ಲಿ ಗೆದ್ದವರು, ನೀವು ಠೇವಣಿಯನ್ನೂ ಕಳೆದುಕೊಂಡವರು. ಅದೇ ವ್ಯತ್ಯಾಸ. ನೀವು ನನ್ನ ಶೂಟಿಂಗ್‌ ಸೆಟ್‌ನಲ್ಲಿ 1 ಕೋಟಿ ರೂಪಾಯಿಯಷ್ಟು ಲಾಸ್‌ ಮಾಡಿದ್ದೀರಿ. ನಂತರ ಕ್ಯಾರವಾನ್‌ನಿಂದ ನಮಗ್ಯಾರಿಗೂ ಮಾಹಿತಿ ನೀಡದೆ ಕಾಣೆಯಾಗಿದ್ದೀರಿ! ಇದಕ್ಕೇನು ಕಾರಣ? ಜಸ್ಟ್‌ ಆಸ್ಕಿಂಗ್!‌ ಫೋನ್‌ ಮಾಡುತ್ತೇನೆ ಎಂದರಿ. ಮಾಡಲಿಲ್ಲ" ಎಂದು ಅವರು ಆರೋಪಿಸಿದ್ದಾರೆ. 

ಈ ಹಿಂದೆ ವಿನೋದ್‌ ಕುಮಾರ್‌ ಹಲವು ಫಿಲಂಗಳನ್ನು ಪ್ರೊಡ್ಯೂಸ್‌ ಮಾಡಿದ್ದಾರೆ. ಉದಾಹರನೆಗೆ ವಿಶಾಲ್‌ ಮತ್ತು ಆರ್ಯರ ಎನಿಮಿ, ವಿಶಾಲ್‌ ಮತ್ತು ಸೂರ್ಯರ ಮಾರ್ಕ್‌ ಆಂಟನಿ, ಇತ್ಯಾದಿ. ಇವರ ಸುಮಾರು ಫಿಲಂಗಳಲ್ಲಿ ಪ್ರಕಾಶ್‌ ರೈ ಕಾಣಿಸಿಕೊಂಡಿದ್ದಾರೆ. ಯಾವ ಫಿಲಂನಲ್ಲಿ ಪ್ರಕಾಶ್‌ ರೈ ಶೂಟಿಂಗ್‌ ಸೆಟ್‌ಗೆ ಹಾನಿ ಎಸಗಿದರು, ಹೇಗೆ ಎಸಗಿದರು, ಘಟನೆ ಯಾವಾಗ ನಡೆಯಿತು ಎಂಬಿತ್ಯಾದಿ ವಿವರಗಳನ್ನು ವಿನೋದ್‌ ಕುಮಾರ್‌ ನೀಡಿಲ್ಲ. ಸದ್ಯ ಪ್ರಕಾಶ್ ರೈ- ವಿನೋದ್‌ ಕುಮಾರ್‌ ಜೊತೆಯಾದ ಫಿಲಂ ಸೆಟ್‌ ಎಂದರೆ ಎನಿಮಿ. ಇದು 2021ರಲ್ಲಿ ರಿಲೀಸ್‌ ಆಯ್ತು. 

ಪುಷ್ಟ ಸ್ಟಾರ್ ಅಲ್ಲು ಅರ್ಜುನ್ ಗೆ ಈ ಬಾಲಿವುಡ್ ಸ್ಟಾರ್ ಸಕ್ಕತ್ ಇಷ್ಟವಂತೆ!

ವಿನೋದ್‌ ಕುಮಾರ್‌ ಅವರ ಆರೋಪವನ್ನು ನೋಡಿ ಸೋಶಿಯಲ್‌ ಮೀಡಿಯಾದವರು ಕ್ರೇಜಿ ಆಗಿದ್ದಾರೆ. ಪ್ರಕಾಶ್‌ ರೈ ಅವರನ್ನು ಕಂಡರಾಗದವರು ಅವರ ಮೇಲೆ ಮುಗಿಬಿದ್ದಿದ್ದಾರೆ. ಇನ್ನಷ್ಟು ಮಂದಿ ಪ್ರಕರಣದ ವಿವರಗಳನ್ನು ತಿಳಿದುಕೊಳ್ಳಲು ಕುತೂಹಲಿಗಳಾಗಿದ್ದಾರೆ. ಸಾಕಷ್ಟು ತಮಾಷೆ, ಕ್ರೇಜಿ ಕಮೆಂಟ್‌ಗಳೂ ಬಂದಿವೆ. "ಪ್ರಕಾಶ್‌ ರೈ ಹಿಟ್‌ ಅಂಡ್‌ ರನ್‌ಗೇ ಫೇಮಸ್ಸು. ಎಲ್ಲ ಕಡೆ ಅವರು ಹೀಗೇನೇ" ಅಂತ ಕೆಲವು ಕುಟುಕಿದ್ದಾರೆ. 

ಅಭಿಷೇಕ್, ಐಶ್ವರ್ಯಾ ಮದ್ವೆ ನಿಲ್ಲಿಸಬೇಕು ಅಂತ ಇವರು ಟ್ರೈ ಮಾಡಿದ್ದರಂತೆ! ಯಾರಿರಬಹುದು?

ಸದ್ಯ ಪ್ರಕಾಶ್‌ ರೈ ಹಲವು ಫಿಲಂಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜೂ.ಎನ್‌ಟಿಆರ್‌ನ ʼದೇವರʼದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. ರಾಮ್‌ ಚರನ್‌ನ ಗೇಮ್‌ ಚೇಂಜರ್‌, ಸೂರ್ಯನ ಕಂಗುವಾ, ದಳಪತಿ ವಿಜಯ್‌ನ ಮುಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

Scroll to load tweet…