ಪುಷ್ಟ ಸ್ಟಾರ್ ಅಲ್ಲು ಅರ್ಜುನ್ ಗೆ ಈ ಬಾಲಿವುಡ್ ಸ್ಟಾರ್ ಸಕ್ಕತ್ ಇಷ್ಟವಂತೆ!
ದಕ್ಷಿಣ ಭಾರತದ ಸೂಪರ್‌ಸ್ಟಾರ್ ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್, ಭಾರತದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ಬಾಲಿವುಡ್‌ನಲ್ಲಿ ತೆಲುಗು ನಟ ಅಲ್ಲು ಅರ್ಜುನ್ ಮೆಚ್ಚುವ ಏಕೈಕ ನಟ ಯಾರು ಎಂಬ ವಿಚಾರ ನಿಮಗೆ ಗೊತ್ತಾ? ಇಲ್ಲಿದೆ ಡಿಟೇಲ್ ಸ್ಟೋರಿ
ಟಾಲಿವುಡ್‌ನ ಬನ್ನಿ, ಅಲ್ಲು ಅರ್ಜುನ್ ಪ್ರಸ್ತುತ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಪುಷ್ಪ' ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅವರು ಸಂಚಲನ ಸೃಷ್ಟಿಸಿದ್ದರು.
ಪುಷ್ಪರಾಜ್ ಆಗಿ ಬನ್ನಿಗೆ ವಿಶ್ವದಾದ್ಯಂತ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಇದರಿಂದ ರೇಸ್‌ಗುರಂ ನಟನಿಗೆ ಒಂದು ಸ್ಪೆಷಲ್ ಇಮೇಜ್ ಕ್ರಿಯೇಟ್ ಆಯಿತು. ಇಷ್ಟೇ ಅಲ್ಲ ಈ ಸಿನಿಮಾಗೆ ಅತ್ಯುತ್ತಮ ನಟನಾಗಿ ರಾಷ್ಟ್ರ ಪ್ರಶಸ್ತಿಯೂ ಸಿಕ್ತು.
ಪುಷ್ಪ ಸಿನಿಮಾದ ನಂತರ ಅಲ್ಲು ಅರ್ಜುನ್ ಅವರಿಗೆ ಹಿಂದಿ ಭಾಷಿಕ ಪ್ರೇಕ್ಷಕರು, ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಫಾಲೋಯಿಂಗ್ ಹೆಚ್ಚಾಗಿದೆ. ಹೀಗಿರುವಾಗ ಬಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ಗೆ ತುಂಬಾ ಇಷ್ಟವಾದ ಹೀರೋ ಯಾರು ಎಂಬ ವಿಚಾರ ಈಗ ತಿಳಿದು ಬಂದಿದೆ.
ಅಲ್ಲು ಅರ್ಜುನ್ ಅವರ ಅಚ್ಚುಮೆಚ್ಚಿನ ಬಾಲಿವುಡ್ ಹೀರೋ ಬೇರೆ ಯಾರೂ ಅಲ್ಲ, ಅದು ಬಿಗ್ ಬಿ ಅಮಿತಾಬ್ ಬಚ್ಚನ್ (Amitabh Bachchan). ಅವರ ಸಿನಿಮಾಗಳು ನನಗೆ ತುಂಬಾ ಇಷ್ಟ ಎಂದು ಬನ್ನಿ ಹೇಳಿದ್ದು, ಅದರಲ್ಲೂ ಅಮಿತಾಭ್ ಅವರ 'ಜಂಜೀರ್' ತಮ್ಮ ಫೇವರಿಟ್ ಸಿನಿಮಾ ಎಂದಿದ್ದಾರೆ ಅಲ್ಲು.
ಹಿಂದಿ ಪ್ರೇಕ್ಷಕರು ತಮ್ಮನ್ನು ಇಷ್ಟಪಡುವ ಸಮಯದಲ್ಲೇ ಬಿಗ್ ಬಿಯೇ ತಮ್ಮ ಫೇವರಿಟ್ ಹೀರೋ ಎಂದು ಬನ್ನಿ ಹೇಳಿರುವುದು ಕುತೂಹಲಕಾರಿಯಾಗಿದೆ. ಆದರೆ, 'ಅಲಾ ವೈಕುಂಠಪುರಂಲೋ' ಸಿನಿಮಾ ಸಮಯದಲ್ಲಿ ನಟ ಬನ್ನಿ ಈ ವಿಚಾರವನ್ನು ಹೇಳಿದ್ದರು.
ಇದರ ನಡುವೆ ನಟ ಅಲ್ಲು ಅರ್ಜುನ್ ಅವರ ಅತ್ಯಂತ ನಿರೀಕ್ಷಿತ 'ಪುಷ್ಪ 2' (Pushpa 2 The Rule) ಸಿನಿಮಾಗಾಗಿ ಇಡೀ ಭಾರತವೇ ಈಗ ಎದುರು ನೋಡುತ್ತಿದೆ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ.