ದಿಯಾ ಮಿರ್ಝಾ ಇತ್ತೀಚೆಗಷ್ಟೇ ಉದ್ಯಮಿ ವೈಭವ್ ರೇಖಿಯವರನ್ನು ಮದುವೆಯಾದರು. ಅವರ ವಿವಾಹ ಖಾಸಗಿ ಕಾರ್ಯಕ್ರಮವಾಗಿತ್ತು. ಸೋಮವಾರ ವಿವಾಹ ಕಾರ್ಯಕ್ರಮ ನಡೆದಿದ್ದು, ಇದೀಗ ನಟಿ ತಮ್ಮ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಒಂದು ಫೋಟೋ ಮಾತ್ರ ಇದರಲ್ಲಿ ಹೆಚ್ಚು ವಿಶೇಷವಾಗಿದೆ. ಮಹಿಳಾ ಪುರೋಹಿತೆ ಮದುವೆ ಶಾಸ್ತ್ರಗಳನ್ನು ನಡೆಸುತ್ತಿರುವುದನ್ನು ನೀವಿಲ್ಲಿ ಕಾಣಬಹುದು. ಪುರೋಹಿತೆ, ಸ್ರ್ತೀವಾದದಲ್ಲಿ ನಿಜವಾಗಿ ಬದುಕುತ್ತಿರುವಾಕೆ ಎಂದು ಕಮೆಂಟಿಸಿದ್ದಾರೆ ಫ್ಯಾನ್ಸ್.

ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ಮದುವೆ ಫೋಟೋಸ್ ವೈರಲ್‌!

ಇವರು ಮಹಿಳಾ ಪುರೋಹಿತೆ ಅಲ್ವಾ ಮಂತ್ರ ಹೇಳುತ್ತಿರುವುದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಫೋಟೋದಲ್ಲಿ ದಿಯಾ ಮತ್ತ ವೈಭವ್ ಅಗ್ನಿ ಕುಂಡದ ಮುಂದೆ ಕುಳಿತಿದ್ದು, ಬದಿಯಲ್ಲಿ ಕುಳಿತ ಹಿರಿಯ ಮಹಿಳೆ ಅಗ್ನಿಗೆ ತುಪ್ಪ ಎರೆಯುತ್ತಿರುವುದನ್ನು ಕಾಣಬಹುದು.

ಪ್ರೀತಿ ನಮ್ಮ ಮನೆಗೆ ಆಗಮಿಸಲಿದೆ. ಪ್ರೀತಿ ಬಾಗಿಲು ತಟ್ಟುವುದನ್ನು ಕೇಳಲು ಎಷ್ಟು ಹಿತವಾಗಿದೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ವಿವಾಹ ಕಾರ್ಯಕ್ರಮಕ್ಕೆ ಅದಿತಿ ರಾವ್ ಹೈದರಿ, ನಿರ್ದೇಶಕ ಕುನಾಲ್ ದೇಶ್ಮುಖ್ ಬಂದಿದ್ದರು.