ನಟಿ ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ಮದುವೆ ಫೋಟೋಸ್ ವೈರಲ್‌!

First Published Feb 17, 2021, 10:22 AM IST

ಬಾಲಿವುಡ್‌ ನಟಿ ದಿಯಾ ಮಿರ್ಜಾ ಫೆಬ್ರವರಿ 15ರಂದು ಬ್ಯುಸಿನೆಸ್‌ ಮ್ಯಾನ್‌ ವೈಭವ್‌ ರೇಖಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹ ಮುಂಬೈನ ಪಾಲಿ ಹಿಲ್‌ನಲ್ಲಿರುವ ಬಂಗಲೆಯಲ್ಲಿ ನೆಡೆಯಿತು. ಮದುವೆಯ ನಂತರ ನವ ದಂಪತಿ ಮೀಡಿಯಾಗೆ ಪೋಸ್‌ ನೀಡಿದರು. ಈ ಸಂದರ್ಭದಲ್ಲಿ ಪತಿ ವೈಭವ್‌ ಕೈ ಹಿಡಿದು ಮುಗುಳ್ನಗೆ ಬೀರುತ್ತಿರುವ ದಿಯಾ ಮಿರ್ಜಾ ಲುಕ್ ಸೂಪರ್ ಆಗಿತ್ತು. ಕೆಂಪು ಸೀರೆಯಲ್ಲಿ ದಿಯಾ ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು  ಹೆವಿ ನೆಕ್ಲೆಸ್‌, ಬೈತಲೆ ಬೊಟ್ಟು ಮತ್ತು ದೊಡ್ಡ ಜುಮುಖಿಗಳೊಂದಿಗೆ ಅವರು ಬ್ರೈಡಲ್‌ ಲುಕ್‌ ಕಂಪ್ಲೀಟ್‌ ಆಗಿತ್ತು.