ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಧೋನಿ ಈಗ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಧೋನಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಧೋನಿ ಈಗ ಸಿನಿಮಾರಂಗದ ಕಡೆ ಮುಖ ಮಾಡಿದ್ದಾರೆ. ಧೋನಿ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಧೋನಿ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಸೆಕೆಂಡ್ ಇನಿಂಗ್ಸ್ ಪ್ರಾರಂಭಿಸಿದ್ದಾರೆ. ಧೋನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಶುರು ಮಾಡುವ ಮೂಲಕ ಇನ್ಮಂದೆ ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿಯು ಆರಂಭದಲ್ಲಿ ಕೇವಲ ಮೂರು ಭಾಷೆಗಳಲ್ಲಿ ಮಾತ್ರ ಚಿತ್ರಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ.
ಧೋನಿ ಸಿನಿಮಾ ಸಂಸಸ್ಥೆಯ ಮೊದಲ ಆದ್ಯತೆ ತಮಿಳು ಸಿನಿಮಾ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿರುವ ಧೋನಿಗೆ ತಮಿಳುನಾಡು ಹಾಗೂ ಅಲ್ಲಿನ ಜನತೆ ಮೇಲೆ ಅಪಾರ ಪ್ರೀತಿ ಗೌರವ. ಅಲ್ಲದೇ ಅಲ್ಲಿ ಧೋನಿಗೆ ಅಪಾರ ಅಭಿಮಾನಿಗಳಿದ್ದಾರೆ. ಹೀಗಾಗಿ ಕಾಲಿವುಡ್ ಮೂಲಕವೇ ಧೋನಿ ಸಿನಿಮಾ ಕೆಲಸ ಆರಂಭಿಸಲಿದ್ದಾರೆ. ಇದಲ್ಲದೆ ಈ ಸಂಸ್ಥೆ ತೆಲುಗು ಹಾಗೂ ಮಲಯಾಳಂ ಚಿತ್ರಗಳನ್ನೂ ಕೂಡ ನಿರ್ಮಿಸಲಿದೆ. ಅಂದರೆ ಆರಂಭದಲ್ಲಿ ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಸಿನಿಮಾ ನಿರ್ಮಿಸಲು ಧೋನಿ ಎಂಟರ್‌ಟೈನ್‌ಮೆಂಟ್ ಕಂಪೆನಿ ಮುಂದಾಗಿದೆ.
US Open 2022 ಟೆನಿಸ್ ಪಂದ್ಯ ವೀಕ್ಷಿಸಿದ ಟೀಂ ಇಂಡಿಯಾ ದಿಗ್ಗಜ ಧೋನಿ, ಕಪಿಲ್ ದೇವ್
ಧೋನಿ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್ ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಇಬ್ಬರ ಒಡೆತನದಲ್ಲಿದೆ. ಈ ಪ್ರೊಡಕ್ಷನ್ ಹೌಸ್ ಬೇರೆ ನಿರ್ಮಾಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ರೋರ್ ಆಫ್ ದಿ ಲಯನ್, ಬ್ಲೇಜ್ ಟು ಗ್ಲೋರಿ ಮತ್ತು ದಿ ಹಿಡನ್ ಹಿಂದೂ ವೆಬ್ ಸಿರೀಸ್ಗಳನ್ನು ನಿರ್ಮಿಸಿದೆ. ಚಿಕ್ಕ ಬಜೆಟ್ ಸಿನಿಮಾಗಳನ್ನು ಮಾಡುತ್ತಿರುವ ಧೋನಿ ಎಂಟರ್ ಟೈನ್ ಮೆಂಟ್ ಇದೀಗ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಯಾಗಿ ದೊಡ್ಡ ಸಿನಿಮಾಗಳನ್ನು ಮಾಡಲು ಮುಂದಾಗಿದೆ.&
MS Dhoni ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್..!
ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಬಳಿಕ ಧೋನಿ ಕಡಕ್ನಾತ್ ಕೋಳಿ ಸಾಕಾಣಿಯ ಮೂಲಕ ಗಮನ ಸೆಳೆದಿದ್ದರು. ಇದೀಗ ಬಣ್ಣದ ಲೋಕದತ್ತ ಹೆಜ್ಜೆ ಹಾಕಿದ್ದಾರೆ. ಸದ್ಯ ಐಪಿಎಲ್ನಲ್ಲಿ ಮಾತ್ರ ಸಕ್ರೀಯರಾಗಿರುವ ಧೋನಿ ಕ್ರಿಕೆಟ್ ಜೊತೆಗೆ ಇತರೆ ಉದ್ಯಮ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳುವ ಮೂಲಕ ಅನೇಕ ಯುವರಿಗೆ ಸ್ಪೂರ್ತಿಯಾಗಿದ್ದಾರೆ.
