RRPK: 72 ವರ್ಷದ ಶಬನಾ ಜೊತೆ ಲಿಪ್ಲಾಕ್ ಅನುಭವ ಹಂಚಿಕೊಂಡ ಧರ್ಮೇಂದ್ರ, ರೊಮ್ಯಾನ್ಸ್‌ಗೆಲ್ಲಿಯ ವಯಸ್ಸು?
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬನಾ ಅಜ್ಮಿ ಲಿಪ್ಲಾಕ್ ದೃಶ್ಯವಿದೆ. ಅದರ ಬಗ್ಗೆ ನಟ ಧರ್ಮೇಂದ್ರ ಹೇಳಿದ್ದೇನು?
ಏಳು ವರ್ಷಗಳ ವಿರಾಮದ ನಂತರ, ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯೊಂದಿಗೆ (Rocky aur Rani ki Prem Kahani) ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ. ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದು, ಧರ್ಮೇಂದ್ರ, ಶಬಾನಾ ಅಜ್ಮಿ ಮತ್ತು ಜಯಾ ಬಚ್ಚನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ವಾರ ಚಿತ್ರಮಂದಿರಗಳಲ್ಲಿ ತೆರೆಕಂಡ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಮುಖ ಜೋಡಿಗಳಾದ ರಣವೀರ್ ಮತ್ತು ಆಲಿಯಾ ನಡುವಿನ ಕೆಮೆಸ್ಟ್ರಿ ಹೊರತಾಗಿ, ಪ್ರೇಕ್ಷಕರನ್ನು ಆಶ್ಚರ್ಯದಿಂದ ಸೆಳೆದದ್ದು ಹಿರಿಯ ನಟರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ನಡುವಿನ ಲಿಪ್-ಲಾಕ್ ಸರಣಿ. ಒಂದು ನಿರ್ದಿಷ್ಟ ದೃಶ್ಯದಲ್ಲಿ, ಇಬ್ಬರು ಸ್ಟಾರ್-ಕ್ರಾಸ್ಡ್ ಪ್ರೇಮಿಗಳು ವರ್ಷಗಳ ಪ್ರತ್ಯೇಕತೆಯ ನಂತರ ಭೇಟಿಯಾಗುತ್ತಾರೆ. ದೃಶ್ಯದಲ್ಲಿ, ಧರ್ಮೇಂದ್ರ ಜನಪ್ರಿಯ ರೆಟ್ರೊ ಹಾಡು ಅಭಿ ನ ಜಾವೋ ಛೋಡ್ ಕರ್ ಹಾಡುತ್ತಿದ್ದಂತೆ ನಟಿ ಶಬನಾ ಜೊತೆ ಭಾವೋದ್ರಿಕ್ತರಾಗಿ ಚುಂಬನದಲ್ಲಿ ತೊಡಗಿಕೊಂಡಿರುವ ದೃಶ್ಯವಿದೆ. ಇದೀಗ ಸಕತ್ ಸದ್ದು ಮಾಡುತ್ತಿದೆ.
ಈ ಚುಂಬದನ ಕುರಿತು ನಟ ಧರ್ಮೇಂದ್ರ (Dharmendra) ಮಾಹಿತಿ ಹಂಚಿಕೊಂಡಿದ್ದಾರೆ. ಶಬಾನಾ ಅಜ್ಮಿ ಮತ್ತು ನಾನು ಚುಂಬನದ ದೃಶ್ಯದಲ್ಲಿ ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದೇವೆ ಎಂದು ಹಲವರು ಹೇಳುತ್ತಿದ್ದಾರೆ. ನಮ್ಮ ಫ್ಯಾನ್ಸ್ ಈ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಪ್ರೀತಿ ಜನರಿಗೆ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ ಧರ್ಮೇಂದ್ರ. ನಾನು ಕೊನೆಯ ಬಾರಿ ನಫೀಸಾ ಅಲಿಯೊಂದಿಗೆ ಲೈಫ್ ಇನ್ ಎ ಮೆಟ್ರೋದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಜನರು ಅದನ್ನು ಮೆಚ್ಚಿದ್ದರು. ಈಗ ಇದನ್ನು ಕೂಡ ಜನ ಮೆಚ್ಚಿಕೊಂಡಿರುವುದು ಅಚ್ಚರಿಯಾಗುತ್ತಿದೆ, ಎಂದಿದ್ದಾರೆ ಧರ್ಮೇಂದ್ರ.
ಮಗಳಿಗಿಂತ ಚಿಕ್ಕವಳ ಜೊತೆ ಅನಿಲ್ ಕಪೂರ್ ಲಿಪ್ಲಾಕ್! ಬಾಲಿವುಡ್ಡೋ, ಚರಂಡಿವುಡ್ಡೋ ಅಂತಿದ್ದಾರೆ ಟ್ರೋಲಿಗರು
ಅಂದಹಾಗೆ ಧರ್ಮೇಂದ್ರ ಅವರಿಗೆ ಈಗ 87 ವರ್ಷ ಹಾಗೂ ನಟಿ ಶಬನಾ ಅಜ್ಮಿ (Shabana Azmi) ಅವರಿಗೆ 72 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಇವರ ಕೆಮೆಸ್ಟ್ರಿಯನ್ನೂ (Chemistry) ಜನ ಮೆಚ್ಚಿಕೊಂಡಿದ್ದಾರೆ. ಈ ದೃಶ್ಯವನ್ನು ನಟಿಸುವಂತೆ ನಿರ್ದೇಶಕ ಕರಣ್ ಜೋಹರ್ ಹೇಳಿದಾಗ ತಮಗೆ ಹೇಗೆ ಅನ್ನಿಸಿತ್ತು ಎಂಬ ಬಗ್ಗೆ ಧರ್ಮೇಂದ್ರ ಬಹಿರಂಗಗೊಳಿಸಿದ್ದಾರೆ. 'ಕರಣ್ ನಮಗೆ ದೃಶ್ಯವನ್ನು ವಿವರಿಸಿದಾಗ, ನಾನು ಉತ್ಸುಕನಾಗಲಿಲ್ಲ. ಆದರೂ ಈ ದೃಶ್ಯದ ಅವಶ್ಯಕತೆಯೇ ಇದೆಯೇ ಎಂದು ನಾನು ಸ್ಟಡಿ ಮಾಡಿದೆ. ನಂತರ ಈ ದೃಶ್ಯವನ್ನು ಬಲವಂತದಿಂದ ಹಾಕಲಾಗಿಲ್ಲ ಎನ್ನುವ ಅರಿವಾಯಿತು. ಚಿತ್ರದ ಆ ಸೀನ್ಗೆ ಇದರ ಅಗತ್ಯವಿರುವುದನ್ನು ನಾನು ಅರ್ಥಮಾಡಿಕೊಂಡೆ. ನಾನು ಆ ದೃಶ್ಯವನ್ನು ಮಾಡುತ್ತೇನೆ ಎಂದು ಹೇಳಿದೆ' ಎಂದಿರುವ ನಟ, ಅಷ್ಟಕ್ಕೂ ಪ್ರಣಯಕ್ಕೆ ಯಾವುದೇ ವಯಸ್ಸು ಇಲ್ಲವಲ್ಲ ಎಂದು ನಗು ಬೀರಿದ್ದಾರೆ.
'ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ವಯಸ್ಸಿನ ಹೊರತಾಗಿಯೂ ಇಬ್ಬರು ವ್ಯಕ್ತಿಗಳು ಚುಂಬಿಸುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಿದ್ದರಿಂದ ಶಬಾನಾ ಮತ್ತು ನಾನು ಅದನ್ನು ಮಾಡುವಾಗ ಯಾವುದೇ ರೀತಿಯ ಎಡವಟ್ಟನ್ನು ಅನುಭವಿಸಲಿಲ್ಲ' ಎಂದಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಧರ್ಮೇಂದ್ರ, 'ನಾನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ನನಗೆ ಯಾವಾಗಲೂ ಅನಿಸುತ್ತದೆ. ಆದರೆ ಕರಣ್ ಅದ್ಭುತ ಚಿತ್ರ ಮಾಡಿದ್ದಾರೆ ಮತ್ತು ಅವರೊಬ್ಬ ಒಳ್ಳೆಯ ನಿರ್ದೇಶಕ. ಇದು ಅವರೊಂದಿಗಿನ ನನ್ನ ಮೊದಲ ಸಹಯೋಗವಾಗಿದೆ ಮತ್ತು ನಾನು ಅದನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದಿದ್ದಾರೆ. ಎಲ್ಲಾ ನಟರು ನಿಜವಾಗಿಯೂ ಚೆನ್ನಾಗಿ ನಟಿಸಿದ್ದಾರೆ. ರಣವೀರ್ ಅದ್ಭುತ ಮತ್ತು ಆಲಿಯಾ ಸಹಜ ನಟನೆ ಎಲ್ಲರಿಗೂ ಖುಷಿಕೊಟ್ಟಿದೆ. ಚಿತ್ರದಲ್ಲಿ ಶಬಾನಾ ಅವರ ನಟನೆ ಅದ್ಭುತವಾಗಿದೆ ಎಂದಿರುವ ನಟ, ಜನರು ಥಿಯೇಟರ್‌ಗಳಿಗೆ ಹೋಗಿ ಚಿತ್ರವನ್ನು ವೀಕ್ಷಿಸಿ ತಮ್ಮ ಪ್ರೀತಿಯನ್ನು ಧಾರೆಯೆರೆಯಬೇಕು ಎಂದಿದ್ದಾರೆ.
'ಬಿಗ್ ಬಾಸ್'ನಲ್ಲಿ ಲಿಪ್ಲಾಕ್- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್ ಹೇಳಿದ್ದೇನು?
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ ನಂತರ, ನಟ ಜಾನಿ ಗದ್ದಾರ್ ನಿರ್ದೇಶಕ ಶ್ರೀರಾಮ್ ರಾಘವನ್ (Shreeram Raghavan) ಅವರೊಂದಿಗೆ ಎಕ್ಕಿಸ್‌ಗಾಗಿ ಮತ್ತೆ ಸಹಯೋಗಿಸುತ್ತಿದ್ದಾರೆ, ಇದು ಹುತಾತ್ಮ ಸೈನಿಕನ ಜೀವನಚರಿತ್ರೆ, ಇದರಲ್ಲಿ ಅಗಸ್ತ್ಯ ನಂದಾ ಕೂಡ ಇದ್ದಾರೆ. "ಇದೊಂದು ಸುಂದರವಾದ ಚಿತ್ರ ಮತ್ತು ನಾನು ಪ್ರಸ್ತುತ ಅದರ ಚಿತ್ರೀಕರಣವನ್ನು ಆನಂದಿಸುತ್ತಿದ್ದೇನೆ. ನಾನು ಕ್ಯಾಮೆರಾವನ್ನು ಸರಳವಾಗಿ ಪ್ರೀತಿಸುತ್ತೇನೆ ಮತ್ತು ಯಾವಾಗಲೂ ಅದರ ಮುಂದೆ ಇರಲು ಇಷ್ಟಪಡುತ್ತೇನೆ. ನನ್ನ ಆರೋಗ್ಯ ನನಗೆ ಅನುಮತಿಸುವವರೆಗೂ ನಾನು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದಿದ್ದಾರೆ ಧರ್ಮೇಂದ್ರ.