'ಬಿಗ್ ಬಾಸ್'ನಲ್ಲಿ ಲಿಪ್‌ಲಾಕ್- ಅಂಗ ಪ್ರದರ್ಶನ: ಮುಸ್ಲಿಂ ರಾಷ್ಟ್ರಗಳ ಬಗ್ಗೆ ಸಲ್ಮಾನ್ ಹೇಳಿದ್ದೇನು?
ಬಿಗ್ಬಾಸ್ ಮನೆಯಲ್ಲಿ ಮತ್ತೆ ಅಶ್ಲೀಲ ಘಟನೆ ನಡೆದಿದ್ದು, ಈ ಬಾರಿ ನಟ ಸಲ್ಮಾನ್ ಗರಂ ಆದರು. ಅವರು ಹೇಳಿದ್ದೇನು?
‘ಬಿಗ್ ಬಾಸ್’ (Bigg Boss) ಮನೆ ಎಂದರೆ ಅದೊಂದು ಅಶ್ಲೀಲಗಳ ತಾಣ ಎಂದು ಇದಾಗಲೇ ಜಗಜ್ಜಾಹೀರವಾಗಿದೆ. ಬಹುತೇಕ ರಿಯಾಲಿಟಿ ಷೋಗಳಲ್ಲಿನ ಮಾತು-ಕತೆಗಳಂತೆ ಬಿಗ್ ಬಾಸ್ನಲ್ಲಿ ನಡೆಯುವುದು ಕೂಡ ಸ್ಕ್ರಿಪ್ಟೆಡ್ ಎಂದು ಜನರಿಗೆ ಅರಿವಾಗುತ್ತಲೇ ಈ ಷೋ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಈ ಅಶ್ಲೀಲವನ್ನು ಆನಂದಿಸುವುದಕ್ಕಾಗಿಯೇ ನೋಡುವವರು ಇರುವ ಕಾರಣ, ಬಿಗ್ಬಾಸ್ ಹಿಂದಿ ಓಟಿಟಿಯಲ್ಲಿಯೂ ಶುರುವಾಗಿದ್ದು, ಸೀಸನ್ 1ರ ಬಳಿಕ ಸೀಸನ್ 2 ಆರಂಭಗೊಂಡಿದೆ. ಇದರಲ್ಲಿನ ಸ್ಪರ್ಧಿಗಳು ಆಡುವ ಹುಚ್ಚಾಟಗಳು, ಅವರು ಧರಿಸುವ ಡ್ರೆಸ್ಸುಗಳು, ತಾವು ಮಾಡುತ್ತಿರುವುದನ್ನೆಲ್ಲಾ ಪ್ರೇಕ್ಷಕರು ವೀಕ್ಷಿಸುತ್ತಿದ್ದಾರೆ ಎಂದು ಮೈಮೇಲೆ ಪರಿವೇ ಇಲ್ಲದೇ ಆಡುವ ರೀತಿಗಳು ಒಂದು ವರ್ಗಕ್ಕಷ್ಟೇ ಖುಷಿ ಕೊಡುತ್ತಿದೆ. ಇದರಲ್ಲಿ ಸ್ಪರ್ಧಿಗಳು ಸಹಜ ಎನ್ನುವಂತೆ ತೋರಿಸುತ್ತಿದ್ದರೂ ಅವೆಲ್ಲವೂ ಪೂರ್ವ ನಿಯೋಜಿತ ಎನ್ನುವುದು ಅಷ್ಟೇ ಸತ್ಯ.
ಅಂಥದ್ದೇ ಒಂದು ಘಟನೆ ಹಿಂದಿ ಬಿಗ್ಬಾಸ್ ಓಟಿಟಿ ಸೀಸನ್ 2ನಲ್ಲಿ ನಡೆದಿದೆ. ಈ ಷೋ ಶುರುವಾಗಿ 2 ವಾರವಾಗಿದೆ. ಈ ಸಂದರ್ಭದಲ್ಲಿ ಅರ್ಧ ನಿಮಿಷಕ್ಕೂ ಅಧಿಕ ಕಾಲ ಆಕಾಂಕ್ಷಾ ಪುರಿ ಹಾಗೂ ಜದ್ ಹದೀದ್ ಅವರು ಲಿಪ್ ಲಾಕ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಟೀಕೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಈ ಶೋನಲ್ಲಿ ಸ್ಪರ್ಧಿಗಳಾದ ಜಡ್ ಹಡಿದ್ ಮತ್ತು ಆಕಾಂಕ್ಷಾ ಪುರಿ ಲಿಪ್‌ಲಾಕ್ ಮಾಡಿದ್ದರು. 30 ಸೆಕೆಂಡ್‌ಗಳ ಕಾಲ ನಡೆದ ಈ ಲಿಪ್‌ಲಾಕ್ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲಾಗಿತ್ತು. ಇದು ಭಾರಿ ಸದ್ದು ಮಾಡಿತ್ತು. ಎಲ್ಲರೂ ನೋಡುವಂತಹ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಈ ರೀತಿ ನಡೆದುಕೊಂಡಿದ್ದು ಬೇಸರ ಮೂಡಿಸಿತ್ತು. ಆದರೆ ಈಗ ಮತ್ತೊಮ್ಮೆ ಅದೇ ರೀತಿ ನಡೆದುಕೊಳ್ಳಲಾಗಿದೆ. ಅಂದಹಾಗೆ ಜಡ್ ಅವರು ದುಬೈ ಮೂಲದವರು.
Viral Video: ಸಂದರ್ಶನದ ನೇರಪ್ರಸಾರದಲ್ಲಿಯೇ ಆ್ಯಂಕರ್ ಎದ್ರು ಶರ್ಟ್ ಬಿಚ್ಚೋದಾ ಈ ನಟ?
ಇಷ್ಟೇ ಆದರೆ ಸಹಿಸಿಕೊಳ್ಳಬಹುದಿತ್ತೇನೋ. ಆದರೆ ಒಂದು ಹಂತದಲ್ಲಿ ಜಡ್ ತಮ್ಮ ಖಾಸಗಿ ಅಂಗವನ್ನು ಪ್ರದರ್ಶನ ಮಾಡಿದ್ದು, ಅದನ್ನು ಜನರಿಗೆ ಷೋನಲ್ಲಿ ತೋರಿಸಲಾಗಿದೆ. ಮತ್ತೋರ್ವ ಸ್ಪರ್ಧಿ ಬೇಬಿಕಾ ಜೊತೆಗೆ ಜಡ್ ಹಡಿದ್ ಜಗಳವಾಡುವಾಗ ತಮ್ಮ ಖಾಸಗಿ ಅಂಗವನ್ನು ಪ್ರದರ್ಶಿಸಿದ್ದಾರೆ! ಸಚ್ ದೇವ್ ಚಾಲೆಂಜ್ ಮಾಡಿದ ತಕ್ಷಣ ಇಬ್ಬರು ಕಿಸ್ ಮಾಡಲ್ಲ ಎನ್ನುವುದು ಎಲ್ಲರ ಊಹೆ ಆಗಿತ್ತು. ಆದ್ರೆ ಇಬ್ಬರೂ 30 ಸೆಕೆಂಡ್ ಗಳ ಕಾಲ್ ಲಿಪ್ ಲಾಕ್ ಮಾಡಿದ್ದಾರೆ. ಅಲ್ಲಿದ್ದ ಸ್ಪರ್ಧಿಗಳು 1,2,3 ಅಂತ 30ರವರೆಗೆ ಎಣಿಸಿದ್ದಾರೆ. ಇಬ್ಬರು ಕಿಸ್ (Kissing) ಮಾಡುವ ದೃಶ್ಯವನ್ನು ಇತರೆ ಸ್ಪರ್ಧಿಗಳು ಎಂಜಾಯ್ ಮಾಡಿದ್ದಾರೆ. ಆದ್ರೆ ಪೂಜಾ ಭಟ್ ಇರಿಸುಮುರುಸುಗೊಂಡರು. ಸಾಕು ನಿಲ್ಲಿಸಿ, ಸಾಕು ನಿಲ್ಲಿಸಿ ಎಂದು ಕೂಗಾಡಿದರು. ಕಿಸ್ಸಿಂಗ್ ಕುರಿತು ನಟ ಸಲ್ಮಾನ್ ಖಾನ್ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಹಂತದಲ್ಲಿ ತೀವ್ರವಾಗಿ ಕೋಪಗೊಂಡ ಅವರು, ಶೋನಿಂದಲೇ ಹೊರಗೆ ಹೋಗುವುದಾಗಿ ಹೇಳಿದರು. 'ಇದು ವಾರದ ಹೈಲೈಟ್ ಎಂದು ನೀವೆಲ್ಲರೂ ಭಾವಿಸುತ್ತೀರಿ. ಆದರೆ ಇದು ನಮ್ಮ ಕೌಟುಂಬಿಕ ಮೌಲ್ಯಗಳು ಮತ್ತು ಸಂಸ್ಕೃತಿಯ ಪ್ರಕಾರವೇ ಎಂದು ಸಲ್ಮಾನ್ ಪ್ರಶ್ನಿಸಿದರು.
ಕೂಡಲೇ ಜಡ್ ಕ್ಷಮೆ ಕೋರಿದರು. 'ಇದರ ಸಂಪೂರ್ಣ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳುತ್ತೇನೆ. ಇದು ನನ್ನದೇ ತಪ್ಪು ಎಂದು ನನಗೆ ಗೊತ್ತಿದೆ. ಇದು ಇನ್ನೆಂದೂ ರಿಪೀಟ್ ಆಗದಂತೆ ನಾನು ನೋಡಿಕೊಳ್ಳುವೆ. ನನ್ನನ್ನು ಕ್ಷಮಿಸಿಬಿಡಿ..' ಎಂದಾಗ ಇವೆಲ್ಲಾ ಅಗತ್ಯವಿಲ್ಲ ಎಂದು ಸಲ್ಮಾನ್ ಖಾನ್ (Salman Khan) ಕೋಪದಿಂದ ನುಡಿದರು. 'ಇದೇ ರೀತಿ ನೀವು ಅಬುಧಾಬಿಯಲ್ಲಿ ಮಾಡಿ, ಸೌದಿ ಅರೆಬಿಯಾದಲ್ಲಿ ಮಾಡಿ ನೋಡೋಣ ಆಗ ಏನಾಗುತ್ತದೆಯೆಂದು. ಭಾರತದಲ್ಲಿ ಮಾಡಿದರೆ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ ಎಂದು ಅರ್ಥನಾ ಎಂದು ಪ್ರಶ್ನಿಸಿದರು. ಭಾರತ ಸಂಪ್ರದಾಯಸ್ಥರ ದೇಶ, ನಿಮ್ಮ ಇಂಥ ಹುಚ್ಚಾಟಗಳನ್ನು ಸಹಿಸಲ್ಲ ಎಂದರು.
ನಟಿ ನತಾಶಾ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಬೆಡ್ರೂಂ ಫೋಟೋ ವೈರಲ್!
ಆದರೆ ಹಲವು ನೆಟ್ಟಿಗರು ಸಲ್ಮಾನ್ ಪರವಾಗಿ ನಿಂತಿಲ್ಲ. ಒಂದು ವೇಳೆ ಅಶ್ಲೀಲ ಎನ್ನುವ ಘಟನೆ ನಡೆದರೆ, ಅದನ್ನು ಎಡಿಟ್ ಮಾಡಿ ಜನರಿಗೆ ತೋರಿಸದೇ ಸಂಪೂರ್ಣ ದೃಶ್ಯವನ್ನು ತೋರಿಸಿ ನಾಟಕ ಮಾಡುವುದು ಏಕೆ ಎಂದು ಪ್ರಶ್ನೆ ಕೇಳಿದ್ದಾರೆ. ಎಲ್ಲವೂ ಪೂರ್ವ ನಿಯೋಜಿತ ಎನ್ನುವುದು ತಿಳಿದಿದೆ. ಹೀಗಿರುವಾಗ ಈ ರೀತಿಯ ನಾಟಕವೇಕೆ ಎಂದು ಸಲ್ಮಾನ್ ಖಾನ್ಗೇ ಹಲವರು ಪ್ರಶ್ನಿಸಿದರೆ, ಇನ್ನು ಕೆಲವರು ಸಲ್ಮಾನ್ ಖಾನ್ ಅವರಿಗೆ ಭಾರತದ ಮೇಲಿರುವ ಪ್ರೀತಿಯನ್ನು ಕೊಂಡಾಡಿದ್ದಾರೆ. ‘ ಟಿವಿಗೆ ಹೋಲಿಕೆ ಮಾಡಿದರೆ ಒಟಿಟಿಯಲ್ಲಿ ಬಿಗ್ ಬಾಸ್ ನೋಡುವವರ ಸಂಖ್ಯೆ ಕಡಿಮೆ. ಈ ಕಾರಣಕ್ಕೆ ಪ್ರೇಕ್ಷಕರನ್ನು ಸೆಳೆಯಲು ಈ ರೀತಿಯ ತಂತ್ರ ಮಾಡಲಾಗುತ್ತಿದೆ ಎಂದು ಇನ್ನು ಕೆಲವರು ಆರೋಪಿಸಿದ್ದಾರೆ.