ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿಗೆ ಧನುಷ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.  

ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಮತ್ತು ಪತ್ನಿ ಐಶ್ವರ್ಯಾ ಜೋಡಿ ಕಳೆದ 9 ತಿಂಗಳ ಹಿಂದೆ ವಿಚ್ಛೇದನ ವಿಚಾರಕ್ಕೆ ಸುದ್ದಿಯಾಗಿದ್ದರು. ತಮಿಳು ಸ್ಟಾರ್ ಜೋಡಿ ವಿಚ್ಛೇದನ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸುಮಾರು 18 ವರ್ಷಗಳ ದಾಂಪತ್ಯ ಜೀವನ ಕಡಿದುಕೊಳ್ಳುವುದಾಗಿ ಧನುಷ್ ಮತ್ತು ಐಶ್ವರ್ಯಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ಜೊತೆಗೆ ತಮ್ಮ ಖಾಸಗಿತನಕ್ಕೆ ಗೌರವ ನೀಡಿ ಎಂದು ಕೇಳಿಕೊಂಡಿದ್ದರು. ಸ್ಟಾರ್ ಜೋಡಿಯ ವಿಚ್ಛೇದನದ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇಬ್ಬರೂ ದೂರ ದೂರ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಆದರೀಗ 9 ತಿಂಗಳ ಬಳಿಕ ಧನುಷ್ ಮತ್ತು ಐಶ್ವರ್ಯಾ ಒಂದಾಗುತ್ತಿದ್ದಾರೆ, ವಿಚ್ಛೇದನ ನಿರ್ಧಾರ ಕೈ ಬಿಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಈ ಬಗ್ಗೆ ನಟ ಧನುಷ್ ತಂದೆ ಕಸ್ತೂರಿ ರಾಜಾ ಪ್ರತಿಕ್ರಿಯೆ ನೀಡಿದ್ದಾರೆ. ಆಂಗ್ಲ ವೆಬ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಕಸ್ತೂರಿ ರಾಜಾ, ಇಬ್ಬರ ನಡುವೆ ಒಪ್ಪಂದ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಮಕ್ಕಳ ವೈಯಕ್ತಿಕ ವಿಚಾರಗಳಿಂದ ದೂರ ಇರುವುದಾಗಿ ಹೇಳಿದ್ದಾರೆ. ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಬ್ಬರ ನಡುವೆ ಒಪ್ಪಂದ ಆಗಿ ವಿಚ್ಛೇದನ ನಿರ್ಧಾರ ಕೈ ಬಿಡುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

'ನಾನು ನನ್ನ ಹೆಂಡತಿ ಮಕ್ಕಳ ಬೆಂಬಲ ವಿಲ್ಲದೇ ಉತ್ತಮ ಜೀವನ ನಡೆಸುತ್ತಿದ್ದೇವೆ. ಸಂತೋಷವಾಗಿದ್ದೀವಿ. ಮಕ್ಕಳು ಸಂತೋಷವಾಗಿರಲಿ ಎನ್ನುವುದಷ್ಟೆ ನನ್ನ ನಿರೀಕ್ಷೆ. ಅವರು ಸಂತೋಷವಾಗಿರಲಿ ಎನ್ನವುದು ಅಷ್ಟೇ ನನ್ನ ಉದ್ದೇಶ' ಎಂದು ಹೇಳಿದ್ದಾರೆ. ತಂದೆಯ ಮಾತು ಧನುಷ್ ಮತ್ತು ಐಶ್ವರ್ಯಾ ನಡುವೆ ಎಲ್ಲವೂ ಸರಿಯಾಗಿದೆ, ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ವದಂತಿ ಅಷ್ಟೆ ಎನ್ನುವ ಅನುಮಾನ ಮೂಡಿಸುತ್ತಿದೆ. 

ವಿಚ್ಛೇದನದಿಂದ ಹಿಂದೆ ಸರಿದ ಧನುಷ್-ಐಶ್ವರ್ಯಾ ರಜನಿಕಾಂತ್? ದಾಂಪತ್ಯ ಮುಂದುವರೆಸಲು ನಿರ್ಧಾರ

ನಟ ಧನುಷ್ ಅವರ ಕೆಲಸದ ತೀವ್ರ ಒತ್ತಡದಿಂದ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ. ಧನುಷ್ ವರ್ಕೋಹಾಲಿಕ್ ಆಗಿದ್ದು ಕೆಲಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಇದರಿಂದ ಕುಟುಂಬದ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಐಶ್ವರ್ಯಾ ವಿಚ್ಛೇದನಕ್ಕೆ ಮುಂದಾಗಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಒಂದಾಗಿ ಜೀವನ ನಡೆಸಲು ನಿರ್ಧಾರಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೀಗ ಧನುಷ್ ತಂದೆಯ ಮಾತು ಅನುಮಾನ ಮೂಡಿಸಿದೆ. 

ಸೂಪರ್ ಸ್ಟಾರ್ ಧನುಷ್‌ ಅವರ 150 ಕೋಟಿ ಬೆಲೆಯ ಬಂಗಲೆ ಒಳಗೆ ಹೇಗಿದೆ ನೋಡಿ

ಧನುಷ್ ಮತ್ತು ಐಶ್ವರ್ಯಾ ಜೋಡಿ 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಯಾತ್ರ ಮತ್ತು ಲಿಂಗ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಸುಮಾರು 18 ವರ್ಷಗಳ ಸಂಸಾರ ನಡೆಸಿದ ಈ ಜೋಡಿ ಈ ವರ್ಷದ ಪ್ರಾರಂಭದಲ್ಲಿ ವಿಚ್ಛೇದನ ಪಡೆಯುತಿರುವುದಾಗಿ ಅನೌನ್ಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದ್ದು ನೆಚ್ಚಿನ ಜೋಡಿ ಖುಷಿಯಾಗಿ ಜೊತೆಯಲ್ಲಿ ಇರಲಿ ಎಂದು ಹಾರೈಸುತ್ತಿದ್ದಾರೆ.