Asianet Suvarna News Asianet Suvarna News

ಮುಸ್ಲಿಂ ವ್ಯಕ್ತಿ ಮದುವೆಯಾದ ದೆವೊಲೀನಾ ಸಖತ್ ಟ್ರೋಲ್; ಮಕ್ಕಳ ಧರ್ಮ ಪ್ರಶ್ನಿಸಿದವರಿಗೆ ನಟಿ ಖಡಕ್ ತಿರುಗೇಟು

ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ದೆವೊಲೀನಾ ಭಟ್ಟಾಚಾರ್ಜಿ ಇತ್ತೀಚಿಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟರು. ಜಿಮ್ ಟ್ರೈನರ್ ಶಹನವಾಜ್ ಶೇಖ್ ಮದುವೆಯಾದ ದೆವೊಲೀನಾ ಸಖತ್ ಟ್ರೋಲ್ ಆಗಿದ್ದಾರೆ. 

Devoleena Bhattacharjee pens special note for husband Shanawaz Shaikh amid backlash sgk
Author
First Published Dec 18, 2022, 4:39 PM IST

ಹಿಂದಿ ಕಿರುತೆರೆ ಲೋಕದ ಖ್ಯಾತ ನಟಿ ದೆವೊಲೀನಾ ಭಟ್ಟಾಚಾರ್ಜಿ ಇತ್ತೀಚಿಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟರು. ಜಿಮ್ ಟ್ರೈನರ್ ಶಹನವಾಜ್ ಶೇಖ್ ಜೊತೆ ದೆವೊಲೀನಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ದೆವೊಲೀನಾ ಮದುವೆಯಾದ ಬೆನ್ನಲ್ಲೇ ಟ್ರೋಲ್‌ಗೆ ಗುರಿಯಾದರು. ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ದೆವೊಲೀನಾ ವಿಡಿಯೋ ಶೇರ್ ಮಾಡಿ ಪತಿಯ ಬಗ್ಗೆ ಸ್ವೀಟ್ ನೋಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. 

'ನಾನು ಚೆನ್ನಾಗಿದ್ದೇನೆ ಅಥವಾ ಇಲ್ಲವಾ ಎಂದು ಯಾರೂ ಕೂಡ ತಲೆಕೆಡಿಸಿಕೊಳ್ಳದಿರುವಾಗ ನೀನು ನನ್ನ ಜೊತೆಗಿದ್ದಕ್ಕಾಗಿ ಧನ್ಯವಾದಗಳು ಶೋನು. ನಾನು ಬಯಸಿದ ರೀತಿಯಲ್ಲಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ನಿನ್ನ ಕಾಳಜಿ ಮತ್ತು ಪ್ರೀತಿಗಾಗಿ ಧನ್ಯವಾದಗಳು' ಎಂದು ಹೇಳುದ್ದಾರೆ. ಈ ಮೂಲಕ ತುಂಬಾ ಪ್ರೀತಿ ನೀಡುತ್ತಿರುವ ಪತಿಗೆ ಧನ್ಯವಾದ ಹೇಳುವ ಮೂಲಕ ಟ್ರೋಲಿಗೆ ಉತ್ತರ ನೀಡಿದ್ದಾರೆ. ನಟಿ ದೆವೊಲೀನಾ ಡೆಸಂಬರ್ 14ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬದವರು ಮತ್ತು ತೀರ ಹತ್ತಿರದವರು ಮಾತ್ರ ಭಾಗಿಯಾಗಿದ್ದರು. ದೆವೊಲೀನಾ ದಿಢೀರ್ ಮದುವೆ ಅಭಿಮಾನಿಗಳಲ್ಲಿ ಮೂಡಿಸಿತ್ತು. 

ಮದುವೆ ಫೋಟೋ ಶೇರ್ ಮಾಡುತ್ತಿದ್ದಂತೆ ಅನೇಕರು ಟ್ರೋಲ್ ಮಾಡಿದರು. ಮುಸ್ಲಿಂ ವ್ಯಕ್ತಿ ಮದುವೆಯಾದ ನಿಮ್ಮ ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ದೆವೊಲೀನಾ, 'ನನ್ನ ಮಕ್ಕಳು ಹಿಂದೂ ಅಥವಾ ಮುಸ್ಲಿಂ ಎಂದು ಕೇಳುವುದಕ್ಕೆ ನೀವು ಯಾರು?. ನಿಮಗೆ ನಿಜವಾಗಿಯೂ ಮಕ್ಕಳ ಬಗ್ಗೆ ಕಾಳಜಿ ಇದ್ದರೆ, ಅನೇಕ ಅನಾಥಾಶ್ರಮಗಳಿವೆ. ನೀವು ಅಲ್ಲಿಗೆ ಹೋಗಿ. ಮಗುವನ್ನು ದತ್ತು ಪಡೆಯಿರಿ ಬಳಿಕ ಹೆಸರು ಮತ್ತು ಧರ್ಮವನ್ನು ನಿರ್ಧರಿಸಿ. ನನ್ನ ಪತಿ, ನನ್ನ ಮಕ್ಕಳು, ನನ್ನ ಧರ್ಮ. ನೀವು ಯಾರು ಕೇಳೋಕೆ?' ಎಂದು ಹೇಳಿದರು. 

ಬಾಡಿ ಶೇಪ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟ ಬಿಗ್‌ಬಾಸ್ ಚೆಲುವೆ

ಈ ಬಗ್ಗೆ ಮಾತನಾಡಿರುವ ದೆವೋಲೀನಾ ಟ್ರೋಲ್‌ಗಳಿಗೆ ನಾನು ಗಂಬೂರವಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವುಗಳನ್ನು ದೂರ ಇಡಲು ಕಲಿತಿದ್ದೀನಿ. ಅವರ ಪ್ರಕಾರ ನಡೆಯಲು ಸಾಧ್ಯವಿಲ್ಲ. ನನ್ನ ಜೀವನ, ನನ್ನ ನಿರ್ಧಾರ. ಅತ್ಯಂತ ಪರಿಪೂರ್ಣ ಸಂಗಾತಿಯನ್ನು ಪಡೆದಿದ್ದಕ್ಕೆ ತುಂಬಾ ಖುಷಿ ಇದೆ. ನನಗೆ ಇವಾಗ ಸಮಯವಿಲ್ಲ ಎಲ್ಲದಕ್ಕೂ ಉತ್ತರ ನೀಡಲಿಕ್ಕೆ' ಎಂದು ಹೇಳಿದ್ದಾರೆ.    

ವಜ್ರ ಉದ್ಯಮಿಯ ಹತ್ಯೆ: ಪ್ರಸಿದ್ಧ ಕಿರುತೆರೆ ನಟಿ ಅರೆಸ್ಟ್!

ನಟಿ ದೆವೋಲೀನಾ  ಅನೇಕ ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರೀಯರಾಗಿದ್ದಾರೆ. ರಿಯಾಲಿಟಿ ಶೋ ಮತ್ತು ಧಾರಾವಾಹಿಗಳಲ್ಲಿ ನಟಿಸಿರುವ ದೆವೋಲೀನಾ ತನ್ನದೇ ಆದ ಅಭಿಮಾನಿ ಬಳಗಹೊಂದಿದ್ದಾರೆ. ಡಾನ್ಸ್ ಇಂಡಿಯಾ ಡಾನ್ಸ್-2, ಸಾಥ್ ನಿಭಾನಾ ಸಾಥಿಯಾ, ಬಿಗ್ ಬಾಸ್ 13, ಬಿಗ್ ಬಾಸ್ 14, ಬಿಗ್ ಬಾಸ್ 15 ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋ ಜೊತೆಗೆ ದೆವೋಲೀನಾ ವಿಬ್ ಸೀರಿಸ್ ನಲ್ಲೂ ಮಿಂಚಿದ್ದಾರೆ. ಮದುವೆ ಬಳಿಕ ಯಾವ ಧಾರಾವಾಹಿ ಮೂಲಕ ವಾಪಾಸ್ ಆಗ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
 


 

Follow Us:
Download App:
  • android
  • ios