Asianet Suvarna News Asianet Suvarna News

ನೆಲದ ಮೇಲೆ ನಿದ್ರೆ, 11 ದಿನ ಬರಿಗಾಲಲ್ಲಿ ನಡೆದು ಶಬರಿಮಲೆಗೆ ಹೋದ ಬಾಲಿವುಡ್ ನಟ

  • ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಶಬರಿಮಲೆ ಭೇಟಿ
  • ಪ್ರಸಿದ್ಧ ಸನ್ನಿಧಾನಕ್ಕೆ ಭೇಟಿ ಕೊಟ್ಟು ಅಯ್ಯಪ್ಪ ದೇವರ ದರ್ಶನ ಪಡೆದ ನಟ
Devgn slept on floor walked barefoot for 11 days before visiting Sabarimala temple dpl
Author
Bangalore, First Published Jan 13, 2022, 3:55 PM IST

ಇತ್ತೀಚೆಗೆ ಬಾಲಿವುಡ್(Bollywood) ನಟ ಅಜಯ್ ದೇವಗನ್(Ajay Devgan) ಕಾವಿ ಬಟ್ಟೆಯಲ್ಲಿ ಮಾಲಾಧಾರಿಯಾಗಿ ಕಾಣಿಸಿಕೊಂಡಿದ್ದರು. ಬಹಳಷ್ಟು ಜನರು ನಟನ ಸಿನಿಮಾ ಲುಕ್ ಎಂದೇ ಭಾವಿಸಿದ್ದರು. ಆದರೆ ನಟ ನಿಜವಾಗಿಯೂ ಪ್ರಸಿದ್ಧ ತೀರ್ಥಯಾತ್ರಾ ಸ್ಥಳ ಶಬರಿಮೆಲೆಗೆ (Shabarimala)ಭೇಟಿ ಕೊಟ್ಟು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಬಂದಿದ್ದಾರೆ. ಶಬರಿ ಮಲೆಯತ್ತ ಈಗಾಗಲೇ ಯಾತ್ರಿಗಳ ದಂಡು ಸಾಗುತ್ತಿದ್ದು ಮಕರ ಸಂಕ್ರಮಣದಂದು ಜನಸಂದಣಿ ಹೆಚ್ಚಿರುತ್ತದೆ. ಬಹಳಷ್ಟು ಜನರು ಅದಕ್ಕೂ ಮೊದಲೇ ದೇವರ ದರ್ಶನ ಮಾಡಿ ಬರುತ್ತಾರೆ. ಇದೀಗ ನಟ ಅಜಯ್ ದೇವಗನ್ ಕೂಡಾ ಹೋಗಿ ಬಂದಿದ್ದಾರೆ.

ಕೇರಳದ(Kerala) ಶಬರಿಮಲೆ ದೇವಸ್ಥಾನಕ್ಕೆ ಅಜಯ್ ದೇವಗನ್ ಹೋಗಿರುವುದು ಈಗ ಸುದ್ದಿಯಾಗಿದೆ. ತೀರ್ಥಯಾತ್ರೆಗೆ ಅಲ್ಲಿಗೆ ಹೋಗಲು ಅನುಸರಿಸಬೇಕಾದ ಎಲ್ಲವನ್ನೂ ನಟ ದೇವಗನ್ ದೃಢವಾಗಿ ಪಾಲಿಸುತ್ತಿದ್ದರು ಎನ್ನಲಾಗಿದೆ. ಅವರು ತಮ್ಮ ವಲಯದಲ್ಲಿ ಅನೇಕರೊಂದಿಗೆ ಅದರ ಬಗ್ಗೆ ಮಾತನಾಡಲಿಲ್ಲ. ಈಗ ಅಜಯ್ ದೇವಗನ್ ಎಲ್ಲ ವಿಧಿ ವಿಧಾನಗಳನ್ನು ಅನುಸರಿಸಿದ್ದಾರೆ.

ಡಿಫರೆಂಟ್ ಲುಕ್‌ನಲ್ಲಿ ಅಜಯ್‌, ನಟನ ಆವತಾರ ನೋಡಿ ಫ್ಯಾನ್ಸ್‌ ಶಾಕ್‌!

ನಟ 11 ದಿನಗಳ ಕಾಲ ನೆಲದ ಮೇಲೆ ಮಲಗಿ, ಕಪ್ಪು ಬಟ್ಟೆ ಧರಿಸಿ, ದಿನಕ್ಕೆರಡು ಬಾರಿ ಅಯ್ಯಪ್ಪನ ಪೂಜೆ, ಬೆಳ್ಳುಳ್ಳಿ/ಈರುಳ್ಳಿ ಇಲ್ಲದೆ ಕೇವಲ ಸಸ್ಯಾಹಾರ ಸೇವಿಸಿ, ಹೋದಲ್ಲೆಲ್ಲಾ ಬರಿಗಾಲಿನಲ್ಲಿ ನಡೆದಿದ್ದಾರೆ. ಸುಗಂಧ ದ್ರವ್ಯ ಬಳಸದೇ ಮಲಗಿದ್ದರು. ಯಾವುದೇ ರೀತಿಯ ಮದ್ಯಪಾನವನ್ನೂ ಮಾಡಿಲ್ಲ.

Devgn slept on floor walked barefoot for 11 days before visiting Sabarimala temple dpl

ನಟನ ಜೊತೆಯಲ್ಲಿ ಅವರ ಸೋದರಸಂಬಂಧಿಗಳಾದ ವಿಕ್ರಾಂತ್ ಮತ್ತು ಧರ್ಮೇಂದ್ರ ಅವರು ಅಜಯ್ ಅವರಂತೆಯೇ ಅದೇ ಆಚರಣೆಗಳನ್ನು ಅನುಸರಿಸಿದ್ದರು. ನಟ ಈಗ ಅಯ್ಯಪ್ಪ ದರ್ಶನ ಮುಗಿಸಿ ಮನೆಗೆ ಮರಳಿದ್ದಾರೆ.

ತಿರುವಾಭರಣಂ (ಶಬರಿಮಲೆಯಲ್ಲಿ ಪ್ರಧಾನ ದೇವತೆಯ ಪವಿತ್ರ ಆಭರಣ) ಹೊತ್ತ ಸಾಂಪ್ರದಾಯಿಕ ಮೆರವಣಿಗೆಯು ಬುಧವಾರ ಮಧ್ಯಾಹ್ನ 1 ಗಂಟೆಗೆ ಪಂದಳಂನಿಂದ ಸನ್ನಿಧಾನಕ್ಕೆ ಹೊರಟಿದೆ. ತಿರುವಾಭರಣಂ ಇರುವ ಮೂರು ಪೆಟ್ಟಿಗೆಗಳನ್ನು ಕುಲತಿನಾಲ್ ಗಂಗಾಧರನ್ ಪಿಳ್ಳೈ ನೇತೃತ್ವದ 25 ಸದಸ್ಯರ ತಂಡವು ತಲೆಯ ಮೇಲೆ ಹೊತ್ತೊಯ್ಯುತ್ತದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಅಧಿಕಾರಿಗಳು ಮತ್ತು ಪೊಲೀಸರ ತಂಡವು ಮೆರವಣಿಗೆಯ ಜೊತೆಗಿರುತ್ತದೆ. ಪಂದಳಂ ಅರಮನೆಯನ್ನು ಪ್ರತಿನಿಧಿಸುವ ಶಂಕರ್ ವರ್ಮ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ.

ಮುಂಜಾನೆ 4 ಗಂಟೆಗೆ ಸ್ರಾಂಬಿಕಲ್ ಅರಮನೆಯ ಸ್ಟ್ರಾಂಗ್ ರೂಂನಿಂದ ಪಕ್ಕದ ವಲಿಯಕೋಯಿಕಲ್ ಶಾಸ್ತಾ ದೇವಸ್ಥಾನಕ್ಕೆ ಪವಿತ್ರ ಆಭರಣಗಳನ್ನು ಅಧಿಕಾರಿಗಳು ಸ್ಥಳಾಂತರಿಸುವುದರೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಯಿತು. ನಂತರ ಅದನ್ನು ಮಧ್ಯಾಹ್ನ 1 ಗಂಟೆಗೆ ಹೊರತೆಗೆಯಲಾಯಿತು. ಮಧ್ಯಾಹ್ನ ಆರಂಭವಾದ ಮೆರವಣಿಗೆ ಬುಧವಾರ ರಾತ್ರಿ ಐರೂರಿನ ಪುತಿಯಕಾವು ದೇವಿ ದೇವಸ್ಥಾನದಲ್ಲಿ ನಿಲ್ಲಿಸಿದ ನಂತರ ಗುರುವಾರ ಲಾಹಾ ತಲುಪಲಿದೆ. 

 
 
 
 
 
 
 
 
 
 
 
 
 
 
 

A post shared by Ajay Devgn (@ajaydevgn)

ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರಧಾನ ದೇವರನ್ನು ಜನವರಿ 14 ರಂದು ಮಕರವಿಳಕ್ಕು ದಿನದಂದು ದೀಪಾರಾಧನೆ ಆಚರಣೆಗೆ ಮೊದಲು ಪವಿತ್ರ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಮೆರವಣಿಗೆ ಮಾರ್ಗದಲ್ಲಿ ಜನಸಂದಣಿಯನ್ನು ತಪ್ಪಿಸಲು ಪತ್ತನಂತಿಟ್ಟ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಯ್ಯಪ್ಪ ದೇವಸ್ಥಾನ ಮತ್ತು ಮಲಿಕಪ್ಪುರಂ ದೇವಿ ದೇವಸ್ಥಾನದಲ್ಲಿ ಕಲಭಮ್ ಮತ್ತು ಗುರುತುಯಿ ಆಚರಣೆಗಳ ನಂತರ ಅರಮನೆಯ ಪ್ರತಿನಿಧಿಯು ಆಭರಣಗಳೊಂದಿಗೆ ಶಬರಿಮಲೆಯಿಂದ ಹಿಂತಿರುಗಲು ನಿರ್ಧರಿಸಲಾಗಿದೆ.

Follow Us:
Download App:
  • android
  • ios