ಸಿನಿಮಾ ಈಸ್‌ ಎಂಟರ್ಟೇನ್ಮೆಂಟ್ ಎಂಟರ್ಟೇನ್ಮೆಂಟ್ ಎಂಟರ್ಟೇನ್ಮೆಂಟ್. ಆದರೆ ಅದನ್ನು ಮತ್ತೊಂದು ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡರೆ? ಹೌದು ಸಿನಿಮಾದಲ್ಲಿ ಪ್ರಸಾರವಾಗುವ ಪಾಸಿಟಿವ್ ಮೆಸೇಜ್‌ ಅದೆಷ್ಟೊ ಮಂದಿಗೆ ಸ್ಫೂರ್ತಿಯಾಗುತ್ತದೆ ಆದರೆ  ಇನ್ನು ಕೆಲವರಿಗೆ ಅದು ದ್ವೇಷ ಸಾಧಿಸಲು ಸಹಾಯ ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಾರೆ....

ತಮನ್ನಾ ಜೊತೆ ಡೇಟಿಂಗ್‌ ಮಾಡ್ತಾ ಇದ್ರಾ ವಿರಾಟ್‌ ಕೊಹ್ಲಿ?

ಹೀಗೆ ಸಿನಿಮಾ ನೋಡಿ ಅದರಿಂದ ಪ್ರೇರಣೆ ಪಡೆದು ಯುವತಿಯರಿಗೆ ಸುಳ್ಳು ಹೇಳುತ್ತ ವಂಚಿಸುತ್ತದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಅರ್ಜುನ್ ರೆಡ್ಡಿ ಸಿನಿಮಾವನ್ನು ಹಿಂದಿಯಲ್ಲಿ ಕಬೀರ್‌ ಸಿಂಗ್‌ ಆಗಿ ರಿಮೇಕ್‌ ಮಾಡಲಾಗಿತ್ತು ಅದನ್ನ ವೀಕ್ಷಿಸಿ ಸ್ಫೂರ್ತಿಗೊಂದು ವೈದ್ಯೆನೆಂದು ಸುಳ್ಳು ಹೇಳಿ ವಂಚಿಸಿದ್ದಾನೆ ಎಂದು ಆರೋಪ ಕೇಳಿ ಬಂದಿದೆ.

ಡೇಟಿಂಗ್‌ ಆಪ್‌ನಲ್ಲಿ ನಕಲಿ ಖಾತೆ:

ದೆಹಲಿಯ  ಆನಂದ್ ಕುಮಾರ್ ಎಂಬಾತ ಕಬೀರ್‌ ಸಿಂಗ್ ಚಿತ್ರವನ್ನು ಪ್ರೇರಣೆಯಾಗಿಸಿಕೊಂಡು ಟಿಂಡರ್‌ ಎಂಬ ಡೇಟಿಂಗ್ ಆಪ್‌ನಲ್ಲಿ ಡಾ. ರೋಹಿತ್ ಗುಜ್ರಾಲ್‌, ಮೂಳೆ ತಜ್ಞ ಎಂದು ನಕಲಿ ಖಾತೆ ತೆರೆದಿದ್ದಾನೆ.  ಈ ಖಾತೆಯಿಂದ ಆಸಾಮಿ ವೈದ್ಯೆಯೊಬ್ಬಳಿಗೆ ಮೆಸೇಜ್ ಮಾಡಿ ಪರಿಚಯಿಸಿಕೊಂಡಿದ್ದಾನೆ. ಇಬ್ಬರು ಹೆಚ್ಚು ದಿನಗಳ ಕಾಲ ಸಂಪರ್ಕದಲ್ಲಿದ್ದು ಆಕೆಯಿಂದ ಹಣ ವ್ಯವಹಾರ ಮಾಡಿದ್ದಾರೆ.

ಸಾಂಗತ್ಯದಲ್ಲಿ ಈ 9 ತಪ್ಪುಗಳು ಮಾಡಬೇಡಿ; ಪ್ರೀತಿಯನ್ನು ಪ್ರೂವ್‌ ಮಾಡೋದು ತಪ್ಪಲ್ವಾ?

ಮಾತನಾಡುತ್ತಲೇ ಕಷ್ಟಗಳನ್ನು ಹೇಳಿಕೊಳ್ಳುತ್ತ ಆಕೆಯಿಂದ ಸುಮಾರು 30 ಸಾವಿರ ಹಣ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣವೇ ಆಕೆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿ ಇನ್ನು ಹೆಚ್ಚು ಹಣ ಬೇಡಿಕೆ ಇಟ್ಟಿದ್ದಾನೆ. ಘಟನೆ ಗಂಭೀರವಾಗುತ್ತಿದ್ದ ಕಾರಣ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಚಾರಣೆ  ನಡೆಸಿದ ಪೊಲೀಸರು ಈತನ ಅಸಲಿ ಮುಖ ಬಹಿರಂಗ ಮಾಡಿದ್ದಾರೆ. ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸ ಮಾಡುತ್ತಿದ್ದ ವೈದ್ಯನೆಂದು ಹೇಳಿ ನಕಲಿ ಖಾತೆ ಮಾಡಿ ಅನೇಕ ಹೆಣ್ಣು ಮಕ್ಕಳಿಗೆ ವಂಚಿಸಿದ್ದಾನೆ. ಜೊತೆಗೆ ಈತ ಸಿನಿಮಾ ಮಾಡಬೇಕೆಂದು ಆಸಕ್ತಿಯುಳ್ಳ ಯುವತಿಯರು ಹಾಗೂ ಮಾಡಲ್‌ಗಳ ಸಂಪರ್ಕವೂ ಹೊಂದಿದ್ದು ಅವರಲ್ಲಿ ಕೆಲವರಿಗೆ ವಂಚಿಸಿದ್ದಾನೆ ಎಂದು ತಿಳಿಸಿದ್ದಾರೆ