ದೀಪಿಕಾ-ರಣವೀರ್ ಮದ್ವೆಯಲ್ಲಿನ ಆ 12 ರುಚಿ: ಬಾಲಿವುಡ್ ವಿವಾಹದ ಕುತೂಹಲದ ಅಂಶ ಬಹಿರಂಗ
ತಮ್ಮ ಮದುವೆಯಲ್ಲಿ ಮಾಡಲಾದ 12 ಬಗೆಯ ಅಡುಗೆಯ ಟೇಸ್ಟ್ ನೋಡಿದ ಮೇಲೆಯೇ ದೀಪಿಕಾ ಪಡುಕೋಣೆ ಅದನ್ನು ಫೈನಲೈಸ್ ಮಾಡಿರುವ ಕುತೂಹಲದ ಅಂಶವೀಗ ಬೆಳಕಿಗೆ ಬಂದಿದೆ.
ಬಾಲಿವುಡ್ (Bollywood) ಸೇರಿದಂತೆ ಸಿನಿಮಾದವರ ಮದುವೆಗಳು ಯಾವಾಗಲೂ ನೆಟಿಜನ್‌ಗಳಲ್ಲಿ ಹಾಟ್ ಟಾಪಿಕ್ ಆಗಿರುತ್ತವೆ. ಮದುವೆಯ ದಿನ ಘೋಷಣೆಯಾಗುವುದರಿಂದ ಹಿಡಿದು ಮದುವೆಯವರೆಗೆ ಎಲ್ಲವನ್ನೂ ತಿಳಿದುಕೊಳ್ಳುವ ಉತ್ಸಾಹದಲ್ಲಿರುತ್ತಾರೆ ಫ್ಯಾನ್ಸ್. ಇದೀಗ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಮದುವೆಯ ಬಗ್ಗೆ ಸುದ್ದಿ ಹರಡಿದೆ. ಅಂದಹಾಗೆ ಈ ಜೋಡಿ 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿ ಬೆಂಗಳೂರು ಮತ್ತು ಮುಂಬಯಿಯಲ್ಲಿ ಅದ್ಧೂರಿ ವೆಡ್ಡಿಂಗ್ ರಿಸೆಪ್ಷನ್ ಆಯೋಜಿಸಿತ್ತು. ಮದುವೆಯ ವೇಳೆ ಕೇವಲ 200 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಈ ಮದುವೆಯ ವಿಶೇಷವೆಂದರೆ, ದೀಪಿಕಾ ಅವರು ತಮ್ಮ ಮದುವೆಯ ಆಹ್ವಾನ ಪತ್ರಿಕೆಯಲ್ಲೇ ಮಾಡಿಕೊಂಡಿದ್ದ ಮನವಿ. ಅದೇನೆಂದರೆ ದೀಪಿಕಾ ಸಂದರ್ಶನದಲ್ಲಿ ಹೇಳಿಕೊಂಡ ಹಾಗೆ ಅವರು ಖಿನ್ನತೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಸಂದರ್ಭದಲ್ಲಿ ಅದರಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರಂತೆ. ಹಾಗಾಗಿಯೇ, 'ಲಿವ್ ಲವ್ ಲಾಫ್' ಎಂಬ ಸಂಸ್ಥೆಯನ್ನು ದೀಪಿಕಾ ಶುರು ಮಾಡಿದ್ದರು. ಆ ಸಂಸ್ಥೆಯ ಮೂಲಕ ಮನೋರೋಗಿಗಳಿಗೆ ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಕೂಡ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ, ಮದುವೆಗೆ ಉಡುಗೊರೆ ರೂಪದಲ್ಲಿ ಆ ಸಂಸ್ಥೆಗೆ ದಾನ ನೀಡಿದರೆ ಹಲವು ಮಾನಸಿಕ ರೋಗಿಗಳಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ತಮ್ಮ ಮದುವೆಯ ಆಹ್ವಾನ ಪತ್ರಿಕೆಯಲ್ಲೇ ಈ ಬಗ್ಗೆ ಅತಿಥಿಗಳ ಬಳಿ ಮನವಿ ಮಾಡಿಕೊಂಡಿದ್ದರು.
2017ರಲ್ಲಿ ನಟಿ ಅನುಷ್ಕಾ ಶರ್ಮ (Anushka Sharma) ತಮ್ಮ ಮದುವೆಗೆ ಧರಿಸಿದ್ದ ಹಾಗೇ ದೀಪಿಕಾ ಕೂಡ ಸಭ್ಯಸಾಚಿ ಡಿಸೈನ್ನ ಡ್ರೆಸ್ ಧರಿಸಲಿದ್ದರು. ಸಂಪೂರ್ಣ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ವಿವಾಹದ ನಂತರ ವಿಲ್ಲಾದಲ್ಲಿ ಭವ್ಯವಾದ ಊಟ ಅರೇಂಜ್ ಮಾಡಲಾಗಿತ್ತು. ಇದರಲ್ಲಿ ದಕ್ಷಿಣ ಭಾರತದ ಆಹಾರಗಳಾದ ಅನ್ನ ಮತ್ತು ದೋಸೆ ಸೇರಿದಂತೆ ಹಲವಾರು ಖಾದ್ಯಗಳು ಇದ್ದವು. ಕೆಲವು ಅದ್ಭುತವಾದ ಸಿಹಿತಿಂಡಿಗಳೊಂದಿಗೆ ಪರಿಪೂರ್ಣ ವಿವಾಹದ ಕೇಕ್ ಎಲ್ಲರ ಗಮನ ಸೆಳೆದಿತ್ತು. ಅದನ್ನು ತಯಾರಿಸಲು ಸ್ವಿಟ್ಜರ್ಲೆಂಡ್‌ನಿಂದ ವಿಶೇಷ ಬಾಣಸಿಗರನ್ನು ಇಟಲಿಗೆ ಕರೆ ತರಲಾಗಿತ್ತು.
ರಣವೀರ್ ಸಿಂಗ್ ದೀಪಿಕಾರನ್ನು ಈ ಪರಿ ಪ್ರೀತಿಸ್ತಾರಾ? ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಫಿದಾ
ಇದೀಗ ವಿಶೇಷ ವಿಷಯವೊಂದು ಹೊರಬಂದಿದ್ದು, ಅದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ, ಫ್ಯಾಷನ್ ಡಿಸೈನರ್ ದೀಪ್‌ವೀರ್ ಅವರು ಬಹಿರಂಗಪಡಿಸಿದ್ದಾರೆ. ಅದದೇನೆಂದರೆ, ಮದುವೆಯ ಊಟವನ್ನು ನಿರ್ಧರಿಸುವ ಮೊದಲು ದೀಪಿಕಾ ಹಲವಾರು ಆಹಾರದ ರುಚಿಗಳನ್ನು ಅನುಭವಿಸಿದ್ದಾರಂತೆ. ಈ ಬಗ್ಗೆ ಖುದ್ದು ರಣಬೀರ್ ಸಿಂಗ್ (Ranbeer Singh) ಹೇಳಿದ್ದಾರೆ ಎಂದಿದ್ದರು. ನಿಖರವಾಗಿ ಹೇಳಬೇಕು ಎಂದರೆ 12 ಬಗೆಯ ತಿನಿಸುಗಳ ಟೇಸ್ಟ್ ನೋಡಿದ್ದಾರಂತೆ. ತಾವು ಟೇಸ್ಟ್ ಮಾಡಿದ ಬಳಿಕ ತಮ್ಮ ಊಟದ ಮೆನು ಅಂತಿಮಗೊಳಿಸಿದ್ದಾರೆ ಎನ್ನುವುದು.
ಹೌದು. ಸಾಮಾನ್ಯವಾಗಿ ಮದುವೆ ಎಷ್ಟೇ ವಿಜೃಂಭಣೆಯಿಂದ ನಡೆದರೂ ಎಲ್ಲರ ಗಮನ ಇರುವುದು ಊಟದ ಮೇಲೆ. ಮದುವೆ ಗ್ರ್ಯಾಂಡ್ ಆಗಿ ಊಟ ಸರಿಯಾಗಿ ಇರಲಿಲ್ಲ ಎಂದರೆ ಮದುವೆ ಚೆನ್ನಾಗಿಲ್ಲ ಎನ್ನುವವರೇ ಎಲ್ಲ, ಮದುವೆ ಸಿಂಪಲ್ ಆಗಿ ಊಟ ಭರ್ಜರಿಯಾದರೆ ಮದುವೆಯನ್ನು ಎಲ್ಲರೂ ಹೊಗಳುವವರೇ. ಇದೇ ಕಾರಣಕ್ಕೆ ದೀಪಿಕಾ ತಮ್ಮ ಮದುವೆಯ ಊಟದಲ್ಲಿ ಯಾವುದೇ ಕುಂದು ಬರಬಾರದು ಎನ್ನುವ ಕಾರಣಕ್ಕೆ ಎಲ್ಲವನ್ನೂ ತಾವೇ ಟೇಸ್ಟ್ ಮಾಡಿ ನೋಡಿದ್ದರಂತೆ. ಅಷ್ಟಕ್ಕೂ ಸೆಲೆಬ್ರಿಟಿಗಳ (Celebrity) ಮದುವೆಯಲ್ಲಿ ಟೇಸ್ಟಿಂಗ್ ಮಾಡುವ ದೊಡ್ಡ ವರ್ಗವೇ ಇರುತ್ತದೆ. ವಿಶ್ವದ ಅತ್ಯಂತ ಪ್ರಸಿದ್ಧ ಬಾಣಸಿಗರನ್ನು ಕರೆಸಿಕೊಳ್ಳುವ ತಾಕತ್ತೂ ಇರುತ್ತದೆ. ಆದರೆ ದೀಪಿಕಾ ಅಡುಗೆಯ ಟೇಸ್ಟ್ ತಾವೇ ಮಾಡಿ ನೋಡಿರುವುದಾಗಿ ಈಗ ಬಹಿರಂಗಗೊಂಡಿದೆ.
Padmavath: 400 ಕೆ.ಜಿ ಚಿನ್ನದ ಲೆಹಂಗಾ, 20 ಕೆ.ಜಿ ಆಭರಣ- ದೀಪಿಕಾರ ಒಂದೇ ಹಾಡಿಗೆ 12 ಕೋಟಿ ಖರ್ಚು!