ರಣವೀರ್ ಸಿಂಗ್ ದೀಪಿಕಾರನ್ನು ಈ ಪರಿ ಪ್ರೀತಿಸ್ತಾರಾ? ವೈರಲ್ ವಿಡಿಯೋ ನೋಡಿ ಫ್ಯಾನ್ಸ್ ಫಿದಾ
ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ಅವರ ಮಧುರ ದಾಂಪತ್ಯಕ್ಕೆ ಸಾಕ್ಷಿಯಾದ ಹಳೆಯ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.
ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು ಎಂದು ಎನಿಸಿಕೊಂಡಿರುವುದು ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಅವರ ಜೋಡಿ. 2018ರ ನವೆಂಬರ್ 14ರಂದು ಮದುವೆಯಾಗಿರುವ ಈ ಜೋಡಿ ಕ್ಯೂಟ್ ಕಪಲ್ ಎಂದೇ ಕರೆಸಿಕೊಳ್ಳುತ್ತಿದೆ. ಪರಸ್ಪರ ಡೇಟಿಂಗ್ ನಡೆಸುತ್ತಿದ್ದರೂ ಇಬ್ಬರೂ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರು ಹಾಗೂ ಸಾರ್ವಜನಿಕಗೊಳಿಸಿರಲಿಲ್ಲ. ಆದರೆ ಸೆಲೆಬ್ರಿಟಿಗಳ ಡೇಟಿಂಗ್ ಗೌಪ್ಯವಾಗಿರಲು ಸಾಧ್ಯವಿಲ್ಲ. ಅಂತೆಯೇ ಇದು ಬಹಿರಂಗಗೊಳ್ಳುತ್ತಿದ್ದಂತೆಯೇ, 2014 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಇದಾಗಲೇ ಹಲವಾರು ಬಾರಿ ರಣವೀರ್ ಅವರು ದೀಪಿಕಾ ಅವರನ್ನು ಹಾಡಿ ಕೊಂಡಾಡಿದ್ದು ಇದೆ. ನಾನು ಉತ್ತಮ ಮನುಷ್ಯನನ್ನಾಗಿ ರೂಪಿಸಿಕೊಳ್ಳುವಲ್ಲಿ ದೀಪಿಕಾ ಸಾಕಷ್ಟು ಸಹಾಯ ಮಾಡಿದ್ದಾಳೆ. ನನ್ನ ಜೀವನದಲ್ಲಿ ಆಕೆ ಬಂದಿರುವುದು ಅದೃಷ್ಟ ಎಂದಿದ್ದರು. ಅಂದಹಾಗೆ, ಸಂಜಯ್ ಲೀಲಾ ಬನ್ಸಾಲಿಯವರು ನಿರ್ದೇಶಿಸಿದ ಗೋಲಿಯೋನ್ ಕಿ ರಾಸ್‌ಲೀಲಾ ರಾಮ್-ಲೀಲಾ ಚಿತ್ರವು ರಣವೀರ್ (Ranveer Singh) ಮತ್ತು ದೀಪಿಕಾ ಅವರ ಮೊದಲ ಆನ್‌ಸ್ಕ್ರೀನ್ ಸಹಯೋಗಕ್ಕೆ ಕಾರಣವಾಯಿತು.
ತದನಂತರ ಇವರಿಬ್ಬರೂ ಡೇಟಿಂಗ್ ಮಾಡಿದರು. ಚಿತ್ರದಲ್ಲಿ ದೀಪಿಕಾ ಹಾಗೂ ರಣ್‌ವೀರ್ ರಾಮ್ ಹಾಗೂ ಲೀಲಾ ಪಾತ್ರದಲ್ಲಿ ಮಿಂಚಿದರು. ಗೋಲಿಯೋನ್ ಕಿ ರಾಸ್‌ಲೀಲಾ ಚಿತ್ರದ ನಂತರ ದೀಪಿಕಾ ಹಾಗೂ ರಣ್‌ವೀರ್ 2015 ರ ಚಲನಚಿತ್ರ ಬಾಜಿರಾವ್ ಮಸ್ತಾನಿಯಲ್ಲಿ ಕೂಡ ತೆರೆ ಹಂಚಿಕೊಂಡರು. ಇದರಲ್ಲಿ ಪ್ರಿಯಾಂಕಾ ಕೂಡ ಬಣ್ಣಹಚ್ಚಿದ್ದಾರೆ. ನಂತರ ದೀಪಿಕಾ ಶಾಹಿದ್ ಕಪೂರ್‌ರೊಂದಿಗೆ ಪದ್ಮಾವತ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಪ್ರೀತಿಗೆ ಬಿದ್ದ ಜೋಡಿ ಇಂದಿಗೂ ಅದೇ ಪ್ರೀತಿಯನ್ನು ಉಳಿಸಿಕೊಂಡಿದೆ.
ಇತ್ತೀಚೆಗೆ ಇವರಿಬ್ಬರ ನಡುವೆ ಬಿರುಕು ಬಿಟ್ಟಿದೆ ಎಂಬ ಗಾಳಿಸುದ್ದಿಯೂ ಹರಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ರಣವೀರ್ ಅವರು, ಪತ್ನಿ ದೀಪಿಕಾ ಪಡುಕೋಣೆ ನನ್ನ ರಾಣಿ ಎಂದಿದ್ದರು. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯ (Rocky Aur Rani Kii Prem Kahaani) ಚಿತ್ರದ ಪ್ರಮೋಷನ್ ಸಮಯದಲ್ಲಿ ರಣವೀರ್ ಅವರ ಫೋಟೋವನ್ನು ತಮ್ಮ ಬೆನ್ನ ಹಿಂದೆ ಜಾಕೆಟ್ ಮೇಲೆ ಪ್ರಿಂಟ್ ಮಾಡಿಸಿಕೊಂಡಿದ್ದ ದೀಪಿಕಾ, ಪತಿಯ ಚಿತ್ರವನ್ನು ಪ್ರಮೋಟ್ ಮಾಡಿದ್ದರು. ಇದಕ್ಕೆ ಸಾಕಷ್ಟು ಮೆಚ್ಚುಗೆ ಕೂಡ ಕೇಳಿಬಂದಿತ್ತು.
Padmavath: 400 ಕೆ.ಜಿ ಚಿನ್ನದ ಲೆಹಂಗಾ, 20 ಕೆ.ಜಿ ಆಭರಣ- ದೀಪಿಕಾರ ಒಂದೇ ಹಾಡಿಗೆ 12 ಕೋಟಿ ಖರ್ಚು!
ಇದರ ಬೆನ್ನಲ್ಲೇ ಈ ಜೋಡಿ ಪರಸ್ಪರ ಎಷ್ಟು ಪ್ರೀತಿ ಮಾಡುತ್ತಿದೆ ಎಂಬ ಬಗ್ಗೆ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಣವೀರ್, ಪತ್ನಿಯ ಮೇಲೆ ತೋರಿರುವ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ರಣವೀರ್ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಬಂದಿತ್ತು. ಆಗ ಅವರು ಈ ಪ್ರಶಸ್ತಿಯನ್ನು ನನ್ನ ಪ್ರೀತಿ ಪಾತ್ರರಿಗೆ ಸಮರ್ಪಣೆ ಎಂದುಕೊಂಡು ಒಳಗೆ ಇದ್ದ ದೀಪಿಕಾರನ್ನು ಎಳೆದುಕೊಂಡು ವೇದಿಕೆ ಮೇಲೆ ಬಂದಿದ್ದರು. ಅಲ್ಲಿ ನೆರೆದಿದ್ದ ಸೆಲೆಬ್ರಿಟಿಗಳೆಲ್ಲಾ (Celebrities) ಭರ್ಜರಿ ರೆಡಿಯಾಗಿ ಬಂದಿದ್ದರೆ, ವೇದಿಕೆಯ ಮೇಲೆ ಹೋಗುವ ಸೂಚನೆ ಇಲ್ಲದಿದ್ದ ದೀಪಿಕಾ ಜೀನ್ಸ್ ಧರಿಸಿ ಯಾವುದೇ ಮೇಕಪ್ ಇಲ್ಲದೇ ಬಂದಿದ್ದರು. ವೇದಿಕೆಯ ಮೇಲಿದ್ದ ಕರಣ್ ಜೋಹರ್ ಅವರಿಗೆ ಪ್ಲೀಸ್ ನಿಮ್ಮ ಜಾಕೇಟ್ ನೀಡಿ ಎಂದು ತಮಾಷೆ ಮಾಡಿದರು. ಇಷ್ಟು ಸಿಂಪಲ್ ಆಗಿದ್ದರೂ ಅಲ್ಲಿದ್ದ ಮೇಕಪ್ ನಟಿಯರಿಗಿಂತಲೂ ದೀಪಿಕಾರೇ ಸುಂದರಿಯಾಗಿ ಕಾಣಿಸುವುದಾಗಿ ಕಮೆಂಟ್‌ಗಳ ಸುರಿಮಳೆಯೇ ಆಗಿದೆ.
ಈ ಸಂದರ್ಭದಲ್ಲಿ ಬಟ್ಟೆಯ ಬಗ್ಗೆ ದೀಪಿಕಾ ಸ್ವಲ್ಪ ಮುಜುಗರಕ್ಕೆ ಒಳಗಾದಂತೆ ತೋರಿದರೂ ಈಕೇಯೇ ನನಗೆ ಸ್ಫೂರ್ತಿ ಎಂದು ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಅವರನ್ನು ಹತ್ತಿರಕ್ಕೆ ಎಳೆದುಕೊಂಡು ಕೆನ್ನೆಗೆ ಮುತ್ತು ಕೊಟ್ಟರು. ಹೃದಯಗಳನ್ನು ಕರಗಿಸಲು ಈ ಮಧುರ ಕ್ಷಣ ಸಾಕು ಎನ್ನಿಸುವಂತೆ ಈ ವಿಡಿಯೋ ಇದ್ದು, ಸಕತ್ ವೈರಲ್ ಆಗುತ್ತಿದೆ.
ಇನ್ನು 3 ವರ್ಷಗಳಲ್ಲಿ ದೀಪಿಕಾ ಪಡುಕೋಣೆ 5 ಚಿತ್ರಗಳು, ಬಜೆಟ್ ಕೇಳಿದ್ರೆ ಸುಸ್ತಾಗೋದು ಗ್ಯಾರಂಟಿ!