Asianet Suvarna News Asianet Suvarna News

119 ಕೋಟಿ ಹೊಸ ಮನೆ ಖರೀದಿಸಿದ ದೀಪಿಕಾ-ರಣವೀರ್; ಸಲ್ಲು-ಖಾನ್ ಬಳಿಯೇ ಮನೆ ಬೇಕಾ?

 ಮದುವೆ ನಂತರ ಮೊದಲ ಮನೆ ಖರೀದಿಸಿದ ದೀಪ್‌ವೀರ್. ಸಲ್ಲು ಮತ್ತು ಶಾರುಖ್‌ ಏರಿಯಾದಲ್ಲಿ ಎಂದು ತಿಳಿದು ನೆಟ್ಟಿಗರು ಗರಂ....
 

Deepika Padukone Ranveer Singh buys their first house together worth 119 crore vcs
Author
First Published Dec 29, 2022, 12:58 PM IST

ಬಾಲಿವುಡ್‌ ಚಿತ್ರರಂಗದ ಸ್ಮಾರ್ಟ್‌ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ತಮ್ಮ ಮೊದಲ ಮನೆಯನ್ನು ಖರೀದಿಸಿದ್ದಾರೆ. ಮುಂಬೈನಲ್ಲಿ ಐಷಾರಾಮಿ ಮನೆಗೆ 119 ಕೋಟಿ ಕೊಟ್ಟಿದ್ದು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್‌ ನಿವಾಸಕ್ಕೆ ತುಂಬಾನೇ ಹತ್ತಿರವಾಗಿದೆ ಎನ್ನಲಾಗಿದೆ. 

ಸುಮಾರು 11,266 ಚದರಡಿ ಜಾಗದ ಮನೆ ಇದಾಗಲಿದೆ. ಅಲ್ಲದೆ ಟೆರೆಸ್‌ ವಿಶಾಲವಾಗಿರಬೇಕು ಎಂದು 1300 ಚದರಡಿ ವಿಭಿನ್ನವಾಗಿರುವ ಟೆರೆಸ್ ಮಾಡುವ ಪ್ಲ್ಯಾನ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಎಸ್ಕ್ವೈರ್ ಮ್ಯಾಗಜೀನ್ ಸಿಂಗಾಪುರ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 

ರಣವೀರ್‌ ಹೊಸ ಮನೆ ಕಿಚನ್‌ ಡಿಸೈನ್‌ ಮಾಡಿರುವುದು ಸ್ವತಃ ದೀಪಿಕಾ ಪಡುಕೋಣೆಯಂತೆ!

ಜೀವನದಲ್ಲಿ ಏನನ್ನು ಹೆಚ್ಚು ಸಂಭ್ರಮಿಸಲು ಇಷ್ಟ ಪಡುತ್ತೀರಾ? ಎಂದು ನಿರೂಪಕಿ ರಣವೀರ್‌ನನ್ನು ಪ್ರಶ್ನೆ ಮಾಡುತ್ತಾರೆ. 'ದೀಪಿಕಾ ಪಡುಕೋಣೆ ಮತ್ತು ನಾನು ನಮ್ಮ ಮೊದಲ ಮನೆಯನ್ನು ಖರೀದಿಸಿದ್ದೀವಿ...ಶ್ರೀಘ್ರದಲ್ಲಿ ಅದನ್ನು ಅದ್ಭುತ ಮನೆ ಮಾಡಲಿದ್ದೀವಿ. ಮದುವೆ ನಂತರ ನಾನು ದೀಪಿಕಾ ಮನೆಗೆ ತೆರಳಿದೆ ಈಗ ಸುಮಾರು 4 ವರ್ಷಗಳಾಗಿದೆ. ಆದರೆ ಇದು ನಮ್ಮ ಮೊದಲ ಮನೆ ಆಗಲಿದೆ. ಈಗ ನಾವಿಬ್ಬರೂ ತುಂಬಾ ಬ್ಯುಸಿಯಾಗಿದ್ದೀವಿ ಅದರಲ್ಲೂ ದೀಪಿಕಾ..ಕೆಲಸ ಮತ್ತು ಮನೆ. ಆಕೆ ತುಂಬಾನೇ ಹೋಮ್ಲಿ ಹುಡುಗಿ. ಮನೆಯಲ್ಲಿರಲು ಇಷ್ಟ ಪಡುವ ಹುಡುಗಿ ದೀಪಿಕಾ ಹೀಗಾಗಿ ನಾವು ಹೆಚ್ಚಾಗಿ ಹೊರಗಡೆ ಹೋಗಿಲ್ಲ ಮನೆಯಲ್ಲಿ ನೆಮ್ಮದಿಯಾಗಿರುತ್ತೀವಿ. ಈಗ ಖರೀದಿಸಿರುವ ಮನೆ ಸಿಟಿಯಿಂದ ಒಂದೆರಡು ಗಂಟೆ ದೂರದಲ್ಲಿದೆ. ನಿಶಬ್ದವಾಗಿರುವ ಜಾಗ ಇದಾಗಿದ್ದು ನಾವು ನೆಮ್ಮದಿಯಾಗಿ ಸಮಯ ಕಳೆಯುವುದಕ್ಕೆ ಇಷ್ಟ ಪಡುತ್ತೀವಿ. ಆ ಮನೆಯಲ್ಲಿ ರೆಡಿ ಮಾಡಲು ದೀಪಿಕಾ ಹೆಚ್ಚಿಗೆ ಸಮಯ ತೆಗೆದುಕೊಂಡು ಅಲಂಕಾರ ಮಾಡಿದ್ದಾರೆ.ಈ ಕೆಲಸಗಳನ್ನು ದೀಪಿಕಾ ಮಾಡಿದ್ದಾಗ ಆಕೆ ಮುಖದಲ್ಲಿ ಕಾಣುವ ಖುಷಿ ನನಗೆ ಇಷ್ಟವಾಗುತ್ತದೆ ಅದನ್ನು ತುಂಬಾನೇ ಎಂಜಾಯ್ ಮಾಡುತ್ತೀನಿ. ಹೀಗಾಗಿ ಈ ಇನ್ನು ಹೆಚ್ಚಿಗೆ ಮಾಡಲು ಪ್ರೋತ್ಸಾಹ ನೀಡುತ್ತೀನಿ. ದೀಪಿಕಾ ಒಂದು ರೀತಿ ಪುಟ್ಟ ಹುಡುಗಿ ವಿತ್ ಡಾಲ್ ಹೌಸ್‌ ಎಂದು ನಾನು ರೇಗಿಸುತ್ತೀನಿ.ಹೋಮ್‌ ಮೇಕರ್‌ ಅಗಿರುವುದಕ್ಕೆ ದೀಪಿಕಾಗೆ ತುಂಬಾ ಇಷ್ಟ ..ಇದನ್ನು ನಾನು ಎಂಜಾಯ್ ಮಾಡುವೆ. ಜೀವನ ಏನೇ ಇರಲಿ ಫ್ಯಾಮಿಲಿ ಜೊತೆ ಸಮಯ ಕಳೆಯುವುದೇ ನನಗೆ ದೊಡ್ಡ ಸೆಲೆಬ್ರೇಷನ್' ಎಂದು ರಣವೀರ್ ಹೇಳಿದ್ದಾರೆ.

Deepika Padukone Ranveer Singh buys their first house together worth 119 crore vcs

ಮುಂಬೈ ಬಿಟ್ಟಿದ್ದು ಸುಳ್ಳು?

ರಣ್ವೀರ್ ಸಿಂಗ್ ಇತ್ತೀಚಿಗಷ್ಟೆ ಸರ್ಕಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿದೆ. ಈ ಬಾರಿಯೂ ಅಭಿಮಾನಿಗಳನ್ನು ಮೋಡಿ ಮಾಡಲು ರಣ್ವೀರ್ ಸಿಂಗ್ ವಿಫಲವಾಗಿದ್ದಾರೆ. ಸರ್ಕಸ್ ಸೋಲಿನಿಂದ ರಣ್ವೀರ್ ಸಿಂಗ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಸರ್ಕಸ್ ಸೋಲಿನ ಬಳಿಕ ರಣ್ವೀರ್ ಸಿಂಗ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಕಾಣಿಸಿಕೊಂಡಿರುವ ರಣ್ವೀರ್ ಪತ್ನಿ ದೀಪಿಕಾ ಜೊತೆ ಮುಂಬೈ ತೊರೆದಿದ್ದಾರೆ. ಇಬ್ಬರೂ ಗೇಟ್‌ವೇ ಆಫ್ ಇಂಡಿಯಾ ಬಳಿ ಬೋಟ್‌ ಹತ್ತಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಸರ್ಕಸ್ ಸಿನಿಮಾದಲ್ಲಿ ದೀಪಿಕಾ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪತಿ-ಪತ್ನಿ ಇಬ್ಬರೂ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಅಂದಹಾಗೆ ದೀಪಿಕಾ ಪಠಾಣ್ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. 

Follow Us:
Download App:
  • android
  • ios