ಬಾಲಿವುಡ್‌ನ ಖ್ಯಾತ ನಟ ರಣವೀರ್‌ ಸಿಂಗ್ ನಗ್ನ ಫೋಟೋ ಶೂಟ್ ಮಾಡಿಸಿರುವುದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಪತ್ನಿ ದೀಪಿಕಾ ಪಡುಕೋಣೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ

ಬಾಲಿವುಡ್‌ನ ಖ್ಯಾತ ನಟ ರಣವೀರ್‌ ಸಿಂಗ್ ನಟಿ ಮಣಿಯರಿಗಿಂತ ತಾನೇನು ಕಮ್ಮಿ ಇಲ್ಲ ಎಂದು ಇದೇ ಮೊದಲ ಬಾರಿಗೆ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿದ್ದು, ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಮಾತ್ರವಲ್ಲ ಭಾರೀ ಟೀಕೆಗೆ ಗುರಿಯಾಗಿದ್ದ ನಟ ಬಳಿಕ ನೆಟ್ಟಿಗರಿಗೇ ಕ್ಲಾಸ್ ತೆಗೆದುಕೊಂಡಿದ್ದರು. ಮಾತ್ರವಲ್ಲ ಪತ್ನಿ, ನಟಿ ದೀಪಿಕಾ ಪಡುಕೋಣೆಗೂ ಕೂಡ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ ಮಾಡಿ, ನಿಮ್ಮ ಗಂಡನಿಗೆ ಸ್ವಲ್ಪ ಬುದ್ದಿ ಹೇಳಿ ಎಂದಿದ್ದರು. ಇದೀಗ ಪತ್ನಿ ದೀಪಿಕಾ ಗಂಡನ ಫೋಟೋ ಶೂಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಮೆಂಟ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ. ಗಂಡನ ಫೋಟೋಶೂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ದೀಪಿಕಾ ಬೆಂಬಲ ಸೂಚಿಸಿದ್ದಾರೆ. ಫೋಟೋಗಳು ತುಂಬಾ ಚೆನ್ನಾಗಿವೆ ಎಂದಿದ್ದಾರೆ. ಈ ಮೂಲಕ ಪತಿಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮಾತ್ರವಲ್ಲ ಫೋಟೋಗಳು ಪಬ್ಲಿಕ್ ಆಗುವ ಮುನ್ನವೇ ಪತ್ನಿ ದೀಪಿಕಾ ನೋಡಿದ್ದರಂತೆ. ಜೊತೆಗೆ ಫೋಟೋಶೂಟ್ ನಡೆಯುವ ಬಗ್ಗೆ ಸಂಪೂರ್ಣ ಮಾಹಿತಿ, ಯೋಜನೆ, ಎಲ್ಲವೂ ದೀಪಿಕಾಗೆ ಗೊತ್ತಿತ್ತಂತೆ. ಸಂಪೂರ್ಣ ಚಿತ್ರೀಕರಣದ ರೂಪುರೇಷೆಯನ್ನು ಇಷ್ಟಪಟ್ಟಿದ್ದರಂತೆ. ಚಿತ್ರೀಕರಣ ನಡೆಯುವಾಗ ದೀಪಿಕಾ ಕೂಡ ಜೊತೆಗೆ ಇದ್ದರು ಎಂದು ವರದಿಗಳು ತಿಳಿಸಿವೆ.

ಈ ಫೋಟೋಗಳು ಬಹಳ ಹಿಂದೆಯೇ ಹೊರಬರಬೇಕಿತ್ತಂತೆ. ಮೇ ಅಥವಾ ಜೂನ್ ನಲ್ಲಿ ಈ ಫೋಟೋಗಳು ರಿಲೀಸ್ ಆಗ ಬೇಕಿತ್ತಂತೆ. ಆದರೆ ರಣವೀರ್‌ಗೆ ಇತರ ಕಮಿಟ್‌ಮೆಂಟ್‌ಗಳು ಮತ್ತು ಚಲನಚಿತ್ರ ಬಿಡುಗಡೆಯ ಕಾರಣ ಈ ಫೋಟೋ ಬಿಡುಗಡೆ ವಿಚಾರವನ್ನು ಮುಂದೂಡಲಾಗಿತ್ತಂತೆ. 

ನಗ್ನರಾದ ರಣವೀರ್ ಸಿಂಗ್, ಫೋಸ್ ನೋಡಿ ದೀಪಿಕಾ ಗಂಡಂಗೇನಾಯ್ತು ಅಂತಿದ್ದಾರೆ ನೆಟ್ಟಿಗರು!

ನಟ ರಣವೀರ್‌ ಸಿಂಗ್ ಈ ಫೋಟೋ ಶೂಟ್ ಮಾಡಿಸಿರುವುದು. ಪೇಪರ್ ಎಂಬ ಅಂತರಾಷ್ಟ್ರೀಯ ಮ್ಯಾಗಸಿನ್ ಒಂದಕ್ಕಾಗಿ. ಟರ್ಕಿ ದೇಶದ ಜನಪ್ರಿಯ ರಗ್‌ ಅನ್ನು ನೆಲದ ಮೇಲೆ ಹಾಸಿ ಅದರ ಮೇಲೆ ರಣವೀರ್‌ ಸಿಂಗ್ ಬೆತ್ತಲಾಗಿ ಫೋಟೋ ತೆಗೆಸಿಕೊಂಡಿದ್ದಾರೆ. ಜನಪ್ರಿಯ ಫ್ಯಾಷನ್‌ ವಾಚ್‌ಡಾಗ್ ಆಗಿರುವ ಡಯಟ್ ಸಬ್ಯಾ, ನಟ ರಣವೀರ್‌ ಅವರನ್ನು ಅಮೆರಿಕಾ ಖ್ಯಾತ ನಟ ಬುರ್ಟ್‌ ರೆನಾಲ್ಡ್‌ಗೆ ಹೊಲಿಸಿದ್ದಾರೆ. 1972ರಲ್ಲಿ ಬುರ್ಟ್‌ ರೆನಾಲ್ಡ್‌ ಕಾಸ್ಮೋಪಾಲಿಟನ್ ಮ್ಯಾಗಜಿನ್‌ಗೆ ಇದೇ ರೀತಿ ಪೋಸ್‌ ಕೊಟ್ಟು ಫೋಟೋಶೂಟ್ ಮಾಡಿಸಿದ್ದರಂತೆ. ಹೀಗಾಗಿ ರಣವೀರ್‌ ಕೂಡ ಇದೇ ರೀತಿ ಬೋಲ್ಡ್‌ ಆಗಿ ಫೋಟೋ ತೆಗೆಸಿಕೊಂಡಿದ್ದಾರೆ.

ಅಯ್ಯೋ ದೇವರೇ! ಬೆತ್ತಲಾಗಿ ಮಲಗಿದ ರಣವೀರ್‌ ಸಿಂಗ್ ಫೋಟೋ ವೈರಲ್!

Scroll to load tweet…

ರಣವೀರ್ ನಗ್ನ ಫೋಟೋ ಶೂಟ್ ಗೆ ಸಾಕಷ್ಟು ಪರ ವಿರೋಧ ವ್ಯಕ್ತವಾಗಿತ್ತು. ಇಷ್ಟು ದಿನ ದೀಪಿಕಾ ಮಾತ್ರ ನೋಡಿದ್ದಳು ಈಗ ಇಡೀ ಊರಿಗೆ ನಿಮ್ಮ ಅವತಾರ ತೋರಿಸಿದ್ದೀರಾ ಎಂದು ನೆಟ್ಟಿಗರು ಕಾಲೆಳೆದಿದ್ದರು. ಕೆಲವರು ಇದಕ್ಕೆ ದೀಪಿಕಾ ಸಾಥ್‌ ಕೊಟ್ಟಿರುವುದೇ ಗ್ರೇಟ್‌ ಎಂದಿದ್ದರು.