ಅಶ್ವಿನ್ ದತ್ ನಿರ್ಮಾಣದ ಪ್ರಭಾಸ್ 21ನೇ #Prabhas21 ಚಿತ್ರದಲ್ಲಿ ಬಾಲಿವುಡ್‌ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ನಾಯಕಿಯಾಗಿ ಅಭಿನಯಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅದರಲ್ಲೂ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ನೇಮ್‌ ಫೇಮ್‌ ಪಡೆದು ಕೊಂಡಿರುವವರನ್ನು ಒಟ್ಟಾಗಿ ನೋಡಲು ಅಭಿಮಾನಿಗಳು ಕಾತುರದಿಂದ ಅಪ್ಡೇಟ್‌ಗಳಿಗೆ ಕಾಯುತ್ತಿದ್ದಾರೆ. ಇದೀಗ ಬಂದ ಸುದ್ದಿಯಲ್ಲಿ ದೀಪಿಕಾ ಮುಂಗಡವಾಗಿ ನೀಡಿದ್ದ ಹಣವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಡಿಪ್ಪಿ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ನೋಡಿ....

ಬಾಹುಬಲಿ ಸ್ಟಾರ್‌ ಜೊತೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ ದೀಪಿಕಾ ಪಡುಕೋಣೆ

ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಮುನ್ನ ನಟ-ನಟಿಯರಿಗೆ ನಿರ್ಮಾಪಕರು ಅಡ್ವಾನ್ಸ್ ನೀಡುತ್ತಾರೆ. ಅದರಂತೇ ಅಶ್ವಿನ್ ದತ್ ಅಡ್ವಾನ್ಸ್‌ ನೀಡಲು ದೀಪಿಕಾರನ್ನು ಭೇಟಿ ಮಾಡಿದ್ದಾರೆ. ಆದರೆ ಒಂದು ನಿಮಿಷವೂ ಯೋಚಿಸದೇ ದೀಪಿಕಾ ಚೆಕ್‌ ಹಿಂದಿರುಗಿಸಿದ್ದಾರೆ.  ಈ ವಿಚಾರ ಕೇಳಿ ಬೇಸರವಾಗಬೇಡಿ, ಏಕೆಂದರೆ ದೀಪಿಕಾ ಮುಂಗಡ ಚೆಕ್ ಪಡೆಯಲು ನಿರಾಕರಿಸಿದ್ದಾರೆಯೇ ಹೊರತು, ಸಿನಿಮಾದಿಂದ ಹೊರ ಬಂದಿಲ್ಲ.

ಹೌದು! ಕೊರೋನಾ ಲಾಕ್‌ಡೌನ್‌ನಿಂದ ಜನರಿಗೆ ಆದಾಯವಿಲ್ಲ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅದರಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಹೊಡೆತ ತಿಂದದ್ದು ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು. ಈ ಕಾರಣಕ್ಕಾಗಿಯೇ ಇಂಥ ಸಮಯದಲ್ಲಿ ಅವರಿಂದ ಹಣ ಪಡೆಯುವುದು ಸರಿ ಅಲ್ಲವೆಂದು ದೀಪಿಕಾ ಸದ್ಯಕ್ಕೆ ಚೆಕ್ ಬೇಡವೆಂದು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಪ್ರಭಾಸ್‌ಗೆ ಜೊತೆ ನಟಿಸಲು ದೀಪಿಕಾ ಕೇಳಿದ್ರು ಭಾರೀ ಸಂಭಾವನೆ..! ಇವರೇ ಹೈಯೆಸ್ಟ್ ಫೇಯ್ಡ್ ನಟಿ 

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಳ ಆಯ್ಕೆ ಬಗ್ಗೆ ದೀಪಿಕಾ ತುಂಬಾನೇ ಚೂಸಿಯಾಗಿದ್ದಾರೆ. 'ಚಪಾಕ್‌' ನಂತರ ರಣವೀರ್‌ ಸಿಂಗ್ ಜೊತೆ '83' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅದಾದ ನಂತರ ಒಪ್ಪಿಕೊಂಡಿರುವ ಸಿನಿಮಾವೇ ಇದು. ದೀಪಿಕಾ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿರುವುದರ ಬಗ್ಗೆ ತೆಲುಗು ಸಿನಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು. ಇದೀಗ ಈ ಚೆಕ್ ವಿಚಾರ ಕೇಳಿ ದೀಪಿಕಾಗೆ ಗುಣಕ್ಕೆ ಫಿದಾ ಆಗಿದ್ದಾರೆ.

ದುಡ್ಡಿನ ವಿಷಯದಲ್ಲಿ ಬೇರೆ ನಟಿಯರಂತೆ ದೀಪಿಕಾ ತುಂಬಾ ಕಂಜೂಸಿಯಲ್ಲವಂತೆ. ಇವರ ಈ ಒಳ್ಳೆ ಗುಣವನ್ನೇ ಹಲವರು ಮಿಸ್ ಯೂಸ್ ಮಾಡಿಕೊಳ್ಳುತ್ತಾರೆಂಬುವುದು ಬಾಲಿವುಡ್‌ ಜೊತೆ ನಂಟಿರುವ ಅನೇಕರ ಅಭಿಪ್ರಾಯ. ಉತ್ತರ ಭಾರತೀಯ ನಟಿಯರಿಗೆ ಹೋಲಿಸಿದಲ್ಲಿ ದೀಪಿಕಾ ಸ್ವಭಾವ ಎಲ್ಲರೂ ಮೆಚ್ಚುವಂಥದ್ದು. ಎಲ್ಲರಿಗೂ ಮಾದರಿಯಾಗುವಂತಿರುತ್ತದೆ. ಇನ್ನೊಬ್ಬರ ಕಷ್ಟ ಸುಖಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯತೆ ಡಿಪ್ಪಿಯದ್ದು, ಎನ್ನುತ್ತಾರೆ ಆಕೆಯನ್ನು ಹತ್ತಿರದಿಂದ ಬಲ್ಲವರು.

"