FIFA ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿ ಇತಿಹಾಸ ಸೃಷ್ಟಿಸಿದ ನಟಿ ದೀಪಿಕಾ ಪಡುಕೋಣೆ
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಭಿಮಾನಿಗಳು ಸಂತಸ ಹೆಚ್ಚಿಸಿದ್ದಾರೆ. FIFA ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತಿಯರು ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಭಿಮಾನಿಗಳು ಸಂತಸ ಹೆಚ್ಚಿಸಿದ್ದಾರೆ. FIFA ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತಿಯರು ಎನ್ನುವ ಹೆಗ್ಗಳಿಕೆ ಗಳಿಸಿದ್ದಾರೆ. ಭಾನುವಾರ ನಡೆದ ರೋಚಕ ಫೈನಲ್ ಪಂದ್ಯಕ್ಕೂ ಮೊದಲು ನಟಿ ದೀಪಿಕಾ ಪಡುಕೋಣೆ ಮತ್ತು ಇಕರ್ ಕ್ಯಾಸಿಲಾಸ್ ಜೊತೆ ಸೇರಿ ಲುಸೈಲ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ದೀಪಿಕಾ FIFA ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು ಭಾರತೀಯರಿಗೆ ಮತ್ತು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.
FIFA ವಿಷ್ವಕಪ್ ಟ್ರೋಫಿಯನ್ನು 18-ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಇದು 6.175 ಕೆಜಿ ತೂಕವಿದೆ. ಟ್ರೋಫಿ ಅನಾವರಣ ಸಮಾರಂಭ ಭಾರತೀಯರಿಗೆ ಬಹುಮುಖ್ಯ ಭಾಗವಾಗಿತ್ತು. ಲುಸೈಲ್ ಸ್ಟೇಡಿಯಂನಲ್ಲಿ ದೀಪಿಕಾ ಪಡುಕೋಣೆ ಮಾಜಿ ಫುಟ್ಬಾಲ್ ಆಟಗಾರ, ಲೆಜೆಂಡ್ ಸ್ಪ್ಯಾನಿಷ್ ನ ಇಕರ್ ಕ್ಯಾಸಿಲಾಸ್ ಫರ್ನಾಂಡಿಸ್ ಜೊತೆ ನಡೆದುಕೊಂಡು ಬಂದರು. ಬಿಳಿ ಡ್ರೆಸ್ ಮೇಲೆ ಕೋಟ್ ಧರಿಸಿ ಅದಕ್ಕೊಂದು ಕಪ್ಪು ಬೆಲ್ಟ್ ಹಾಕಿದ್ದ ದೀಪಿಕಾ, ಇಕರ್ ಕ್ಯಾಸಿಲಾಸ್ ಫರ್ನಾಂಡಿಸ್ ಜೊತೆ ಮಿಲಿಯನ್ ಡಾಲರ್ ನಗು ಬೀರುತ್ತಾ ಎಂಟ್ರಿ ಕೊಟ್ಟರು. ಕಿಕ್ಕಿರುದು ತುಂಬಿದ್ದ ಕ್ರೀಡಾಂಗಣದಲ್ಲಿ ದೀಪಿಕಾ ಎಲ್ಲರ ಗಮನ ತನ್ನತ್ತ ಸೆಳೆದರು. ಟ್ರೋಫಿ ಹಿಡಿದು ಬಂದ ದೀಪಿಕಾ ಅವರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇದು ದೀಪಿಕಾ ಸಾಧನೆಯ ಮತ್ತೊಂದು ಹೈಲೆಟ್ ಆಗಿದೆ.
FIFA World Cup: ಲಿಯೋನೆಲ್ ಮೆಸ್ಸಿಗೆ ಗೋಲ್ಡನ್ ಬಾಲ್, ಎಂಬಾಪೆಗೆ ಗೋಲ್ಡನ್ ಬೂಟ್..!
ನಟಿ ದೀಪಿಕಾ ಪಡುಕೋಣೆ ಅಂತಾರಾಷ್ಟ್ರೀಯ ಮಟ್ಟದ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ.ಈ ವರ್ಷ ದೀಪಿಕಾ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ತೀರ್ಪುಗಾರರ ಸದಸ್ಯರಾಗಿ ಬಾರತವನ್ನು ಪ್ರತಿನಿಧಿಸಿದ್ದರು. ಇನ್ನು ಗ್ಲೋಬಲ್ ರೇಶಿಯೋ ಆಫ್ ಬ್ಯೂಟಿ ಅವರ ಪ್ರಕಾರಾ ನಟಿ ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ಸುಂದರ ಮಹಿಳೆಯರ ಟಾಪ್ 10 ಲಿಸ್ಟ್‌ನಲ್ಲಿ ಒಬ್ಬರಾಗಿದ್ದಾರೆ. ಈ ಪಟ್ಟಿಯಲ್ಲಿ ಜಾಗ ಪಡೆದ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ. ದೀಪೀಕಾ ಜಾಗತೀಕ ಮಟ್ಟದ ಆಕರ್ಷಣೆ ಹೊಂದಿದ್ದಾರೆ. ದಿನದಿಂದ ದಿನಕ್ಕೆ ದೀಪಿಕಾ ಖ್ಯಾತಿ ಹೆಚ್ಚುತ್ತಿದೆ. ಜಗತ್ತಿನ ಐಷಾರಾಮಿ ಮತ್ತು ಪಾಪ್ ಬ್ರಾಂಡ್‌ಗಳಿಗೆ ಜಾಗತಿಕ ಮುಖವಾಗಿ ಭಾರತಿಂದ ಆಯ್ಕೆಯಾದ ಏಕೈಕ ನಟಿ ದೀಪಿಕಾ ಅವರಾಗಿದ್ದಾರೆ. ಇದೀಗ FIFA ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
FIFA World Cup: ಮೆಸ್ಸಿ ಮ್ಯಾಜಿಕ್, ಪೆನಾಲ್ಟಿಯಲ್ಲಿ ಕಮಾಲ್, ಫುಟ್‌ಬಾಲ್ ಜಗತ್ತಿಗೆ ಅರ್ಜೆಂಟೀನಾ ಕಿಂಗ್!
ಅಂದಹಾಗೆ ನಟಿ ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೆ ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡಿನ ವಿವಾದದ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ಬೇಷರಂ ಹಾಡಿನಲ್ಲಿ ದೀಪಿಕಾ ಧರಿಸಿದ್ದ ಬಿಕಿನಿ ವಿವಾದಕ್ಕೆ ಕಾರಣವಾಗಿತ್ತು. ಕೇಸರ ಬಣ್ಣದ ಬಿಕಿನಿ ಧರಿಸಿ ನಾಚಿಕೆ ಇಲ್ಲದ ಬಣ್ಣ ಎಂದಿದ್ದಾರೆ ಎಂದು ದೀಪಿಕಾ ವಿರುದ್ಧ ಕೆಲವರು ರೊಚ್ಚಿಗೆದ್ದಿದ್ದಾರೆ. ಪಠಾಣ್ ಸಿನಿಮಾ ಬ್ಯಾನ್ ಮಾಡಬೇಕು ಎನ್ನುವ ಒತ್ತಾಯ ಕೂಡ ಕೇಳಿಬರುತ್ತಿದೆ. ಈ ನಡುವೆ ದೀಪಿಕಾ FIFA ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ಮೂಲಕ ವಿವಾದ ಮಾಡುವವರ ಬಾಯಿಮುಚ್ಚಿಸಿದ್ದಾರೆ.