’ಹುಳಿ ಮಾವಿನಕಾಯಿ ತಿನ್ನುವುದಕ್ಕಾಗಿಯೇ ಇದನ್ನು ಒಪ್ಕೊಂಡ್ರಂತೆ ದೀಪಿಕಾ’!

ದೀಪಿಕಾ ಪಡುಕೋಣೆ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದು ಮುಂದಿನ ಸಿನಿಮಾ ’ಚಪ್ಪಕ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ಸಿನಿಮಾದಲ್ಲಿ ದೀಪಿಕಾ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪಾತ್ರವನ್ನು ಮಾಡಲಿದ್ದಾರೆ. 

Deepika Padukone appears in next movie Chhapaak

ಮುಂಬೈ (ಮಾ. 02): ದೀಪಿಕಾ ಪಡುಕೋಣೆ ಹೊಸ ಅವತಾರದಲ್ಲಿ ತೆರೆ ಮೇಲೆ ಬರುತ್ತಿದ್ದು ಮುಂದಿನ ಸಿನಿಮಾ ’ಚಪ್ಪಕ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಈ ಸಿನಿಮಾದಲ್ಲಿ ದೀಪಿಕಾ ಆ್ಯಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ ವಾಲ್ ಪಾತ್ರವನ್ನು ಮಾಡಲಿದ್ದಾರೆ. 

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್?

ರಾಜಿ ಖ್ಯಾತಿಯ ಮೇಘನಾ ಗುಲ್ಜಾರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮೀ ಅಗರ್ ವಾಲ್ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

ಆ್ಯಸಿಡ್ ದಾಳಿಯ ನಂತರ ಎದುರಾಗುವ ಪರಿಸ್ಥಿತಿಯನ್ನು ಎದುರಿಸಲು ಧೈರ್ಯ, ಮನೋಸ್ಥೈರ್ಯ ಇರಬೇಕು. ಇಂತದ್ದೊಂದು ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಈ ಚಿತ್ರಕ್ಕೆ ದೀಪಿಕಾ ಹೆಚ್ಚು ಹೊಂದುತ್ತಾರೆ. ಹಾಗಾಗಿ ಅವರನ್ನು ಆಯ್ಕೆ ಮಾಡಿದ್ದೇವೆ ಎಂದು ನಿರ್ದೇಶಕಿ ಮೇಘನಾ ಹೇಳಿದ್ದಾರೆ. 

ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ

ಬಾಲಿಕಾ ವಧು ಖ್ಯಾತಿಯ ವಿಕ್ರಾಂತ್ ಮಾಸಿ ದೀಪಿಕಾಗೆ ಸಾಥ್ ನೀಡಲಿದ್ದಾರೆ. 

ಈ ಚಿತ್ರವನ್ನು ಒಪ್ಪಿಕೊಂಡ ದೀಪಿಕಾ ತಮಾಷೆಯಾಗಿ ಹೇಳಿದ್ದು ಹೀಗೆ; ಈ ಚಿತ್ರದಲ್ಲಿ ಮಾವಿನ ಕಾಯಿಗೆ ಉಪ್ಪು. ಮೆಣಸಿನ ಪುಡಿ ಹಾಕಿಕೊಂಡು ತಿನ್ನುವ ಸೀನ್ ಇದೆ. ಮಾವಿನಕಾಯಿ ತಿನ್ನುವುದಕ್ಕಾಗಿಯೇ ನಾನು ಈ ಚಿತ್ರ ಒಪ್ಪಿಕೊಂಡೇ ಎಂದು ದೀಪಿಕಾ ಹೇಳಿದ್ದಾರೆ. 

 

Latest Videos
Follow Us:
Download App:
  • android
  • ios