ದೀಪಿಕಾ ಪಡುಕೋಣೆ ಪ್ರೆಗ್ನೆಂಟ್?
ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಕೆಲ ತಿಂಗಳುಗಳು ಕಳೆದಿವೆ. ಸಹಜವಾಗಿ ಪ್ರೆಗ್ನೆನ್ಸಿ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಗುಸುಗುಸು ಆರಂಭವಾಗುತ್ತದೆ.
ಮುಂಬೈ (ಫೆ. 27): ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆಯಾಗಿ ಕೆಲ ತಿಂಗಳುಗಳು ಕಳೆದಿವೆ. ಸಹಜವಾಗಿ ಪ್ರೆಗ್ನೆನ್ಸಿ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಗುಸುಗುಸು ಆರಂಭವಾಗುತ್ತದೆ.
ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಬಗ್ಗೆಯೂ ವದಂತಿಗಳು ಹರಿದಾಡುತ್ತಿದೆ. ಇತ್ತೀಚಿಗೆ ಪ್ರಶಸ್ತಿ ಪ್ರಧಾನ ಸಮಾರಂಭವೊಂದಕ್ಕೆ ದೀಪಿಕಾ ರಣವೀರ್ ಆಗಮಿಸಿದ್ದರು. ಕಪ್ಪು ಬಣ್ಣದ ಆಕರ್ಷಣೀಯವಾದ ದಿರಿಸನ್ನು ಧರಿಸಿದ್ದರು. ಇದರಲ್ಲಿ ಸ್ವಲ್ಪ ಹೊಟ್ಟೆ ಬಂದ ಹಾಗೆ ಕಾಣುತ್ತಿತ್ತು. ಹಾಗಾಗಿ ಗರ್ಭಿಣಿ ಇರಬಹುದು ಎಂದು ಗುಸುಗುಸು ಶುರುವಾಗಿದೆ.
ಆದರೆ ದೀಪಿಕಾಳಾಗಲಿ, ಅವರ ಕುಟುಂಬದವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಶಸ್ತಿ ಪ್ರದಾನ ಸಮಾರಂಭದ ವಿಡಿಯೋ ಇಲ್ಲಿದೆ ನೋಡಿ.