Deepika Padukone: ಹಾಲಿವುಡ್ಡಲ್ಲೂ ಮಿಂಚುತ್ತಿರೋ ನಟಿ ಕಲಿತದ್ದೆಷ್ಟು ಗೊತ್ತಾ? ಹೌಹಾರಿದ ಫ್ಯಾನ್ಸ್​!

ಬಾಲಿವುಡ್​, ಹಾಲಿವುಡ್​ ಸೇರಿದಂತೆ ಕನ್ನಡದಲ್ಲಿಯೇ  ನಟಿಸಿರುವ ನಟಿ ದೀಪಿಕಾ ಪಡುಕೋಣೆ ತಮ್ಮ ಶಿಕ್ಷಣದ ಕುರಿತು ನೀಡಿರುವ ಹೇಳಿಕೆಯ ಹಳೆಯ ವಿಡಿಯೋ ಮತ್ತೆ ವೈರಲ್​ ಆಗಿದೆ.
 

Deepika Padukone Admits Being 12th Pass Not Going To College In Old Viral Video

ಬಾಲಿವುಡ್‌ನ ಸದ್ಯದ ಟಾಪ್ ನಟಿಯರ ಪೈಕಿ ಒಬ್ಬರಾಗಿದ್ದಾರೆ  ದೀಪಿಕಾ ಪಡುಕೋಣೆ (Deepika Padukone). ಇದಾಗಲೇ ಹಲವಾರು ಯಶಸ್ವಿ, ಬ್ಲಾಕ್​ಬಸ್ಟರ್​ ಚಿತ್ರಗಳನ್ನು ನೀಡಿದ್ದರೂ ಅವರೀಗ ಭಾರಿ ಪ್ರಚಾರದಲ್ಲಿ ಇರುವುದು ಪಠಾಣ್​ ಚಿತ್ರದಿಂದಾಗಿ. ರೊಮಾನ್ಸ್​, ಸಿಡುಕಿನ ಪಾತ್ರ, ಸಾಹಸ ದೃಶ್ಯ ಎಲ್ಲದ್ದಕ್ಕೂ ಸೈ ಎನಿಸಿಕೊಂಡಿರುವ ನಟಿ ದೀಪಿಕಾ, ಹಾಲಿವುಡ್​ನಲ್ಲಿಯೂ ಛಾಪು ಮೂಡಿಸುತ್ತಿದ್ದಾರೆ. ಪಠಾಣ್​ ಚಿತ್ರ ಮಕಾಡೆ ಮಲಗಿದ್ದ ಬಾಲಿವುಡ್​ ಅನ್ನು ಪುನಶ್ಚೇತನಗೊಳಿಸಿದ ಬಳಿಕವಂತೂ ಶಾರುಖ್​ ಖಾನ್​ ಜೊತೆ ದೀಪಿಕಾ ಅವರ ಡಿಮಾಂಡ್​ ಕೂಡ ಹೆಚ್ಚಾಗಿದೆ. ನಟ ರಣಬೀರ್​ ಸಿಂಗ್​ ಅವರನ್ನು ಮದುವೆಯಾಗಿ ಸುಖಿ ದಾಂಪತ್ಯ ಜೀವನವನ್ನೂ ನಡೆಸುತ್ತಿದ್ದಾರೆ. ನಟಿ ಇಂಥ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದು ಅವರ ಶಿಕ್ಷಣದ ಕುರಿತು.

ಹಾಗೆ ನೋಡಿದರೆ, ಹಲವಾರು ಯಶಸ್ವಿ ಉದ್ಯಮಿಗಳಾಗಲೀ, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರಾಗಲೀ ಅಥವಾ ಬಹು ದೊಡ್ಡ ಸಾಧನೆ ಮಾಡಿದವರೇ ಆಗಲಿ... ಅವರ ಶಿಕ್ಷಣದ (Education) ಹಿನ್ನೆಲೆ ನೋಡಿದಾಗ ಹಲವರು ಶಾಲಾ-ಕಾಲೇಜಿನಲ್ಲಿ ಕಲಿತದ್ದು ಬಹಳ ಕಮ್ಮಿಯೇ. ಆದರೆ ಜೀವನ ಶಿಕ್ಷಣವೇ ಅವರಿಗೆ ಬಹುದೊಡ್ಡ ಪಾಠವಾಗಿದ್ದು, ಇಂಥ ಉನ್ನತ ಶಿಕ್ಷಣ ಪಡೆದವರು ಇವರ ಕೈ ಕೆಳಗೆ ಕೆಲಸ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಜೀವನಕ್ಕೆ ಶಿಕ್ಷಣ ಮುಖ್ಯವಾದರೂ, ಶಾಲಾ-ಕಾಲೇಜುಗಳ ಶಿಕ್ಷಣವೇ ಜೀವನ ಅಲ್ಲ ಎನ್ನುವುದನ್ನು ಇದಾಗಲೇ ಹಲವಾರು ಯಶಸ್ವಿ ಪುರುಷರು, ಯಶಸ್ವಿ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಹತ್ತದವರೂ ಇಂದು ಬೇರೆ ಬೇರೆ ಕ್ಷೇತ್ರಗಳಲ್ಲಿ ಯಾರೂ ಮಾಡದ ಸಾಧನೆ ಮಾಡಿರುವುದೂ ನಮ್ಮ ಕಣ್ಣಮುಂದಿದೆ. ಇದರ ಹೊರತಾಗಿಯೂ ಸ್ವಲ್ಪ ಹೆಚ್ಚು ಹೆಸರು ಮಾಡಿದ ಕೂಡಲೇ ಅವರ ಹಿನ್ನೆಲೆಯನ್ನು, ಅವರ ಶಿಕ್ಷಣವನ್ನು ಕೆದಕುವುದು ಜನಸಾಮಾನ್ಯರ ರೂಢಿ. ಅದರಂತೆಯೇ ದೀಪಿಕಾ ಪಡುಕೋಣೆ ಅವರ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ.

Deepika Padukone: 'ಪಠಾಣ್'​ ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?

ಅದೇನೆಂದರೆ, ದೀಪಿಕಾ ಕಲಿತದ್ದು ಎಷ್ಟು ಎಂಬುದು. ಇದನ್ನು ಕೇಳಿ ಹಲವರು ಅಚ್ಚರಿಯಿಂದ ಹುಬ್ಬೇರಿಸಿದ್ದಾರೆ. ಜನವರಿ 5, 1986 ರಂದು ಡೆನ್ಮಾರ್ಕ್‌ನ (Denmark) ಕೋಪನ್‌ಹ್ಯಾಗನ್‌ನಲ್ಲಿ ಜನಿಸಿದ ದೀಪಿಕಾ ಕನ್ನಡ ಮೂಲದವರು.  ಬ್ಯಾಡ್ಮಿಂಟನ್  ತಾರೆ ಪ್ರಕಾಶ್ ಪಡುಕೋಣೆ ಮತ್ತು ಉಜ್ಜಾಲಾ ದಂಪತಿಯ ಪುತ್ರಿ ದೀಪಿಕಾ ಪಡುಕೋಣೆ ಓದಿದ್ದೆಲ್ಲವೂ ಬೆಂಗಳೂರಿನಲ್ಲಿ. ಏಕೆಂದರೆ ಈಕೆ ಚಿಕ್ಕವರಿರುವಾಗ  ಅವರ ಕುಟುಂಬ ಬೆಂಗಳೂರಿಗೆ ಶಿಫ್ಟ್ (Bangalore) ಆದ್ದರಿಂದ ಇಲ್ಲಿಯೇ ಅವರ ಶಿಕ್ಷಣ ಮುಗಿಯಿತು.  ಬೆಂಗಳೂರಿನ ಸೋಫಿಯಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ದೀಪಿಕಾ ಪಡುಕೋಣೆ, ಮೌಂಟ್ ಕಾರ್ಮೆಲ್ ಕಾಲೇಜ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದರು. ಬಳಿಕ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಹಲವು ಜಾಹೀರಾತುಗಳಲ್ಲಿ ಮಿಂಚಿದರು. ಕನ್ನಡದ ‘ಐಶ್ವರ್ಯ’ ಸಿನಿಮಾದ ಮೂಲಕ ಬಣ್ಣದ ಪ್ರಪಂಚಕ್ಕೆ ಇವರು ಪದಾರ್ಪಣೆ ಮಾಡಿದರು. ಆದರೆ ಸಕ್ಸಸ್​ ಕಂಡದ್ದು ಬಾಲಿವುಡ್​ನಲ್ಲಿ.  ‘ಓಂ ಶಾಂತಿ ಓಂ’ ಚಿತ್ರದ ಮೂಲಕ ಬಾಲಿವುಡ್‌ಗೆ ದೀಪಿಕಾ ಎಂಟ್ರಿ ಕೊಟ್ಟು ಅಲ್ಲಿಯೇ  ನೆಲೆಯೂರಿದರು.  ‘ಲವ್ ಆಜ್ ಕಲ್’, ‘ಕಾಕ್‌ಟೇಲ್’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಪಿಕು’, ‘ಭಾಜಿರಾವ್ ಮಸ್ತಾನಿ’, ‘ಪದ್ಮಾವತ್’ (Padmavath), ‘ಚಪಾಕ್’ ಮುಂತಾದ ಬ್ಲಾಕ್​ಬಸ್ಟರ್​ ಚಿತ್ರ ಕೊಟ್ಟರು. ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ದೀಪಿಕಾ ಪಡುಕೋಣೆ 2018ರಲ್ಲಿ ರಣ್‌ವೀರ್ ಸಿಂಗ್‌ರನ್ನು ಮದುವೆಯಾದರು. 

ಇಷ್ಟೆಲ್ಲಾ ಸಾಧನೆ ಮಾಡಿರುವ ದೀಪಿಕಾ ಓದಿದ್ದು ಮಾತ್ರ 12ನೇ ತರಗತಿಯವರೆಗೆ. ಅಂದರೆ ದ್ವಿತೀಯ ಪಿಯುಸಿವರೆಗೆ (PUC 2nd year) ಮಾತ್ರ. ಹೌದು! ಕೆಲ ತಿಂಗಳುಗಳ ಹಿಂದೆ ಈ ಬಗ್ಗೆ ಖುದ್ದು ದೀಪಿಕಾ ಹೇಳಿಕೊಂಡಿದ್ದು, ಅದರ ವಿಡಿಯೋ ಈಗ ವೈರಲ್​ ಆಗಿದೆ.  ಯಶಸ್ಸಿಗೆ ಬೇಕಾಗಿರುವುದು ಕಠಿಣ ಪರಿಶ್ರಮ ಮತ್ತು ಶಿಸ್ತು ಎಂದಿರುವ ದೀಪಿಕಾ,  ತಾವು ಹೆಚ್ಚಿನ ಶಿಕ್ಷಣ ಕಲಿಯಲು ಏಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. 'ಯಶಸ್ಸನ್ನು ಅರಸಲು ನಾನು ನನ್ನ ಕುಟುಂಬದಿಂದ ದೂರವಿದ್ದೆ.  12ನೇ ಕ್ಲಾಸ್‌ ಪಾಸ್‌ ಆದ ತಕ್ಷಣವೇ ಕನಸಿನ ಬೆನ್ನಟ್ಟಿದೆ. ಹಾಗಾಗಿ ಔಪಚಾರಿಕ ಶಿಕ್ಷಣವನ್ನು ನನ್ನಿಂದ ಪೂರ್ಣಗೊಳಿಸಲು ಆಗಲಿಲ್ಲ. ಪ್ರಾರಂಭದಲ್ಲಿ ನನ್ನ ತಂದೆ-ತಾಯಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಅವರಿಗೆ ನಾನು ಬಹಳ ಕಲಿಯಬೇಕು ಎಂಬ ಕನಸು ಇತ್ತು. ಔಪಚಾರಿಕ ಶಿಕ್ಷಣವನ್ನು ಪೂರೈಸಿದ ನಂತರವೇ ಸಿನಿಮಾ ಇಂಡಸ್ಟ್ರಿಗೆ ಹೋಗಲು ಹೇಳಿದ್ದರು. ಆದರೆ ಆದದ್ದೇ ಬೇರೆ. ನನ್ನ ಅಪ್ಪ-ಅಮ್ಮನಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಭಯವಿತ್ತು. ಅದಕ್ಕಾಗಿ ಅವರು ಬೆಂಬಲಿಸಲೇ ಇಲ್ಲ.  ನಂತರದ ದಿನಗಳಲ್ಲಿ ನನ್ನ ಕಠಿಣ ಪರಿಶ್ರಮವನ್ನು ಕಂಡು ಬೆಂಬಲಸದೇ ಅವರಿಗೆ ಬೇರೆ ದಾರಿ ಇರಲಿಲ್ಲ. ಆದರೆ ಇವೆಲ್ಲಾ ಆಗುವಷ್ಟರಲ್ಲಿ ನಾನು ಮತ್ತೆ ಕಾಲೇಜು ಸೇರಿ ಪದವಿ ಪೂರೈಸಬೇಕು ಎನ್ನಿಸಲೇ ಇಲ್ಲ ಎಂದಿದ್ದಾರೆ ದೀಪಿಕಾ.  ನಾನು ಪದವಿ ಶಿಕ್ಷಣ ಪಡೆಯಲಿಲ್ಲ. ನಾನು 12ನೇ ಕ್ಲಾಸ್‌ ಪಾಸ್‌ ಅಷ್ಟೆ' ಎಂದಿದ್ದಾರೆ. 

Suhana Khan: ದೀಪಿಕಾ ಪಡುಕೋಣೆ ಸ್ಥಾನ ಗಿಟ್ಟಿಸಿಕೊಂಡ ಶಾರುಖ್​ ಪುತ್ರಿ, ಏನಿದು ಗುಟ್ಟು?

ಈ ವಿಡಿಯೋ ವೈರಲ್​ (Viral) ಆಗಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಇನ್ನೂ ಹೆಚ್ಚಿನ ಶಿಕ್ಷಣ ಕಲಿತರೆ ಚೆನ್ನಾಗಿತ್ತು ಎಂದು ಕೆಲವರು ಹೇಳಿದರೆ, ಕಾಲೇಜು ಶಿಕ್ಷಣವೇ ಜೀವನವಲ್ಲ, ಯಶಸ್ವಿ ಬದುಕಿಗೆ ಹಲವಾರು ಮಾರ್ಗಗಳಿವೆ ಎನ್ನುವುದನ್ನು ಸಾಬೀತು ಮಾಡಿರುವವರಲ್ಲಿ ನೀವೂ ಒಬ್ಬರು ಎಂದು ಹಲವರು ದೀಪಿಕಾ  ಪರ ನಿಂತಿದ್ದಾರೆ. 

Latest Videos
Follow Us:
Download App:
  • android
  • ios