Asianet Suvarna News Asianet Suvarna News

ರಶ್ಮಿಕಾ ಮಂದಣ್ಣಗೆ ಕ್ಷಮೆ ಕೇಳಿದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್; ಕಾರಣವೇನು?

ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ನಟಿ ರಶ್ಮಿಕಾ ಮಂದಣ್ಣಗೆ ಕ್ಷಮೆ ಕೇಳಿದ್ದಾರೆ. 

David Warner apologized to Rashmika mandanna here is why sgk
Author
First Published Nov 16, 2022, 3:55 PM IST

ನಟಿ ರಶ್ಮಿಕಾ ಮಂದಣ್ಣ ಸದ್ಯ ಸೌತ್ ಮತ್ತು ಬಾಲಿವುಡ್ ಎರಡೂ ಕಡೆ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಈಗ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಅನೇಕ ಜಾಹೀರಾತಿಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾ ರಶ್ಮಿಕಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಂಡಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಸದ್ದು ಮಾಡಿತ್ತು. ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದರು. ಸದ್ಯ ಈ ಸಿನಿಮಾದ ಪಾರ್ಟ್-2 ಸಿದ್ಧವಾಗುತ್ತಿದ್ದು ರಶ್ಮಿಕಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಈ ನಡುವೆ ರಶ್ಮಿಕಾ ಮಂದಣ್ಣಗೆ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಕ್ಷಮೆ ಕೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ವಾರ್ನರ್ ಕ್ಷಮೆ ಕೇಳಿದ್ದೇಕೆ? ಅಂಥ ತಪ್ಪೇನು ಮಾಡಿದ್ದಾರೆ? ಇಲ್ಲಿದೆ ನೋಡಿ ವಿವರ. ಡೇವಿಡ್ ವಾರ್ನರ್ ಭಾರತೀಯ ಸಿನಿಮಾಗಳ ಅಭಿಮಾನಿ. ಆಗಾಗ ಭಾರತೀಯ ಸಿನಿಮಾಗಳ ಹಾಡುಗಳನ್ನು, ಡೈಲಾಗ್‌ಗಳನ್ನು ಇಮಿಟೇಟ್ ಮಾಡುತ್ತಿರುತ್ತಾರೆ. ಸಾಕಷ್ಟು ಹಾಡುಗಳಿಗೆ ಟಿಕ್ ಟಾಕ್ ಮಾಡಿದ್ದಾರೆ, ರೀಲ್ಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಅಕ್ವೀಟ್ ಆಗಿರುವ ಕ್ರಿಕೆಟರ್ ವಾರ್ನರ್. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ವಾರ್ನರ್ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. 

ಭಾರತೀಯ ಸೆಲೆಬ್ರಿಟಿಗಳ ಮುಖವನ್ನು ಮಾರ್ಫಿಂಗ್ ಮಾಡಿ ತನ್ನ ಮುಖ ಜೋಡಿಸಿ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇದೂವರೆಗೂ ಕೇವಲ ಹೀರೋಗಳ ವಿಡಿಯೋಗಳನ್ನು ಮಾತ್ರ ಮಾಡುತ್ತಿದ್ದ ವಾರ್ನರ್ ಇದೀಗ ರಶ್ಮಿಕಾ ಮಂದಣ್ಣ ವಿಡಿಯೋವನ್ನು ಮಾರ್ಫ್ ಮಾಡಿದ್ದಾರೆ.  ರಶ್ಮಿಕಾ ಮುಖಕ್ಕೆ ತಮ್ಮ ಮುಖ ಸೇರಿಸಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೇಸ್ ಆಪ್ ಮೂಲಕ ಈ ವಿಡಿಯೋ ಮಾಡಲಾಗಿದೆ. ಅಂದಹಾಗೆ ರಶ್ಮಿಕಾ ಮತ್ತು ನಿತಿನ್ ನಟನೆಯ ಭೀಷ್ಮಾ ಸಿನಿಮಾದ ಹಾಡಿಗೆ ವಾರ್ನರ್ ಮಾರ್ಫಿಂಗ್ ಮಾಡಿದ್ದಾರೆ. ಈ ಸಿನಿಮಾದ ಹಾಡಿನಲ್ಲಿನ ರಶ್ಮಿಕಾ ಮುಖವನ್ನು ಎಡಿಟ್ ಮಾಡಿ ತಮ್ಮ ಮುಖ ಸೇರಿಸಿದ್ದಾರೆ. ಸದ್ಯ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಸೋಲಿನ ಸುಳಿಯಲ್ಲಿ ಬಿದ್ದ ರಶ್ಮಿಕಾ: ಈ ವರ್ಷ ಕಿರಿಕ್ ಬೆಡಗಿ ಫ್ಲಾಪ್?

ಈ ವಿಡಿಯೋ ಶೇರ್ ಮಾಡಿದ ವಾರ್ನರ್ ಹೀಗೆ ಮಾಡಿದ್ದಕ್ಕೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಬಳಿಕ ಕಾಮೆಂಟ್ ಸೆಕ್ಷನ್‌ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಇನ್ನು ವಾರ್ನರ್ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕ್ರಿಕೆಟರ್ ಯುವರಾಜ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಾರ್ನರ್ ವಿಡಿಯೋಗೆ ರಶ್ಮಿಕಾ ಪ್ರತಿಕ್ರಿಯೆ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

Kantara; ರಶ್ಮಿಕಾ ಮಂದಣ್ಣ 'ಪುಷ್ಪ' ಚಿತ್ರದ ಕಲೆಕ್ಷನ್ ಬ್ರೇಕ್ ಮಾಡಿದ ರಿಷಬ್ ಶೆಟ್ಟಿ ಸಿನಿಮಾ

ಅಂದಹಾಗೆ ರಶ್ಮಿಕಾ ಸದ್ಯ ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ವರಿಸು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ ಪುಷ್ಪ-2ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಹಿಂದಿಯಲ್ಲಿ ಮಿಷನ್ ಮಜ್ನು ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕೊನೆಯದಾಗಿ ರಶ್ಮಿಕಾ ಗುಡ್ ಬೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಸಿಕ್ಕಿಲ್ಲ. ಸದ್ಯ ರಣಬೀರ್ ಕಪೂರ್ ಜೊತೆ ನಟಿಸುತ್ತಿದ್ದಾರೆ.  

Follow Us:
Download App:
  • android
  • ios