ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

ನಮ್ರತಾ ಶಿರೋಡ್ಕರ್ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು? ಕೆಲವರು ಮಕ್ಕಳು ಎನ್ನುತ್ತಾರೆ ಇನ್ನೂ ಕೆಲವರು ಮಹೇಶ್ ಅಂತಾರೆ...ಅಸಲಿ ಸತ್ಯವೇನು ಗೊತ್ತಾ?

Daughter Sitara was born 6 years later after Gautham says Namrata Shirodkar vcs

ಟಾಲಿವುಡ್ ಹ್ಯಾಡ್ಸಮ್ ಮಹೇಶ್ ಬಾಬು ಮತ್ತು ಪತ್ನಿ ನಮ್ರತಾ ಶಿರೋಡ್ಕರ್‌ ಮತ್ತೊಮ್ಮೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಅನ್ನೋದು ಅಭಿಮಾನಿಗಳ ಆಸೆ ಏಕೆಂದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ನಮ್ರತಾ ಸಿನಿಮಾ ರಂಗದಿಂದ ದೂರು ಉಳಿದು ಬಿಟ್ಟರು. ಅದರಲ್ಲೂ ಮಕ್ಕಳ ಎಂಟ್ರಿ ನಂತರ ಸಾಮಾಜಿಕ ಜಾಲತಾಣದಿಂದಲೂ ದೂರವಿದ್ದರು. ಇನ್‌ಸ್ಟಾಗ್ರಾಂ ಸೆಲೆಬ್ರಿಟಿಗಳಿಗೆ ಎಂದು ಫೇಮಸ್ ಆಗಿದ್ದಾಗ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟು ಅಭಿಮಾನಿಗಳ ಸಂಪರ್ಕ ಬೆಳೆಸಿಕೊಂಡರು. ಮಹೇಶ್ ಬಾಬು ಅವರಿಂದ ಸಿನಿಮಾ ಬಿಟ್ಟಿದ್ದು ಎಂದು ಕೆಲವರು ಹೇಳುತ್ತಾರೆ ಇನ್ನೂ ಕೆಲವರು ಮಕ್ಕಳಿಂದ ಎನ್ನುತ್ತಾರೆ. ಇದರ ಬಗ್ಗೆ ಸ್ವತಃ ನಮ್ರತಾ ಕ್ಲಾರಿಟಿ ಕೊಟ್ಟಿದ್ದಾರೆ. 

ಕೆಲವು ದಿನಗಳ ಹಿಂದೆ ನಿರೂಪಕಿ ಪ್ರೇಮಾ ಜೊತೆ ನಡೆದ ಸಂದರ್ಶನದಲ್ಲಿ ಸಮ್ರತಾ ಮಾತನಾಡಿದ್ದಾರೆ. 2005ರಲ್ಲಿ ಮಹೇಶ್ ಬಾಬು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮರು ವರ್ಷವೇ ಪುತ್ರ ಗೌತಮ್ ಹುಟ್ಟಿದ್ದು. ಒಬ್ಬ ಮಗನೇ ಸಾಕು ಎಂದುಕೊಂಡು ಸುಮ್ಮನಿರುವಾಗ 6 ವರ್ಷಗಳ ನಂತರ ಮಗಳು ಸಿತಾರ ಹುಟ್ಟಿದ್ದಂತೆ. ಪ್ಲ್ಯಾನ್ ಆಂಡ್ ಅನ್‌ಪ್ಲ್ಯಾನ್ಡ್‌ ಬೇಬಿ ಬಗ್ಗೆ ನಮ್ರತಾ ಮಾತನಾಡಿದ್ದಾರೆ.

'ಪರ್ಸನಲ್ ಲೈಫ್‌ನಲ್ಲಿ ಹೆಂಡತಿಯಾಗಿ ಹಾಗೂ ತಾಯಿಯಾಗಿ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿರುವುದು ಅದಕ್ಕಾಗಿ ನಾನು ಸಿನಿಮಾಗಳಿಂದೆ ದೂರ ಉಳಿದಿರುವೆ. ಸಿತಾರ ನಮಗೆ ಅನ್‌ಪ್ಲ್ಯಾನ್ಡ್‌ ಬೇಬಿ. ಮಗ ಮಾತ್ರ ಸಾಕು ಎಂದುಕೊಂಡಿದ್ದೇವು. ಆದರೆ 6 ವರ್ಷಗಳ ನಂತರ ಸಿತಾರ ಹುಟ್ಟಿದ್ದು. ಆಕೆ ಇಲ್ಲದೇ ಇದ್ದಿದ್ದರೆ ನಮ್ಮ ಜೀವನ ಸಂಪೂರ್ಣ ಅನ್ನಿಸುತ್ತಿರಲಿಲ್ಲ. ಅವಳು ನಮ್ಮ ಮನೆಯ ಬೆಳಕು, ಆಶಾ ಕಿರಣ ಮತ್ತು ಸರ್ವಸ್ವ' ಎಂದು ನಮ್ರತಾ ಹೇಳಿದ್ದಾರೆ.

Daughter Sitara was born 6 years later after Gautham says Namrata Shirodkar vcs

'ಮಗ ಗೌತಮ್ ಹುಟ್ಟಿದಾಗ ಮಾನಸಿಕವಾಗಿ ಬಹಳ ನೋವು ಅನುಭವಿಸಿದ್ದೇನೆ. ನಾವು ಮದುವೆಯಾಗಿ 8 ತಿಂಗಳಿಗೆ ಗೌತಮ್ ಹುಟ್ಟಿದ್ದು. ಆತನ ಕಂಡಿಷನ್ ಬಹಳ ಕ್ರಿಟಿಕಲ್ ಆಗಿದೆ ಎಂದು ವೈದ್ಯರು ಹೇಳಿದ್ದರು. ಆ ಸಮಯದಲ್ಲಿ ಅವನು ಬದಯಕುವುದೇ ಕಷ್ಟ ಆಗಿತ್ತು ಇಲ್ಲವೇನೋ ಎಂದು ಬಹಳ ಆತಂಕ ಎದುರಾಗಿತ್ತು. ಆದರೆ ಎನೇನೋ ಕಷ್ಟ ಎದುರಿಸಿಕೊಂಡು ಮಗನನ್ನು ಉಳಿಸಿಕೊಂಡು ಅದರಿಂದ ಹೊರ ಬಂದಿದ್ದೇವೆ' ಎಂದಿದ್ದಾರೆ ನಮ್ರತಾ. 

ಬಾಲಿವುಡ್‌ ನಟಿ ಮದುವೆಯಾಗುವ ಮುಂಚೆ ಈ ಕಂಡೀಷನ್‌ ಹಾಕಿದ್ದರು ಮಹೇಶ್‌ಬಾಬು!

ನಮ್ರತಾ ಶಿರೋಡ್ಕರ್ ಅವರು 'ಜಬ್ ಪ್ಯಾರ್ ಕಿಸಿ ಸೇ ಹೋತಾ ಹೈ' ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಟ್ವಿಂಕಲ್ ಖನ್ನಾ ಸಹ ನಟಿಸಿದ್ದಾರೆ. ಆದರೆ, ಸಿನಿಮಾ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ನಮ್ರತಾ ಅವರ ನಟನೆಯನ್ನು ಹೆಚ್ಚು ಮೆಚ್ಚಗೆ ಗಳಿಸಿತು.ಅವರಿಗೆ ಚಲನಚಿತ್ರಗಳಿಗೆ ಆಫರ್‌ಗಳು ಬರಲಾರಂಭಿಸಿದವು. ಈ ಚಿತ್ರದ ನಂತರ, ನಟಿ ತೆಲುಗು ಚಿತ್ರ ವಂಶಿಯಲ್ಲಿ ಕೆಲಸ ಮಾಡಿದರು. ಇದರಲ್ಲಿ ಮಹೇಶ್ ಬಾಬು ಮುಖ್ಯ ಭೂಮಿಕೆಯಲ್ಲಿದ್ದರು. ವಂಶಿ ಮಹೇಶ್ ಬಾಬು ಅವರ ಮೊದಲ ಸಿನಿಮಾವಾಗಿತ್ತು. ಮೊದಲ ಸಿನಿಮಾದಲ್ಲೇ ಮಹೇಶ್ ಬಾಬು ನಮ್ರತಾಗೆ ಮನಸೋತಿದ್ದರು. ನಟಿ ಮಹೇಶ್ ಬಾಬು ಅವರಿಗಿಂತ ನಾಲ್ಕು ವರ್ಷ ದೊಡ್ಡವರು. ಇದರ ಹೊರತಾಗಿಯೂ, ಮಹೇಶ್ ಬಾಬು ನಮ್ರತಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು. ಇಬ್ಬರ ಸ್ನೇಹದಿಂದ ಶುರುವಾದ ಕಥೆ ನಂತರ ಪ್ರೀತಿಗೆ ತಿರುಗಿತ್ತು.

Latest Videos
Follow Us:
Download App:
  • android
  • ios