ಬಾಲಿವುಡ್‌ ನಟಿ ಮದುವೆಯಾಗುವ ಮುಂಚೆ ಈ ಕಂಡೀಷನ್‌ ಹಾಕಿದ್ದರು ಮಹೇಶ್‌ಬಾಬು!

First Published Feb 13, 2021, 11:46 AM IST

ದಕ್ಷಿಣದ ಸೂಪರ್‌ಸ್ಟಾರ್‌ ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ಅವರ ಮ್ಯಾರೀಡ್‌ ಲೈಫ್‌ಗೆ 16 ವರ್ಷ. ಫೆಬ್ರವರಿ 10, 2005ರಂದು ಈ ಕಪಲ್‌ ರಹಸ್ಯವಾಗಿ ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ್ಯನಿವರ್ಸರಿಯ ಸಮಯದಲ್ಲಿ, ಮಹೇಶ್ ಬಾಬು ರೊಮ್ಯಾಂಟಿಕ್ ಫೋಟೋ ಜೊತೆ ಹಂಚಿಕೊಂಡು ಅವರ ಭಾವನೆಗಳನ್ನು ಹಂಚಿಕೊಂಡಿದ್ದಾರೆ  ಮತ್ತು ಶಾಶ್ವತವಾಗಿ ಒಟ್ಟಿಗೆ ಇರುವುದಾಗಿ ಭರವಸೆ ನೀಡಿದರು. ಅದೇ ಸಮಯದಲ್ಲಿ, ನಮ್ರತಾ ಇನ್ಸ್ಟಾಗ್ರಾಮ್‌ನ‌ಲ್ಲಿ ಪೋಸ್ಟ್ ಮಹೇಶ್‌ಗೆ ಚುಂಬಿಸುತ್ತಿರುವ ಪೋಟೋವನ್ನು ಶೇರ್‌ ಮಾಡಿದ್ದಾರೆ. ಸಿನಿಮಾಕ್ಕೆ ಸೇರಿದ ಈ ಇಬ್ಬರ ಲವ್‌ಸ್ಟೋರಿ ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ದಂಪತಿ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಇಲ್ಲಿದೆ ನೋಡಿ.